ಗಂಗಾವಳಿ ನದಿಯಲ್ಲಿ ಜರಿದು ಬಿದ್ದಿರುವ ಕಲ್ಲುಬಂಡೆ ಮಣ್ಣಿನ ರಾಶಿ ಬಗೆದು ಒಡಲಾಳ ಶೋಧಿಸಲಿರುವ ಪೋಕ್ಲೇನ್ ಯಂತ್ರ : ಶಿರೂರು ಗುಡ್ಡ ಕುಸಿತ ಕಾರ್ಯಾಚರಣೆಗೆ ಯಶಸ್ಸಿನ ನಿರೀಕ್ಷೆ?.
ಶಾಸಕ ಸೈಲ್ ತರಿಸಿದ ಈ ಬೂಮ್ ಯಂತ್ರ ಎಷ್ಟು ದೂರದವರೆಗೆ ತನ್ನ ಕೈ ಚಾಚಬಲ್ಲದು ?
ಅಂಕೋಲಾ : ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿಯಲ್ಲಿ ಬಂಡೆಗಲ್ಲುಗಳು ಮತ್ತು ಮಣ್ಣಿನ ರಾಶಿ ರಾಶಿ ಜರಿದು ಬಂದು ಬಿದ್ದ ಪರಿಣಾಮ ಕೃತಕ ಗುಡ್ದ ನಿರ್ಮಾಣವಾಗಿ, ಆ ಮಣ್ಣಿನಡಿಯೂ ಸಿಲುಕಿ ರಬಹುದಾದ ವಾಹನ ಇಲ್ಲವೇ ನಾಗರಿಕರ ಪತ್ತೆ ಕಾರ್ಯ ಸವಾಲಿನ ಕಾರ್ಯವಾಗಿದ್ದು, ಶಾಸಕ ಸೈಲ್ ಗೋಕಾಕ್ ನಿಂದ ದೊಡ್ಡ ಪೋಕ್ಲೇನ್ ಯಂತ್ರ ತಂದು ಶೋಧ ಕಾರ್ಯ ಮುಂದುವರಿಸಲು ಉತ್ಸುಕರಾಗಿದ್ದಾರೆ. ಈಗಾಗಲೇ ಅದನ್ನು ಹೊತ್ತು ತಂದಿರುವ ಉದ್ದನೆಯ ಟ್ರಾಲಿ, ಅಂಕೋಲಾ ಗಡಿಯೊಳಗೆ ಈಗಾಗಲೇ ಬಂದು ತಲುಪಿದ್ದು, ಸಣ್ಣ ಪ್ರಮಾಣದ ಯಾಂತ್ರಿಕ ದೋಷದಿಂದ, ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲು ಸ್ವಲ್ಪ ವಿಳಂಬವಾಗುವ ಸಾಧ್ಯತೆ ಕೇಳಿಬಂದಿತ್ತು.
ಈಗ ಯಾಂತ್ರಿಕ ದೋಷ ಸರಿಪಡಿಸಲಾಗಿದ್ದು, ಟ್ರಾಲಿ ಶಿರೂರಿನ ಸಾಗುತ್ತಿದೆ ಎನ್ನಲಾಗಿದೆ. ಈ ಬೂಮ್ 60 ಪೂಟ ಉದ್ದದ ವರೆಗೆ ತನ್ನ ಕೈ ಚಾಚಿ ಶೋಧ ನಡೆಸುವ ಅದರ ಕಾರ್ಯಚರಣೆಯಿಂದ,ನದಿ ನೀರು ಮತ್ತು ಮಣ್ಣಿನ ರಾಶಿಯಡಿ ಹುಗಿದು ಬಿದ್ದಿರುವ,ವಾಹನ ಇಲ್ಲವೇ ಜೀವಗಳ ಪತ್ತೆ ಕಾರ್ಯಾಚರಣೆಗೆ ಹೊಸ ವೇಗ ಮತ್ತು ಹುರುಪು ಹಾಗೂ ನಿಖರತೆ ಸಿಗುವ ಸಾಧ್ಯತೆ ಮತ್ತು ನಿರೀಕ್ಷೆ ಹೆಚ್ಚುವಂತಾಗಿದೆ, ಕೇರಳ ಮೂಲದ ಅರ್ಜುನ್ ಸೇರಿದಂತೆ, ಘಟನೆಯಲ್ಲಿ ನಾಪತ್ತೆಯಾದ ಸ್ಥಳೀಯರಾದ ಜಗನ್ನಾಥ ನಾಯ್ಕ, ಗಂಗೆಕೊಳ್ಳ ನಿವಾಸಿ ಲೊಕೇಶ ನಾಯ್ಕ,ಬೇರೆ ರಾಜ್ಯದ ಚಾಲಕ ಸೇರಿದಂತೆ ಮಣ್ಣಿನಡಿ ಸಿಲುಕಿರುವ ಇಲ್ಲವೇ ನೀರಿನಲ್ಲಿ ಕೊಚ್ಚಿ ಹೋಗಿರಬಹುದಾದವರ ಶೋಧ ಕಾರ್ಯಾಚರಣೆ 8 ನೇ ದಿನ ಮುಗಿದು ಜುಲೈ 24 ಕ್ಕೆ 9ನೇ ದಿನಕ್ಕೆ ಕಾಲಿರಿಸಿದೆ.
ಈ ನಡುವೆ ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್, ಭಾರತೀಯ ಸೇನೆ, ನೌಕಾದಳ, ಕೇರಳ ರಾಜ್ಯದಿಂದ ಬಂದಿದ್ದ ರಕ್ಷಣಾ ಕಾರ್ಯಾಚರಣೆ ಸದಸ್ಯರು, ಕರ್ನಾಟಕ ರಾಜ್ಯದ ಪೊಲೀಸ್ ಅಗ್ನಿಶಾಮಕ ಮತ್ತಿತರ ಪಡೆಗಳು ನಿರಂತರ ಕಾರ್ಯಾಚರಣೆ ಕೈಗೊಂಡಿವೆ.ರಾಡರ್,ಮೆಟಲ್ ಡಿಟೆಕ್ಟರ್,ಮತ್ತಿತರ ತಂತ್ರಜ್ಞಾನಗಳನ್ನು ಬಳಿಸಿ ನಾಪತ್ತೆಯಾಗಿರುವ ಬೆಂಜ್ ಲಾರಿ ಶೋಧಕ್ಕೂ ಮುಂದಾಗಲಾಗಿತ್ತು.ಒಮ್ಮೊಮ್ಮೆ ಅವುಗಳಲ್ಲಿ ತೋರಿಸಿದ್ದ ಸಕಾರಾತ್ಮಕ ಸಿಗ್ನಲ್ ಗಳು ಇನ್ನೇನು ಕೆಲವೇ ಗಂಟೆಗಳಲ್ಲಿ ವಾಹನ ಪತ್ತೆಯಾಗುತ್ತದೆ ಎಂದೇ ಕಾರ್ಯಚರಣೆ ಮುಂದುವರಿಸಿ, ಘಟನೆ ನಡೆದು ಒಂದು ವಾರ ಕಳೆದರೂ ಕಾರ್ಯಚರಣೆಗೆ ಯಶಸ್ಸು ದೊರೆತಿರಲಿಲ್ಲ.
ಘಟನೆ ಸಂಭವಿಸಿದ ದಿನ ಬೆಂಗಳೂರಿನಲ್ಲಿ ಮಳೆಗಾಲದ ಅಧಿವೇಶನದಲ್ಲಿದ್ದ ಸ್ಥಳೀಯ ಶಾಸಕ ಸತೀಶ್ ಸೈಲ್,ತನ್ನ ಕ್ಷೇತ್ರದಲ್ಲಿ ಐಆರ್ಜ್ಞಾನಿಕ ಕಾಮಗಾರಿ,ನೌಕನಲ್ಲಿ ಹೆಸರಿನಲ್ಲಿ ಸೀಬರ್ಡ್ ಪ್ರದೇಶದ ಕೆಲ ಕಾಮಗಾರಿಗಳಿಂದ , ಹೆದ್ದಾರಿ ಅಂಚಿನ ಗುಡ್ಡದ ನೀರು ನೈಸರ್ಗಿಕವಾಗಿ ಹರಿದು ಹೋಗಿ ಸಮುದ್ರ ಸೇರುವ ಸ್ಥಳಕ್ಕೆ ತಡೆಯಾಗಿದ್ದರಿಂದ,ಕೃತಕ ಪ್ರವಾಹ ಉಂಟಾಗಿ ಹೆದ್ದಾರಿ ಮತ್ತು ಅಕ್ಕ ಪಕ್ಕದ ಹತ್ತಾರು ಗ್ರಾಮಗಳಿಗೆ ನೀರು ನುಗ್ಗಿ ಆಗುವ ಆವಾಂತರಗಳ ಬಗ್ಗೆ ಪ್ರಸ್ತಾಪಿಸಿ, ಈ ಕುರಿತು ಸರ್ಕಾರದ ಗಮನ ಸೆಳೆದು, ಜವಾಬ್ದಾರಿಯುತ, ಮಂತ್ರಿಗಳು ಸ್ಥಳ ಪರಿಶೀಲಿಸುವಂತೆ ಕೋರಿಕೊಂಡಿದ್ದರಲ್ಲದೇ, ಸ್ಪ ಕ್ಷೇತ್ರಕ್ಕೆ ಬಂದು ನೊಂದವರ ಸೇವೆಗೆ ತೊಡಗಿಸಿಕೊಂಡಿದ್ದರು. ಪ್ರ
ತಿ ದಿನ ಘಟನಾ ಸ್ಥಳದಲ್ಲಿದ್ದು ಖುದ್ದು ಪರಿಶೀಲಿಸಿ, ಅಲ್ಲಿನ ಆಗುಹೋಗುಗಳನ್ನು ವಿಮರ್ಶಿಸಿ,ತನ್ನ ಕೈಲಾದ ಎಲ್ಲಾ ರೀತಿಯ ಪ್ರಯತ್ನ ಮುಂದುವರೆಸಿದ್ದರು. ಹವಾಮಾನ ವೈಪರೀತ್ಯ, ಕುಸಿದು ಬಿದ್ದಿರುವ ದೊಡ್ಡ ದೊಡ್ಡ ಕಲ್ಲು ಬಂಡೆಗಳು ಮತ್ತು,ಮಣ್ಣಿನ ರಾಶಿ ರಾಶಿ,ಗುಡ್ಡದಲ್ಲಿನ ಬಿರುಕು ಹೆಚ್ಚಳದಿಂದ ಗುಡ್ ಮತ್ತಷ್ಟು ಕುಸಿಯುವ ಸಾಧ್ಯತೆ ಇದ್ದು ,ಕಾರ್ಯಾಚರಣೆಗೆ ಹಿನ್ನಡೆಯಾಗುತ್ತಿತ್ತು. ಈಗ ಸೈಲ್ ರ ವಿಶೇಷ ಪ್ರಯತ್ನದ ಫಲವಾಗಿ ಕಾರ್ಯಚರಣೆ ಯಶಸ್ವಿಯಾಗುವ ನಿರೀಕ್ಷೆ ಹೆಚ್ಚಿದೆ. ಸೈಲ್ ಅವರ ಈ ವಿಶೇಷ ಪ್ರಯತ್ನ ನಿಜಕ್ಕೂ ಅಭಿನಂದೀಯ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ