Important
Trending

ಸಂಭ್ರಮದಿಂದ ನಡೆದ ಮಂಜಗುಣಿ ತಾರಿಜಟಕ ದೇವರ ಹಬ್ಬನದಿ ಪಾತ್ರದಲ್ಲಿ ನೆಲೆನಿಂತು ಭಕ್ತರ ಕಾಯುವ ಶ್ರೀ ದೈವ

ಅಂಕೋಲಾ : ತಾಲೂಕಿನ ಮಂಜಗುಣಿಯಲ್ಲಿ ಶ್ರೀ ತಾರಿಜಟಕ ದೇವರ ಅವಾರಿ ಹಬ್ಬವು ಬುಧವಾರ ಅತ್ಯಂತ ಸಡಗರ ಸಂಭ್ರಮದಿಂದ ಸಂಪನ್ನಗೊಂಡಿತು. ಮಂಜಗುಣಿ,ಹೊನ್ನೆಬೈಲ್ ಗಂಗಾವಳಿ, ನಾಡುಮಾಸ್ಕೇರಿ ಹಾಗೂ ಸುತ್ತಮುತ್ತಲ ಹತ್ತಾರು ಹಳ್ಳಿ ಹಾಗೂ ಅಂಕೋಲಾ ಪಟ್ಟಣ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಶ್ರೀ ದೇವರ ಮತ್ತಿತರ ದೇವರ ದರ್ಶನ ಪಡೆದರು.

ಈ ಹಿಂದೆ
ಮಂಜಗುಣಿ-ಗಂಗಾವಳಿ ನಡುವೆ ಬೋಟ್ ವ್ಯವಸ್ಥೆ ಇಲ್ಲದಿರುವುದರಿಂದ, ದೋಣಿಗಳು ಮಳೆಗಾಲದಲ್ಲಿ ನೀರಿನ ಸೆಳೆತಕ್ಕೆ ಹಾಗೂ ಅಲೆಗಳ ಅರ್ಭಟಕ್ಕೆ ಅಪಾಯದ ಅಂಚಿನಲ್ಲಿ ಸಿಲುಕುವ ಸಾಧ್ಯತೆ ಇಂದ, ಅಂತಹ ಸಂದರ್ಭದಲ್ಲಿ ದಿನನಿತ್ಯ ದೋಣಿ ಮೂಲಕ ಸಂಚರಿಸುವವರು, ಹಾಗೂ ಇತರೆ ಕಾರಣಗಳಿಂದಲೂ ಸ್ಥಳೀಯ ಭಕ್ತರು, ತಮ್ಮ ಆರಾಧ್ಯ ದೈವವಾದ ತಾರಿಜಟಕ ದೇವರಿಗೆ, ಹಬ್ಬದಂದು ಪೂಜೆ ಸಲ್ಲಿಸುವ ಹರಕೆಯನ್ನು ಹಲವು ಭಕ್ತರು ಹೊತ್ತಿರುತ್ತಿದ್ದರು.

ಹೀಗಾಗಿ ಗೋಕರ್ಣ ಭಾಗದ ಹಲವು ಗ್ರಾಮಗಳು, ಅಂಕೋಲಾ ಗ್ರಾಮದ ಕೆಲವು ಜನರು ಪ್ರತಿವರ್ಷ ಈ ಹಬ್ಬದಂದು ಇಲ್ಲಿಗೆ ಆಗಮಿಸಿ ಹರಕೆಯನ್ನು ತೀರಿಸುತ್ತಿದ್ದರು. ಇಂದಿಗೂ ಸಾವಿರಾರು ಜನ ಆಗಮಿಸಿ ಶ್ರೀ ದೇವರನ್ನು ಪೂಜಿಸಿ ತಮ್ಮ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸುವ ಸಂಪ್ರದಾಯ ಮುಂದುವರೆದಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button