Focus News
Trending

ಅಂಕೋಲಾ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ಎಚ್ ಅಕ್ಷತಾ : ಪುರಸಭೆಯಲ್ಲಿ ಹೆಚ್ಚಿದ ಮಹಿಳೆಯರ ಪಾರುಪಥ್ಯ

ಅಂಕೋಲಾ ; ತಾಲೂಕಿನ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ಕುಮಟಾ ಕತಗಾಲ ಮೂಲದ ಶ್ರೀಮತಿ ಎಚ್ ಅಕ್ಷತಾ ಇವರನ್ನು ವರ್ಗಾಯಿಸಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಎಚ್ ಅಕ್ಷತಾ ಇವರು ಕರ್ನಾಟಕ ಮುನ್ಸಿಪಲ್ ಸರ್ವೀಸ್ ಅಡ್ಮಿನಿಸ್ಟ್ರೇಶನ್ (KMS) 2 ಗ್ರೇಡಿನ ಅಧಿಕಾರಿಯಾಗಿದ್ದು, 2021 ನೇ ಸಾಲಿನಲ್ಲಿ ಕಾರವಾರ ನಗರ ಸಭೆ ಮೆನೇಜರ್ ಆಗಿ ತಮ್ಮ ( ತರಬೇತಿ ) ಸೇವೆ ಆರಂಭಿಸಿ,ಬಳಿಕ ಶಿವಮೊಗ್ಗ ಜಿಲ್ಲೆಯ ಅನವಟ್ಟಿಯಲ್ಲಿ ಚೀಪ್ ಆಫೀಸರ್ ಆಗಿ, ಆ ಬಳಿಕ ಉತ್ತರ ಕನ್ನಡ ಜಿಲ್ಲೆಯ ಮಂಕಿ ಪಟ್ಟಣ ಪಂಚಾಯತನ ಮುಖ್ಯಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಅಲ್ಲಿಂದ ಅವರನ್ನು ಅಂಕೋಲಾ ಪುರಸಭೆಯ ಮುಖ್ಯ ಅಧಿಕಾರಿಯಾಗಿ ವರ್ಗಾಯಿಸಲಾಗಿದೆ. ಕಳೆದ 2023 ರ ರಾಜ್ಯ ವಿಧಾನಸಭಾ ಚುನಾವಣೆಗೂ ಪೂರ್ವ ಅಂಕೋಲಾ ಪುರಸಭೆಗೆ ಮುಖ್ಯ ಅಧಿಕಾರಿಯಾಗಿ ಬಂದಿದ್ದ ಎಂ ಆರ್ ಸ್ವಾಮಿ, ತಮ್ಮ ಖುರ್ಚಿ ಬಿಟ್ಟು ತೆರಳಬೇಕಾಗಿರುವು ಎಲ್ಲಿಗೆ ಎಂದು ಕಾಯುವಂತಾಗಿದ್ದು. ಈ ಕುರಿತು 1-2 ದಿನಗಳಲ್ಲಿ ಅಧಿಕೃತ ಆದೇಶವಾಗುವ ನಿರೀಕ್ಷೆ ಇದೆ.

ಒಟ್ಟಾರೆಯಾಗಿ ಸದ್ಯಕ್ಕೆ ಅಧ್ಯಕ್ಷ ಉಪಾಧ್ಯಕ್ಷರಿಲ್ಲದ ಅಂಕೋಲಾ ಪುರಸಭೆಯಲ್ಲಿ ಆಡಳಿತಾಧಿಕಾರಿಯಾಗಿ ಕುಮಟಾ ಉಪವಿಭಾಗಾಧಿಕಾರಿಯಾಗಿರುವ ಕಲ್ಯಾಣಿ ಕಾಂಬಳೆ, ಪುರಸಭೆಯ ಮೇನೇಜರ್ , ಇಂಜಿನಿಯರ್ ಸಹ ಮಹಿಳೆಯರೇ ಆಗಿದ್ದು, ನೂತನ ಮುಖ್ಯಾಧಿಕಾರಿಯಾಗಿ ಎಚ್ ಅಕ್ಷತಾ ಅಧಿಕಾರಕ್ಕೆ ಹಾಜರಾಗುವ ಮೂಲಕ, ಅಂಕೋಲಾ ಪುರಸಭೆಯಲ್ಲಿ ಮಹಿಳಾ ಪಾರುಪಥ್ಯ ಕಂಡು ಬರಲಿದೆ. ನಾನಾ ಕಾರಣಗಳಿಂದ ಜಡ್ಡುಗಟ್ಟಿರುವ ಇಲ್ಲಿನ ಆಡಳಿತ ವ್ಯವಸ್ಥೆಗೆ ಈಗಲಾದರೂ ಚುರುಕುತನ ಕಂಡು ಬಂದು,ಜನಪ್ರತಿನಿದಿಗಳ,ಸಾರ್ವಜನಿಕರ ಹಾಗೂ ಪುರಸಭೆ ಸೇರಿದಂತೆ ಸಂಬಂಧಿತ ಇತರೆ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಹಾಗೂ ಸರ್ವರ ಸಹಕಾರದಲ್ಲಿ ಈಗಲಾದರೂ ಉತ್ತಮ ಆಡಳಿತ ವ್ಯವಸ್ಥೆ ಜಾರಿಗೆ ಬರಲಿ ಎಂದು ಪ್ರಜ್ಞಾವಂತ ಜನ ಆಗ್ರಹಿಸುತ್ತಿದ್ದಾರೆ .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button