ಭಟ್ಕಳ: ದಕ್ಷಿಣಾಯಣದ ಆಷಾಡ ಮಾಸದ ಏಕಾದಶಿಯಿಂದ ಕಾರ್ತಿಕ ಮಾಸದ ದ್ವಾದಶಿಯಯವರೆಗಿನ ನಾಲ್ಕು ಮಾಸಗಳು ಚಾತುರ್ಮಾಸ್ಯ ವೃತಾಚರಣೆಯ ಪುಣ್ಯ ಕಾಲವಾಗಿದ್ದು. ಈ ಸಂದರ್ಭದಲ್ಲಿ ಭಗವಂತನು ಯೋಗನಿದ್ರೆಗೆ ಜಾರುವ ಕಾರಣ ಭೂಲೋಕದಲ್ಲಿ ಯಾವುದೇ ರೀತಿಯ ಶುಭ ಕಾರ್ಯಗಳನ್ನು ಅಂದರೆ ಉಪನಯನ, ಮದುವೆ ಗ್ರಹಪ್ರವೇಶದಂತಹ ಸಮಾರಂಭಗಳನ್ನು ನಡೆಸಲಾಗುವುದಿಲ್ಲ. ಈ ಕಾಲದಲ್ಲಿ ನಡೆಸುವ ಶುಭಕಾರ್ಯಕ್ಕೆ ಪರಮಾತ್ಮನ ಸಂಪೂರ್ಣ ಅನುಗ್ರವಿರುವುದಿಲ್ಲ ಎಂಬುದು ಶಾಸ್ತ್ರದ ನಂಬಿಕೆ.
ಸಾಮಾನ್ಯವಾಗಿ ಸಾಧು ಸಂತರುಗಳು ಪರಿವ್ರಾಜಕರಾಗಿದ್ದು ನಿತ್ಯ ಸಂಚಾರವನ್ನು ಕೈಗೊಳ್ಳುತ್ತಾರೆ ಯಾಕೆಂದರೆ ಯಾವುದೇ ಒಂದು ಪ್ರದೇಶದ ವ್ಯಾಮೋಹಕ್ಕೆ ಸಾಧು ಸಂತರಾದವರು ಒಳಗಾಗಬಾರದು ಎನ್ನುವುದ ಇದರ ಘನ ಉದ್ದೇಶ. ಚಾತುರ್ಮಾಸದ ಸಂದರ್ಭದಲ್ಲಿ ವರ್ಷಧಾರೆ ಸುರಿಯ ಕಾಲಮಾನವಾಗಿದ್ದು ಕ್ರಿಮಿ ಕೀಟಗಳು ಜಂತುಗಳು ಭೂಮಿಯ ಮೇಲೆಳುತ್ತದೆ.
ಹುಲುಮಾನವರಿಗೆ ನಗಣ್ಯವಾಗಿರುವ ಈ ವಿಚಾರ, ಸಕಲ ಚರಾಚರಗಳನ್ನು ಏಕರೀತಿಯಲ್ಲಿ ನೋಡುವ ಸಂತರಿಗೆ ತಾವು ನಡೆದಾಡುವುದರಿಂದ ಯಾವುದೇ ರೀತಿಯ ಹಿಂಸೆಯನ್ನು ಆ ಜೀವಿಗಳು ಅನುಭವಿಸಬಾರದೆಂಬ ನೆಲೆಗಟ್ಟಿನ ಯೋಚನೆ ಕೂಡ ಇಲ್ಲಿ ಗಮನಾರ್ಹವಾಗಿದೆ. ಹಾಗೂ ಚಾತುರ್ಮಾಸ್ಯ ಸಂದರ್ಭದಲ್ಲಿ ಮಾಡುವ ಪೂಜೆ ಪುರಸ್ಕಾರಗಳು, ಭಜನೆ ಕಿರ್ತನೆಗಳು, ಹರಿನಾಮಸ್ಮರಣೆಗಳು ಇನ್ನೂಳಿದ ಕಾಲದಲ್ಲಿ ಮಾಡುವ ವೃತಾರಣೆಗಳಿಗಿಂತ ಹೆಚ್ಚು ಫಲವನ್ನು ಕೊಡುತ್ತದೆ.
ಇಂತಹ ಚಾತುರ್ಮಾಸ್ಯದ ಪರ್ವಕಾಲಕ್ಕೆ ಇದೀಗೆ ನಮ್ಮ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕರಿಕಲ್ ಗ್ರಾಮದಲ್ಲಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಜುಲೈ 21 ರಿಂದ ಅಗಷ್ಟ್ 30 ರ ವರೆಗೆ ಲೋಕಕಣ್ಯಾರ್ಥದ ಹಿನ್ನೆಲೆಯಲ್ಲಿ ಚಾತುರ್ಮಾಸ್ಯ ವೃತಾಚರಣೆಯನ್ನು ಕೈಗೊಳ್ಳುತ್ತಿದ್ದು. ಇದರ ಪೂರ್ವಭಾವಿ ಕೆಲಸಗಳೆಲ್ಲವೂ ಮುಗಿದು ಇದೀಗ ಈ ಪುಣ್ಯದ ಗಳಿಗೆಗೆ ಸಾಕ್ಷಿಕರಿಸಲು ಸಂಪೂರ್ಣ ಪ್ರದೇಶವು ಸಜ್ಜಾಗಿ ನಿಂತಿದೆ.
ಕಾರ್ಯಕ್ರಮದ ಭಾಗವಾಗಿ ಜುಲೈ 21 ಗುರುಪೌರ್ಣಮಿಯ ದಿನದಂದು ಮಹಾಗುರುಗಳ ಪುರಪ್ರವೇಶ ಕಾರ್ಯಕ್ರಮವು ನಡೆಯುತ್ತಿದ್ದು, ಬೆಳಿಗ್ಗೆ 10:30 ಕ್ಕೆ ಆಸಕೇರಿಯ ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಿಂದ ಬ್ರಹತ್ ಮೆರವಣಿಗೆಯ ಮೂಲಕ ಶ್ರೀಗುರುಗಳನ್ನು
ಭವ್ಯ ಮೆರವಣಿಗೆಯ ಮೂಲಕ ರಥದಲ್ಲಿ ಆಸರಕೇರಿಯಿಂದ ಸೋನಾರಕೇರಿ ಮಾರ್ಗವಾಗಿ, ನಗರ ಪೋಲೀಸ್ ಠಾಣೆಯ ಮುಂಭಾಗದ ರಸ್ತೆಯ ಮೂಲಕ ಪಿ ಎಲ್ ಡಿ ಬ್ಯಾಂಕ್ ಎದುರಿನ ಮಾರ್ಗವಾಗಿ, ಭಟ್ಕಳದ ಮುಖ್ಯವೃತ್ತ ತಲುಪಿ, ಅಲ್ಲಿಂದ ಬಂದರ್ ರೋಡ್ ಮಾರ್ಗವಾಗಿ, ಮುಂದುವರೆದು ಹನುಮಾನ್ ನಗರದ ಮಾರ್ಗವಾಗಿ, ಕರಿಕಲ್ ನ ಧ್ಯಾನ ಮಂದಿರಕ್ಕೆ ಕರೆತರಲಾಗುತ್ತದೆ.
ಅಂದು ಕರಿಕಲ್ ನ ಧ್ಯಾನಮಂದಿರದಲ್ಲಿ ಶ್ರೀರಾಮ ದೇವರಿಗೆ ವಿಶೇಷ ಪೂಜೆ, ಶ್ರೀಗಳ ಗುರುಪೌರ್ಣಮಿಯ ವಿಶೇಷ ವ್ಯಾಸಪೀಠಾರೋಹಣ , ಗುರು ಪಾದುಕಾ ಪೂಜೆ, ಆಶಿರ್ವಚನ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ, ಸಚಿವ ಮಂಕಾಳ ಎಸ್ ವೈದ್ಯ ಸೇರಿದಂತೆ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ ರಾಘವೇಂದ್ರ, ಶ್ರೀನಿವಾಸ ಪೂಜಾರಿ, ಬ್ರಿಜೇಶ್ ಚೌಟ ಮತ್ತಿತರರು ಹಾಜರಾಗಲಿದ್ದಾರೆ.
ಚಾತುರ್ಮಾಸದ ಪರ್ವಕಾಲದಲ್ಲಿ ಅನುದಿನವು ಭಜನೆ, ಪಾದುಕಾ ಪೂಜೆ, ಯಕ್ಷಗಾನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ದಿನದ ನಾಲ್ಕು ಹೊತ್ತು ಊಟ ಉಪಹಾರಗಳು ನಡೆಯಲ್ಲಿದ್ದು. ಇಂತಹ ಪುಣ್ಯ ಕಾರ್ಯದಲ್ಲಿ ಜಾತಿ ಮತ ಪಂಥವನ್ನು ಮೀರಿ ಎಲ್ಲಾ ಸಮಾಜದವರು ಇಂತಹ ಪುಣ್ಯೋತ್ತಮ ಕಾರ್ಯಕ್ರಮದಲ್ಲಿ ಹಾಜರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಲು ಶ್ರೀ ಗುರುಗಳು ಜುಲೈ 19 ರಂದು ನಡೆದ ಪತ್ರಿಕಾಗೊಷ್ಠಿಯಲ್ಲಿ ತಿಳಿದ್ದಾರೆ.
ಒಂದು ಸಂದರ್ಭದಲ್ಲಿ ನಾರದ ಮುನಿಗಳು ಹೇಳುತ್ತಾರೆ ತಾನು ಪೂರ್ವಜನ್ಮದಲ್ಲಿ ಒಬ್ಬ ದಾಸಿಯ ಪುತ್ರನಾಗಿದ್ದು ಬಾಲಕನಿದ್ದಾಗ ತನ್ನ ತಾಯಿ ಕೆಲಸ ಮಾಡುವ ಧನಿಕನ ಮನೆಯಲ್ಲಿ ಮಹಾಗುರುಗಳೊಬ್ಬರು ಚಾತುರ್ಮಾಸದ ವೃತಚರಣೆ ಕೈಗೊಂಡಿದ್ದರಂತೆ ಆ ಸಮಯದಲ್ಲಿ ಬಾಲಕ ನಾರದ ಪರಿಸರವನ್ನು ಸ್ವಚ್ಛವಾಗಿಡುವುದು, ಊಟದ ನಂತರ ಬಾಳೆ ಎಲೆ ತೆಗೆಯುವುದು ಮುಂತಾದ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಗುರುಗಳ ಅನುಗ್ರಹಕ್ಕೆ ಒಳಗಾದನಂತೆ .ಅದರ ಫಲವಾಗಿ ನಾರದರಿಗೆ ಮುಂದಿನ ಜನ್ಮದಲ್ಲಿ ನಾರದಮುನಿಯ ಸ್ಥಾನಮಾನ ದಕ್ಕಿತು ಎನ್ನುವ ಉಪಕತೆಗಳನ್ನು ಆಚಾರ್ಯರು ಅರಹುತ್ತಾರೆ.
ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ