Focus News
Trending

ವಿಜಯಕುಮಾರ ನಾಯ್ಕಗೆ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ

ಅಂಕೋಲಾ : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು (ರಿ), ಬೆಂಗಳೂರು ಇವರು ಕೊಡ ಮಾಡುವ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿಗೆ, ಉತ್ತರ ಕನ್ನಡ ಜಿಲ್ಲೆಯಿಂದ ಅಂಕೋಲಾದ ವಿಜಯ ಕುಮಾರ ಯಶವಂತ ನಾಯ್ಕ ಇವರನ್ನು ಆಯ್ಕೆಮಾಡಲಾಗಿದೆ. ತಾಲೂಕಿನ ಕನಸಿಗದ್ದೆಯ ಸಾಮಾಜಿಕ ಕಾರ್ಯಕರ್ತರಾಗಿರುವ ವಿಜಯ ಕುಮಾರ ನಾಯ್ಕ,ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ಗುರುತಿಸಿಕೊಂಡಿದ್ದು,ಈಗಾಗಲೇ ತಮ್ಮ ಸಮಾಜ ಸೇವೆ ಹಾಗೂ ಮತ್ತಿತರ ರಂಗಗಳ ಸಾಧನೆಗೆ,ಮುಖ್ಯಮಂತ್ರಿಗಳ ಬಂಗಾರದ ಪದಕ,ಜೀವ ರಕ್ಷಕ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿ- ಪುರಸ್ಕಾರ, ಸನ್ಮಾನ ಗೌರವಗಳನ್ನು ಪಡೆದುಕೊಂಡಿದ್ದು, ಈದೀಗ ಡಾ ಹುಲಿಕಲ್ ನಟರಾಜ ಸಂಸ್ಥಾಪಕ ಅಧ್ಯಕ್ಷರಾಗಿರುವ,ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತನ ಕಾಯಕ ರತ್ನ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.

ಜುಲೈ 13 ರ ಶನಿವಾರ, ಬೀದರನ ಚನ್ನಬಸಪ್ಪ ಪಟ್ಟದೇವರ ರಂಗಮಂದಿರದ ಪ್ರಶಸ್ತಿ ಪ್ರಧಾನ ನಡೆಯಲಿದ್ದು, ರಾಜ್ಯದ ಅರಣ್ಯಜೈವಿಕ ಮತ್ತು ಪರಿಸರ ಖಾತೆ ಸಚಿವ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇಸ್ರೋದ ಮಾಜಿ ಅಧ್ಯಕ್ಷರು, ಇತರೆ ಮಂತ್ರಿ ಮಹೋದಯರು, ಶಾಸಕರು, ವಿಜ್ಞಾನ, ಶಿಕ್ಷಣ, ಧಾರ್ಮಿಕ ಮತ್ತಿತರ ಕ್ಷೇತ್ರಗಳ ಮುಖಂಡರು ಉಪಸ್ಥಿತರಿರಲಿದ್ದು , ಹೆಸರಾಂತ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button