Big News
Trending

ವಾಹನಗಳಲ್ಲಿ ಕಣ್ಣುಕುಕ್ಕುವ ಎಲ್‌ಇಡಿ ಲೈಟ್ ಇದ್ರೆ ಹುಷಾರ್: ಬೀಳುತ್ತಿದೆ ಭಾರಿ ದಂಡ

ಅಂಕೋಲಾ: ಕೆಲವರು ಝಗಮಗಿಸುವ ಎಲ್ ಇಡಿ ಲೈಟ್ ಅಳವಡಿಸಿ ತಮ್ಮ ವಾಹನ ಚಲಾಯಿಸುವುದರಿಂದ, ಎದುರುಗಡೆ ಬರುವ ವಾಹನಗಳಿಗೂ ತೊಂದರೆಯಾಗುತ್ತದೆ., ಅಲ್ಲದೆ, ಅಪಘಾತವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಪೋಲಿಸ್ ಇಲಾಖೆ,ರಾಜ್ಯದ ಇತರೆಡೆಯಂತೆ ತಾಲೂಕಿನಲ್ಲಿಯೂ ಕಾರ್ಯಾಚರಣೆ ಆರಂಭಿಸಿದ್ದು, ಹಲವರಿಗೆ ಕಾನೂನಿನ ಬಿಸಿ ಮುಟ್ಟಿಸಿ, ಎಚ್ಚರಿಕೆ ನೀಡಿದಂತಿದೆ. ಹೆದ್ದಾರಿ ಗಸ್ತು ವಾಹನದಲ್ಲಿ ಎ ಎಸ್ ಐ ತಿಮ್ಮಪ್ಪ , ಚಾಲಕ ಸಂತೋಷ ನಾಯ್ಕ, ಪ್ರಖರ ಬೆಳಕು ಸೂಸುವ 6 ವಾಹನಗಳನ್ನು ತಡೆದು ನಿಲ್ಲಿಸಿ, ವಾಹನಕ್ಕೆ ತಲಾ ೫೦೦ ರಂತೆ ಒಟ್ಟು ರೂ.3,000 ದಂಡ ವಿಧಿಸಿದ್ದಾರೆ.

ಪ್ರತ್ಯೇಕ ಕಾರ್ಯಚರಣೆಯಲ್ಲಿ ಸಂಚಾರ ವಿಭಾಗದ ಪಿಎಸ್ಐ ಸುನೀಲ ಹುಲ್ಗೊಳ್ಳಿ ಮತ್ತು ಸಿಬ್ಬಂದಿಗಳು ಸುಮಾರು 20 ಕ್ಕೂ ಹೆಚ್ಚು ವಾಹನಗಳನ್ನು ತಡೆದು, ಅವುಗಳಲ್ಲಿ ಕಾನೂನು ಉಲ್ಲಂಘನೆ ಮಾಡಿ ಹೆಚ್ಚು ಬೆಳಕು ಹೊರತುಸುವ ಎಲ್ ಇ ಡಿ ದೀಪ ಅಳವಡಿಸಿದ 7-8 ವಾಹನಗಳಿಗೆ ದಂಡ ವಿಧಿಸಿ, ಕಾನೂನಿನ ಬಿಸಿ ಮುಟ್ಟಿಸಿದ್ದಾರೆ ಎನ್ನಲಾಗಿದೆ. ಒಟ್ಟಾರೆಯಾಗಿ ದಿನ ಒಂದರಲ್ಲಿಯೇ ಅಂಕೋಲಾ ತಾಲೂಕಿನಲ್ಲಿ ಸುಮಾರು 14 ಪ್ರಕರಣಗಳನ್ನು ದಾಖಲಿಸಿರುವ ಖಾಕಿ ಪಡೆ,ಮತ್ತಷ್ಟು ಕಾರ್ಯಾಚರಣೆ ನಡೆಸುವ ಸೂಚನೆ ನೀಡಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button