ಅಂಕೋಲಾ: ಶಿರೂರು ಗುಡ್ಡ ಕುಸಿತ ದುರಂತ ಸಂಭವಿಸಿದ ನಂತರದ ಶೋಧ ಕಾರ್ಯಾಚರಣೆ ಜುಲೈ 27ಕ್ಕೆ 12 ದಿನಕ್ಕೆ ಮುಂದುವರಿದಿದೆ. ಈ ದುರ್ಘಟನೆಯಲ್ಲಿ ನಾಪತ್ತೆಯಾಗಿ ಈವರೆಗೂ ಪತ್ತೆಯಾಗದ ಕೇರಳ ಮೂಲದ ಅರ್ಜುನ್,ಗೋಕರ್ಣ ಗಂಗೆ ಕೊಳ್ಳದ ಲೋಕೇಶ್ ನಾಯ್ಕ ಮತ್ತು ಶಿರೂರಿನ ಜಗನ್ನಾಥ ನಾಯ್ಕ ಪತ್ತೆ ಕಾರ್ಯಚರಣೆಗೆ ಹೆಸರಂತ ಮುಳುಗು ತಜ್ಞ ಈಶ್ವರ್ ಮಲ್ಪೆ ಮತ್ತು ತಂಡದವರನ್ನು ಕರೆಸಲಾಗಿದೆ. ಗಂಗಾವಳಿ ನದಿ ನೀರಿನ ಒಳ ಪ್ರವಾಹದ ವೇಗ ಹೆಚ್ಚಾಗಿ ರುವುದರಿಂದ ಪತ್ತೆ ಕಾರ್ಯಾಚರಣೆ ಸುಲಭ ಸಾಧ್ಯವಲ್ಲ ಎನ್ನುವಂತಾಗಿದೆ.
ಆದರೂ ಪ್ರಯತ್ನ ಬಿಡದ ಈಶ್ವರ ಮಲ್ಪೆ ತಂಡ ಅಂಕೋಲಾದ ಸ್ಥಳೀಯ ಮೀನುಗಾರರೊಂದಿಗೆ ಕಾರ್ಯಚರಣೆ ನಡೆಸುತ್ತಿದ್ದಾರೆ.ಪತ್ತೆ ಕಾರ್ಯಾಚರಣೆಗೆ ಅನುಕೂಲವಾಗುವಂತೆ ನೌಕಾದಳದ ಟಗ್ ಬೋಟ್ ತರಿಸಲು ಸ್ಥಳೀಯ ಶಾಸಕರು ಮತ್ತು ಜಿಲ್ಲಾಡಳಿತ ಕೋರಿಕೆ ಸಲ್ಲಿಸಿದ್ದು,ಶನಿವಾರ ಸಂಜೆಯ ವೇಳೆಗೆ ಲಭ್ಯವಾಗುವ ನಿರೀಕ್ಷೆ ಇದೆ.ಕಾರ್ಯಚರಣೆಯ ಕಾರ್ಯ ಯೋಜನೆ ಮತ್ತು ಫಲಿತಾಂಶದ ಕುರಿತಂತೆ ಜಿಲ್ಲಾಧಿಕಾರಿಗಳಿಂದ ಹೆಚ್ಚಿನ ಮತ್ತು ಅಧಿಕೃತ ಮಾಹಿತಿ ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ