ಗುಡ್ಡಕುಸಿಯುವ ಆತಂಕ : ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಇಲ್ಲಿನ ಅಂಗನವಾಡಿ
ಆತಂಕದಲ್ಲೇ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುವ ಪಾಲಕರು
ಭಟ್ಕಳ: ಇತ್ತಿಚೇಗೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಗುಡ್ಡ ಜರಿದ ಸದ್ದೆ ದೊಡ್ಡ ಸುದ್ದಿಯಾಗಿರುವುದು ಎಲ್ಲರಿಗೂ ಗೊತ್ತಿರುವಂತ ವಿಚಾರ ಆದರೂ ಅಧಿಕಾರಿಗಳು, ಹೆಣ ಉರುಳಿದ್ದು ಕಂಡವರ ಮನೆಯದ್ದು ಎಂಬ ತಾತ್ಸಾರ ಭಾವನೆಯಿಂದ, ಸಂಭವನಿಯ ಘಟನೆಯ ಕುರಿತು ಸ್ಥಳಿಯರು ಇವರ ಗಮನಕ್ಕೆ ತಂದರೂ ಕೂಡ ದಿವ್ಯ ಮೌನ ವಹಿಸುತ್ತಾರೆ. ಇದಕ್ಕೆ ಉದಾಹರಣೆ ಎಂಬAತೆ ಇಲ್ಲೊಂದು ಅಂಗನವಾಡಿ ಶಾಲೆ ನೆಲಕ್ಕಪ್ಪಳಿಸಿ ಮತ್ತೊಂದು ದುರಂತಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿ ನಿಂತಿದೆ.
ಭಟ್ಕಳ ತಾಲೂಕಿನ ಚೌಥನಿಯಲ್ಲಿರುವ ಅಂಗನವಾಡಿ ಕೇಂದ್ರ. ಇಲ್ಲಿ ಪುಟಾಣಿಗಳ ಸಹಿತವಾಗಿ ಪಾಲಕರು ನಿಂತ ದೃಶ್ಯಗಳನ್ನು ನೋಡಿದರೆ ತಿಳಿಯುತ್ತದೆ ಖಂಡಿತಾ ಇಲ್ಲೊಂದು ಸಮಸ್ಯೆ ಇದೆ ಎಂದು. ಅಂಗನವಾಡಿ ಕೇಂದ್ರದ ಹತ್ತಿರ ಹೊಂದಿರುವ ಖಾಸಗಿ ವ್ಯಕ್ತಿಯೊಬ್ಬ ತನ್ನ ಸ್ವಾರ್ಥದ ಕಾರಣಕ್ಕಾಗಿ ಪುಟಾಣಿ ಮಕ್ಕಳು ತಮ್ಮ ಪ್ರಾರಂಭದ ಶಿಕ್ಷಣ ಪಡೆದುಕೊಳ್ಳುವ ಅಂಗನವಾಡಿ ಶಾಲೆಯ ಅಂಚಿನವರೆಗೂ ಯಾವುದೇ ಮುಂಜಾಗರೂಕತೆ ವಹಿಸದೆ ಗುಡ್ಡವನ್ನು ಕೊರೆದಿಟ್ಟಿರುವುದರ ಪರಿ ಇದು.
ಈ ರೀತಿ ಲಂಬವಾಗಿ ಗುಡ್ಡ ಕೊರೆದು ಕಣಿವೆ ಮಾಡಿದ ಕಾರಣಕ್ಕೆ, ಪಾಲಕರು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ತಮ್ಮ ಮಕ್ಕಳನ್ನು ಶಾಲೆಗೆ ಬಿಟ್ಟುಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ. ಮಕ್ಕಳ ಯೋಚನೆ ಹೇಗಿರುತ್ತದೆ ಎಂದು ಎಲ್ಲರಿಗೂ ಅರಿವಿರುತ್ತದೆ ದುರದೃಷ್ಟವಶಾತ್ ಆಟವಾಡುವ ಸಂದರ್ಭದಲ್ಲಿ ಒಬ್ಬರನೊಬ್ಬರು ಸ್ವಲ್ಪ ದುಡಿಕೊಂಡರು ಅನಾಹುತವೇ ಆಗಿ ಹೋಗುವ ಸಂಭವವಿದೆ.
ಇತ್ತಿಚೇಗೆ ಸತತತ ಮಳೆಯ ಪರಿಣಾಮ ಗುಡ್ಡ ಜಾರಿ ಅಂಗನವಾಡಿ ಕಟ್ಟಡ ನೆಲಸಮವಾಗುವಂತ ಸಂಭವವನ್ನು ಇಲ್ಲಿ ತಳ್ಳಿಹಾಕುವಂತಿಲ್ಲ. ಇನ್ನೂ ಈ ಅಂಗನವಾಡಿ ಕೇಂದ್ರದಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕಿ ನಿವೃತ್ತಿ ಹೊಂದಿದ ಮೇಲೆ ಇಲ್ಲಿಯವರೆಗೂ ಹೊಸದಾಗಿ ಶಿಕ್ಷಕಿಯನ್ನು ನೇಮಿಸಿಲ್ಲ ಎಂಬುದು ಪಾಲಕರ ದೂರು.
ಕಡಿದಾದ ಗುಡ್ಡದ ರಸ್ತೆಗೆ ಕೆಲವು ಕಿಡಿಗೇಡಿಗಳು ಕಸ ಮುಂತಾದ ತ್ಯಾಜ್ಯವನ್ನು ನೀರು ಹರಿಯುವ ಜಾಗದಲ್ಲೇ ಗುಡ್ಡೆ ಹಾಕಿರುವುದರಿಂದ ಮಾಂಸದ ತ್ಯಾಜ್ಯಗಳ ಮಿಶ್ರಿತವಾಗಿರುವ ಕೊಳಕು ನೀರನ್ನು ದುಳುಬಿಕೊಂಡು ಬರುವ ಪರಿಸ್ಥಿತಿ ಇದೆ. ಈ ಹಿಂದೆಯೂ ಸ್ಥಳಿಯರೂ ಈ ಕುರಿತಂತೆ ಅಧಿಕಾರಿಗಳಿಗೆ ದೂರು ನೀಡಿದರೂ ಇಲ್ಲಿಯವರೆಗೆ ಯಾವುದೇ ಕ್ರಮವಾಗಿಲ್ಲ ಯಾವುದೇ ಅಹಿತಕರ ಘಟನೆ ನಡೆಯುವ ಮೊದಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆದಷ್ಟು ಬೇಗ ಏಚ್ಚೆತ್ತುಕೊಂಡು ಇಂತಹ ಗಂಭೀರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿದೆ.
ವಿಸ್ಮಯ ನ್ಯೂಸ್, ಈಶ್ವರ ನಾಯ್ಕ, ಭಟ್ಕಳ