Follow Us On

WhatsApp Group
Important
Trending

ಮಕ್ಕಳನ್ನು ನೋಡಿ ಬರುವುದಾಗಿ ಹೇಳಿ ಹೋದ ವಿವಾಹಿತ ಮಹಿಳೆ ಕಾಣೆ: ದೂರಿನಲ್ಲಿ ಏನಿದೆ ?

ಅಂಕೋಲಾ: ತಾಲೂಕಿನಲ್ಲಿ ಬೇರೊಬ್ಬರ ಮನೆಕೆಲಸಕ್ಕೆ ಇದ್ದ, ವಿವಾಹಿತ ಮಹಿಳೆಯೊಬ್ಬಳು, ತನ್ನ ಗಂಡ ಮತ್ತು ಮಕ್ಕಳನ್ನು ನೋಡಿ ಬರುತ್ತೇನೆ ಎಂದು ಹೋದವಳು, ಗಂಡನ ಮನೆಗೂ ಹೋಗದೇ, ಅಂಕೋಲಾಕ್ಕೂ ವಾಪಸ್ಸಾಗದೇ ಎಲ್ಲಿಯೋ ಹೋಗಿದ್ದು,ಕಾಣೆಯಾದ ತನ್ನ ಪತ್ನಿಯನ್ನು ಹುಡುಕಿ ಕೊಡುವಂತೆ,ಆಕೆಯ ಪತಿ ಪೊಲೀಸ್ ದೂರು ನೀಡಿದ್ದಾರೆ. ಮುರ್ಡೇಶ್ವರ ಮೂಲದ ರಜೀಯಾ ಬೇಗಂ (31 ) ಎಂಬಾಕೆಯೇ
ಕಾಣೆಯಾದ ವಿವಾಹಿತ ಮಹಿಳೆಯಾಗಿದ್ದಾಳೆ.

ಅಂಕೋಲಾ ತಾಲೂಕಿನ ಗುಡಿಗಾರಗಲ್ಲಿಯಲ್ಲಿನ ಸಮೀರ ಮೊಹಿದಿನ್ ಶೇಖ್ ಎಂಬುವವರ ಮನೆಗೆಲಸ ಮಾಡಿಕೊಂಡಿದ್ದವಳು, ಜುಲೈ 3 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮುರ್ಡೇಶ್ವರದಲ್ಲಿರುವ ತನ್ನ ಗಂಡ ಮತ್ತು ಮಕ್ಕಳನ್ನು ನೋಡಿ ಬರುವುದಾಗಿ ಹೇಳಿ ಹೋದವಳು,ಅತ್ತ ಮುರುಡೇಶ್ವರಕ್ಕೆ ಹೋಗದೇ,ಇತ್ತ ಅಂಕೋಲಾಕ್ಕೂ ವಾಪಸ್ ಆಗದೆ,ನನ್ನ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿಯನ್ನು ನೀಡದೇ ಕಾಣೆಯಾಗಿದ್ದಾಳೆ,

ಕಾಣೆಯಾದ ತನ್ನ ಹೆಂಡತಿಗೆ,ಪರಿಚಯಸ್ಥರಲ್ಲಿ,ಸಂಬಂಧಿಕರಲ್ಲಿ ವಿಚಾರಿಸಿದರೂ ಸಿಗದೇ ಇದ್ದಾಗ, ಈ ಕುರಿತು ಕಾಣೆಯಾದ ಮಹಿಳೆಯ ಗಂಡ ಭಟ್ಕಳ ತಾಲೂಕಿನ ಮುರ್ಡೇಶ್ವರದ ಗೋಶಾ ಮೊಹಲ್ಲಾ ನಿವಾಸಿ ಮುಸ್ತಕಿನ್ ಶೇಖ್ ತಂದೆ ಜವುರಶೇಖ ದಿನಾಂಕ 06 ಜುಲೈ 2024 ರಂದು
ಅಂಕೋಲಾ ಪೊಲೀಸ್ ಠಾಣೆಗೆ ಹಾಜರಾಗಿ,ಲಿಖಿತ ದೂರು ನೀಡಿ,ಕಾಣೆಯಾದ ತನ್ನ ಹೆಂಡತಿಯನ್ನು ಹುಡುಕಿ ಕೊಡುವಂತೆ ವಿನಂತಿಸಿಕೊಂಡಿದ್ದಾರೆ,

ಅಂದಾಜು 5 ಪೂಟ್ 3ಇಂಚು ಎತ್ತರ, ಎಣ್ಣೆಗೆಂಪು ಮೈ ಬಣ್ಣ, ಗೋಲು ಮುಖ, ತೆಳ್ಳಗಿನ ಮೈಕಟ್ಟು, ಕಪ್ಪು ತಲೆಗೂದಲು ಹೊಂದಿರುವ ಈ ಮಹಿಳೆ, ಬೊಜಪುರಿ ಹಿಂದಿ ಭಾಷೆ ಅರಿತಿದ್ದು, ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಟಾಪ್, ಬಿಳಿ ಬಣ್ಣದ ಚೂಡಿದಾರ, ಕಪ್ಪು ಬಣ್ಣದ ಬುರಕಾ ಧರಿಸಿದ್ದು,ಈ ಮೇಲಿನ ಚಹರೆಯುಳ್ಳ ರಜೀಯಾ ಬೇಗಂ ಎಲ್ಲಿಯಾದರೂ ಕಂಡು ಬಂದಲ್ಲಿ,ಅಥವಾ ಈ ಕುರಿತು ಏನಾದರೂ ಮಾಹಿತಿ ಇದ್ದಲ್ಲಿ ಅಂಕೋಲಾ ಪೊಲೀಸ್ ಠಾಣೆ (9480805250/9480805268) ಇಲ್ಲವೇ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಲು ಅಂಕೋಲಾ ಪೋಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button