ಮನೆ ಮೇಲೆ ಮರ ಬಿದ್ದು ತೀವ್ರ ಹಾನಿ : ಪುಟಾಣಿ ಮಗು, ಬಾಣಂತಿ ತಾಯಿ  ಸೇರಿ ಮನೆಮಂದಿಗೆಲ್ಲ ಗಾಯ ನೋವು

ರಸ್ತೆಗೆ  ಮರ ಅಡ್ದಲಾಗಿ  ಬಿದ್ದು  ಸಂಚಾರ ವ್ಯತ್ಯಯ

ಅಂಕೋಲಾ: ತಾಲೂಕಿನಲ್ಲಿ  ಮಳೆಯ ಆವಾಂತರ ಮುಂದುವರಿದಿದ್ದು, ಸೋಮವಾರ ರಾತ್ರಿ 7 ಘಂಟೆ ಸುಮಾರಿಗೆ ಪಟ್ಟಣದ ಕಿತ್ತೂರಾಣಿ ಚೆನ್ನಮ್ಮ ರಸ್ತೆಯಲ್ಲಿ  ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ಕೆ. ಡಿ ಸಿ.ಸಿ ಬ್ಯಾಂಕ್ ಎದುರು ಭಾರೀ ಗಾತ್ರದ ಸಾಗವಾನಿ ಮರವೊಂದು ಬುಡಸಮೇತ ಕಿತ್ತು ಬಿದ್ದಿದೆ.

ಪಟ್ಟಣದ ಮುಖ್ಯ ರಸ್ತೆ ಇದಾಗಿದ್ದು, ಅದೃಷ್ಟ ವಶಾತ್ ಯಾರಿಗೂ ಗಾಯ ನೋವುಗಳಾಗಿಲ್ಲ. ಮರ ಧರೆಗುರುಳುವ ವೇಳೆ ವಿದ್ಯುತ್ ತಂತಿಯ ಮೇಲೆ ಎರಗಿ ಬಿದ್ದ ಪರಿಣಾಮ ವಿದ್ಯುತ್ತ ವ್ಯತ್ಯಯವಾಗಿದೆ. ರಸ್ತೆಗೆ ಅಡ್ದಲಾಗಿ ಮರ ಬಿದ್ದದರಿಂದ ಕೆಲಕಾಲ ಸಂಚಾರಕ್ಕೂ  ತೊಡಕಾಗಿತ್ತು.

ಸಂಬಂಧಿತ ಹೆಸ್ಕಾಂ, ಪುರಸಭೆ, ಅರಣ್ಯ ಇಲಾಖೆ, ಪೋಲಿಸ್ ಇಲಾಖೆಗಳ ಸಹಯೋಗ ಮತ್ತು ಸಹಕಾರದಲ್ಲಿ ಕ್ರೇನ್ ಬಳಸಿ ಮರೆತೆರವು ಕಾರ್ಯ ನಡೆಸಿ,ಸಂಚಾರ ಮತ್ತು ವಿದ್ಯುತ್ ವ್ಯತ್ಯಯ ಸರಿ ಪಡಿಸಲಾಗಿದ್ದು, ತ್ವರಿತ ಕಾರ್ಯಾಚರಣೆಗೆ ಸಹಕರಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೆಲ್ಲರಿಗೆ  ಕೆ.ಸಿ ರಸ್ತೆ ಅಂಚಿನ ನಿವಾಸಿಗಳು, ಅಂಗಡಿಕಾರರು ಮತ್ತು ದಾರಿಹೋಕರು ಮೆಚ್ಚುಗೆ ಸೂಚಿಸಿದ್ದಾರೆ.

ಪ್ರತ್ಯೇಕ ಇನ್ನೊಂದು ಘಟನೆಯಲ್ಲಿ, ಪುರಸಭೆ ವ್ಯಾಪ್ತಿಯ ಹನುಮಟ್ಟಾ ವಾರ್ಡಿನ ಮಹಾಮಾಯಾ  ದೇವಸ್ಥಾನದ ಎದುರಿನ ಸವಿತಾ ವಸಂತ ನಾಗ್ಪೇಕರ ಎನ್ನುವವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆಗೆ ತೀವೃ ಸ್ವರೂಪದ ಹಾನಿಯಾಗಿದೆಯಲ್ಲದೇ, ಮನೆಯಲ್ಲಿದ್ದ ಪುಟಾಣಿ ಮಗು, ಬಾಣಂತಿ ತಾಯಿ ಸಪ್ನಾ ನಾಗ್ಬೇಕರ, ಮನೆಯ ಯಜಮಾನತಿ ಸವಿತಾ, ಕುಟುಂಬ ಸದಸ್ಯರಾದ ಸುವರ್ಣ, ಪ್ರಾಚಿ,, ಗೀತಾ ಸೇರಿದಂತೆ ಮನೆಯಲ್ಲಿದ್ದ ಒಟ್ಟೂ 5-6 ಮಂದಿಗೆ ಗಾಯ ನೋವುಗಳಾಗಿದ್ದು ಕೆಲವರನ್ನು ಖಾಸಗಿ ಆಸ್ಪತ್ರೆ ಮತ್ತು ಒಂದಿಬ್ಬರನ್ನು, ಸ್ಥಳೀಯರು  ಸರ್ಕಾರಿ ಆಸ್ಪತ್ರೆಗೆ  ದಾಖಲಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಳು ತಿಳಿದಿರಬೇಕಿದೆ ಸಾಮಾಜಿಕ ಕಾರ್ಯಕರ್ತ ರಾಮಚಂದ್ರ ಹೆಗಡೆ, ಪುರಸಭೆ ಸ್ಥಳೀಯ ವಾರ್ಡ್ ಸದಸ್ಯೆ ರೇಖಾ ಗಾಂವಕರ, ಮತ್ತಿತರರು ಕೂಡಲೇ ಈ ವಿಷಯವನ್ನು  ಸಂಬಂಧಿಸಿದ ಕಂದಾಯ, ಪುರಸಭೆ, ಪೊಲೀಸ್ ಮತ್ತಿತರ ಇಲಾಖೆಗಳ ಗಮನಕ್ಕೆ ತಂದಿದ್ದು ,ಸಂಬಂಧಿತ ಇಲಾಖೆಗಳ ಕೆಲ ಹಿರಿಕಿರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು,ಒಟ್ಟಾರೆ ಹಾನಿಯ ಆಂದಾಜು, ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version