Follow Us On

WhatsApp Group
Important
Trending

ಮಳೆ ಬಂದ್ರೆ ಸಾಕು ಹಳ್ಳದಂತಾಗುವ ರಸ್ತೆ: ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಮತ್ತು ಅಧಿಕಾರಿಗಳು

ಕುಮಟಾ: ಎಡೆಬಿಡದೇ ಸುರಿದ ಮಳೆಯಿಂದಾಗಿ ಕುಮಟಾ ಹೆಗಡೆ ರಸ್ತೆಯು ಹಳಕಾರ ಕ್ರಾಸ್ ಬಳಿ ರಸ್ತೆ ಸಂಪೂರ್ಣ ಜಲಾವೃತವಾಗಿ ವಾಹನಗಳ ಓಡಾಟಕ್ಕೆ ಹಾಗೂ ಜನರ ಓಡಾಟಕ್ಕೆ ತುಂಬಾನೇ ತೊಂದರೆಯಾಗಿತ್ತು. ಹಳಕಾರ ಅರಣ್ಯಪ್ರದೇಶದಿಂದ ಬರುವ ನೀರೆಲ್ಲ ರಸ್ತೆಗೆ ಬಂದು ಗಟಾರಗಳು ತುಂಬಿ ಸುತ್ತಲಿನ ಮನೆಗಳ ಕಂಪೌoಡಗಳ ಒಳಗೆ ನುಗ್ಗಿತ್ತು. ಕೆಲವು ಮನೆಗಳ ಸುತ್ತಲೂ ನೀರು ಆವರಿಸಿದ್ದು ನಿವಾಸಿಗಳ ಆತಂಕಗೊoಡಿದ್ದರು.

ವಿವೇಕನಗರದ ಐದನೇಯ ಅಡ್ಡ ರಸ್ತೆ ಯಿಂದ ಮನೆಗಳಿಗೆ ಹೋಗುವ ಪೂರ್ತೀ ರಸ್ತೆಯಲ್ಲಿ ನೀರಿನ ಹೊಳೆ ಹರಿದು, ನಿವಾಸಿಗಳ ಓಡಾಟಕ್ಕೆ ತುಂಬಾನೇ ತೊಂದರೆಯಾಗಿತ್ತು.ಇಲ್ಲಿನ ಈ ಸ್ಥಿತಿಗತಿಯ ಕುರಿತು ಸ್ಥಳಿಕರು ಶಾಸಕರನ್ನು ಸಂಪರ್ಕಿಸಿ ವಿವರಿಸಿದಾಗ ಶಾಸಕ ದಿನಕರ ಶೆಟ್ಟಿ ಅವರು ಪುರಸಭಾ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಪುರಸಭಾ ಮುಖ್ಯ ಆರೋಗ್ಯಾಧಿಕಾರಿ ವೀಣಾ ಕಾರವಾರ ಮತ್ತು ಪೌರ ಕಾರ್ಮಿಕರ ತಂಡದೊoದಿಗೆ ಅರ್ಧ ಘಂಟೆಯೊಳಗಾಗಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಸ್ವತಃ ವೀಕ್ಷಿಸಿದರು. ಅಗತ್ಯ ತಾತ್ಕಾಲಿಕ ಕ್ರಮಕೈಕೊಳ್ಳಲು ಮುಖ್ಯಾಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರಲ್ಲದೇ ಪೌರಕಾರ್ಮಿಕರಿಗೆ ಸ್ವತಃ ಸೂಕ್ತ ಮಾರ್ಗದರ್ಶನ ನೀಡಿದರು.

ಪ್ರತೀ ಮಳೆಗಾಲದಲ್ಲಿಯೂ ಇದೇ ತೆರನಾಗಿ ತೊಂದರೆ ಅನುಭವಿಸುತ್ತಿದ್ದೇವೆ ಎಂಬ ಸ್ಥಳಿಕರ ನಿವೇದನೆಗೆ ಶಾಸಕರು ಸ್ಪಂದಿಸಿ ಈ ತೊಂದರೆಗೆ ಶಾಶ್ವತ ಪರಿಹಾರ ಕ್ರಮಗಳ ಕುರಿತು ಪುರಸಭಾ ಮುಖ್ಯಾಧಿಕಾರಿ ಹಾಗೂ ಇಂಜನಿಯರುಗಳೊoದಿಗೆ ಚರ್ಚಿಸಿದರು. ಸೂಕ್ತ ಯೋಜನೆಯೊಂದನ್ನು ರೂಪಿಸಿ ಶಾಶ್ವತ ಕ್ರಮ ಕೈಕೊಳ್ಳುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಮ್.ಜಿ.ನಾಯ್ಕ,ಗೌತಮ ಜಿ.ಭಟ್ಟ, ದಿವಾಕರ ನಾಯ್ಕ,ದತ್ತಾತ್ರೇಯ ಭಟ್ಟ,ಗೀತಾ ದೇವಳಿ,ಜಯದೇವ ಬಳಗಂಡಿ ಸೇರಿದಂತೆ ಸ್ಥಳೀಯ ನಿವಾಸಿಗಳು ಹಾಜರಿದ್ದರು. ಶಾಸಕರ ತ್ವರಿತ ಸ್ಪಂದನೆಗೆ ವಿವೇಕನಗರ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಯದೇವ ಬಳಗಂಡಿ, ವಿಸ್ಮಯ ನ್ಯೂಸ್, ಕುಮಟಾ

Back to top button