ಶಿರೂರು ಗುಡ್ಡ ಕುಸಿತ ದುರಂತ: ನಾಪತ್ತೆಯಾದವರ ಶೋಧ ಎಂದು ? ಎಲ್ಲರ ಜೀವವೂ ಅತ್ಯಮೂಲ್ಯ

ಮಾನವೀಯತೆಗೆ ಜಾತಿ- ಧರ್ಮ, ಗಡಿ ಪ್ರಾಂತದ ಚೌಕಟ್ಟು ಬಾರದಿರಲಿ

ಅಂಕೋಲಾ : ಶಿರೂರು ಗುಡ್ದ ಕುಸಿತದ ಭೀಕರ ದುರಂತದಲ್ಲಿ, ನಾಪತ್ತೆಯಾದವರ ಶೋಧ ಕಾರ್ಯಾಚರಣೆ 7 ನೇ ದಿನವೂ ಮುಂದುವರೆದಿದೆ. ಈ ವೇಳೆ ನಾಪತ್ತೆ ಯಾಗಿರುವವರೆಲ್ಲ ನಮ್ಮವರು, ನಮ್ಮದೇ ದೇಶವಾಸಿಗಳು ಅವೆಲ್ಲಕ್ಕಿಂತ ಮುಖ್ಯವಾಗಿ ಈ ದುರ್ಘಟನೆಯಲ್ಲಿ ಒಂದೊಮ್ಮೆ ವಿದೇಶಿಯರೂ ಸಿಲುಕಿಕೊಂಡಿದ್ದರೂ ,ಅವರ ರಕ್ಷಣೆಗೆ ಮುಂದಾಗ ಬೇಕಿರುವುದು,ಅದು ಮಾನವೀಯ ಧರ್ಮ, ಈ ಮಾನವೀಯ ಧರ್ಮಕ್ಕೆ,ಜಾತಿ,ಧರ್ಮ,ರಾಜ್ಯ ದೇಶದ ಗಡಿ ಚೌಕಟ್ಟನ್ನು ಹಾಕುವುದು ತರವಲ್ಲ. ಹೀಗಿದ್ದೂ ಕೇರಳದಿಂದ ನಾಪತ್ತೆಯಾಗಿರುವ ಅರ್ಜುನ ಎನ್ನುವ ವ್ಯಕ್ತಿಯ ಶೋಧ ಕಾರ್ಯಾಚರಣೆಗೆ ಬಗ್ಗೆ ಎಷ್ಟು ಹೆಚ್ಚಿನ ಗಮನಹರಿಸಲಾಗುತ್ತಿದೆಯೋ, ಅದೇ ರೀತಿ ಉಳುವರೇ ಭಾಗದಿಂದ ಕೊಚ್ಚಿ ಹೋಗಿದ್ದ ಸಣ್ಣಿ ಹನುಮಂತ ಗೌಡ,ಹೋಟೆಲ್ ನಲ್ಲಿ ಸಹಾಯಕನಾಗಿದ್ದ ಜಗನ್ನಾಥ ಜಟ್ಟಿ ನಾಯ್ಕ ,ಹಾಗೂ ಕಾಣೆಯಾಗಿರಬಹುದಾದ ಇತರರ ಜೀವವು ಅತ್ಯಮೂಲ್ಯವಾಗಿದೆ.

ಗೋಕರ್ಣ ಗಂಗೆ ಕೊಳ್ಳ ಮೂಲದ ಲೋಕೇಶ ನಾಯ್ಕ ಸಹ ಇದೇ ಘಟನಾ ಸ್ಥಳದಿಂದ ಕಣ್ಮರೆಯಾಗಿರುವ ಶಂಕೆ ಇದ್ದು, ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿದೆ. ಅರ್ಜುನ್ ಸಹಿತ ನಾಪತ್ತೆಯಾದ ಇತರರ ಕುಟುಂಬದವರು ತಮ್ಮ ತಮ್ಮ ಮನೆಯ ಸದಸ್ಯರು ಈಗ ಸಿಕ್ಕಾರು, ಆಗ ಬಂದಾರೂ ಎನ್ನುತ್ತಾ ಕಾಯುತ್ತಿದ್ದಾರೆ. ರಾಜಕೀಯ ಮತ್ತು ಕೆಲ ಸ್ವಾರ್ಥ ಬಿಟ್ಟು, ನೌಕಾನೆಲೆ, ಮಿಲಿಟರಿ, ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ ಮತ್ತಿತರ ರಕ್ಷಣಾ ತಂಡಗಳ ಪೂರ್ಣ ಪ್ರಮಾಣದ ಕಾರ್ಯಚರಣೆಗೆ ಎಲ್ಲರೂ ಸಹಕಾರ ನೀಡಬೇಕು ಮತ್ತು ಹೊಟೇಲ ಅಕ್ಕ ಪಕ್ಕದ ಹಾಗೂ ನದಿಯಲ್ಲಿ ರಾಶಿ ರಾಶಿ ಆಗಿ ಬಿದ್ದಿರುವ ಮಣ್ಣಿನಡಿಯೂ ಮೌಂಟೆಂಡ್ ಬಾರ್ಜ ಬಳಸಿ ಮತ್ತಿತರ ರೀತಿಯ ಪರಿಕರ ಹಾಗೂ ಆಧುನಿಕ ತಂತ್ರಜ್ಞಾನ ಬಳಸಿ ಆದಷ್ಟು ಶೀಘ್ರ ಅವರ ಶೋಧ ಕಾರ್ಯ ನಡೆದು, ಆ ಮೂಲಕ ನೊಂದ ಕುಟುಂಬಸ್ಥರಿಗೆ ಕೊಂಚವಾದರೂ ಸಮಾಧಾನವಾಗುವಂತಾಗಲಿ ಎನ್ನುವುದು, ಮಾನವೀಯ ಹೃದಯವಂತರ ಆಶಯವಾಗಿದೆ.

ಜೊತೆ ಜೊತೆಯಲ್ಲಿ ರಾಜಕಾರಣಿಗಳು ಯಾರೆಲ್ಲ ಬಂದು ಹೋದರು ಎನ್ನುವುದಕ್ಕಿಂತ ಯಾರಿಂದ ಏನೆಲ್ಲಾ ನೆರವು ದೊರೆತಿದೆ. ಉಳುವರೆಯಲ್ಲಿ ಮನೆ ಮಠ ಕಳೆದುಕೊಂಡ, ಹಾಗೂ ಶಿರೂರು ದುರಂತದಲ್ಲಿ ಆಘಾತಗೊಂಡಿರುವ ಎಲ್ಲ ಕುಟುಂಬಗಳಿಗೆ ಕನ್ನಡಿಗರು ಸೇರಿದಂತೆ ಇತರೆ ಮಾನವೀಯ ಹೃದಯವಂತರು, ನೊಂದ ಕುಟುಂಬಗಳು ನೋವು ಮರೆತು ಹೊಸ ಬದುಕು ಕಟ್ಟಿಕೊಳ್ಳಲು , ನೆರವಿನ ಮಹಾಪುರ ಹರಿದು ಬರಬೇಕಿದೆ .

ವಿಸ್ಮಯ ನ್ಯೂಸ ವಿಲಾಸ ನಾಯಕ ಅಂಕೋಲಾ

Exit mobile version