Follow Us On

WhatsApp Group
Important
Trending

ಶಿರೂರು ಗುಡ್ಡಕುಸಿತ ದುರಂತದ ಮನೆಗಳಲ್ಲಿ ಸೂತಕದ ಛಾಯೆ: ನಮ್ಮ ಮನೆಯ ಸದಸ್ಯರನ್ನು ಹುಡುಕಿಕೊಡಿ: ಭಾವುಕರಾದ ಕುಟುಂಬಸ್ಥರು

ಅಂಕೋಲಾ: ಶಿರೂರು ಗುಡ್ಡಕುಸಿತ ದುರಂತದ ಮನೆಗಳಲ್ಲಿ ಸೂತಕದ ಛಾಯೆ ಹಾಗೆಯೇ ಇದೆ. ತಮ್ಮನ್ನು ಸಂತೈಸಲು ಬಂದಿದ್ದ ಮುಳುಗು ತಜ್ಞ ಈಶ್ವರ ಮಲ್ಪೆ ಇವರಲ್ಲಿ ಶೋಧ ಕಾರ್ಯಚರಣೆ ಮುಂದುವರಿಸಿ ನಾಪತ್ತೆಯಾದ ನಮ್ಮ ಮನೆ ಸದಸ್ಯರನ್ನು ಹುಡುಕಿಕೊಡಿ ಎಂದು ವಿನಂತಿಸಿಕೊoಡಿದ್ದಾರೆ.ಶಿರೂರಿನ ಜಗನ್ನಾಥ್ ನಾಯ್ಕ ಪತ್ನಿ ಮತ್ತು ಮಕ್ಕಳನ್ನು ಕಾಣಲು,ಅವರ ಮನೆಗೆ ತೆರಳಿ,ನಿಮ್ಮ ದುಃಖದಲ್ಲಿ ನಾವಿದ್ದೇವೆ ಎಂದು ಸಂತೈಸಿದರು.ಈ ವೇಳೆ ಆ ನೊಂದ ಕುಟುಂಬದವರು,ತಮ್ಮ ಮನೆಯ ಯಜಮಾನನ ಫೋಟೋ ತೋರಿಸಿ,ಬಿಕ್ಕಿ ಬಿಕ್ಕಿ ಅಳುತ್ತ ,ಆತನನ್ನು ಹೇಗಾದರೂ ಮಾಡಿ ಹುಡುಕಿ ಕೊಡಿ.ಶೋಧ ಕಾರ್ಯವನ್ನು ಇಷ್ಟಕ್ಕೆ ನಿಲ್ಲಿಸಬೇಡಿ ಎಂದು ವಿನಂತಿಸಿಕೊoಡರು.

ಈ ವೇಳೆ ಸ್ಥಳೀಯ ಗ್ರಾಪಂ ಸದಸ್ಯ ಅನಂತ ನಾಯ್ಕ ಮತ್ತಿತರರಿದ್ದರು.ಜಿಲ್ಲಾಡಳಿತದ ಜೊತೆ ಚರ್ಚಿಸಿ, ಅವರ ಅನುಮತಿ ಮತ್ತು ಮಾರ್ಗದರ್ಶನದ ಮೇರೆಗೆ ನೀರಿನ ಹರಿವಿನ ಪ್ರಮಾಣ ಕಡಿಮೆ ಇರುವಾಗ ಖಂಡಿತ ಶೋಧ ಕಾರ್ಯ ನಡೆಸಿ,ನಿಮ್ಮ ಕುಟುಂಬಕ್ಕೆ ಕೊಂಚವಾದರು ಸಮಾಧಾನವಾಗುವ ರೀತಿ ಮೃತ ದೇಹ ಹುಡುಕಿ ತರಲು ಪ್ರಾಮಾಣಿಕ ಯತ್ನ ಮಾಡುವುದಾಗಿ ಹೇಳಿ,ಈಶ್ವರ್ ಮಲ್ಪೆ ಅವರು ಜಗನ್ನಾಥ್ ಕುಟುಂಬ ವರ್ಗದವರಿಗೆ ಸಂತೈಸಿದರು.

ಬಳಿಕ ಅವರು ಗೋಕರ್ಣ ಗಂಗೆ ಕೊಳ್ಳ ದ ಲೋಕೇಶ್ ನಾಯ್ಕ ಮನೆಗೆ ಭೇಟಿ ನೀಡಿ,ಮಗನನ್ನು ಕಳೆದುಕೊಂಡ ಶೋಕದಲ್ಲಿರುವ ತಾಯಿ,ಹಾಗೂ ಲೋಕೇಶನ ಸಹೋದರನನ್ನು ಸಂತೈಸಿ,ಧೈರ್ಯ ತುಂಬಿದರು. ಈ ವೇಳೆ ಭಾವುಕರಾದ ಲೋಕೇಶ್ ನಾಯ್ಕ್ ತಾಯಿ,ಈಶ್ವರ್ ಮಲ್ಪೆ ಅವರಲ್ಲಿ ಕೈ ಮುಗಿದು ಪ್ರಾರ್ಥಿಸಿ ತನ್ನ ಮಗನನ್ನು ಹೇಗಾದರೂ ಮಾಡಿ ಹುಡುಕಿಕೊಡಿ ಎಂದರು. ಲೋಕೇಶ್ ನಾಯ್ಕ ಸಹೋದರ ಕೂಡ ಇದೇ ಸಂದರ್ಭದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಿ ಎಂದು ತಮ್ಮ ಕುಟುಂಬದ ಪರವಾಗಿ ವಿನಂತಿಸಿಕೊAಡರು.ಅವರನ್ನು ಸಂತೈಸಿದ ಈಶ್ವರ್ ಮಲ್ಪೆ, ನಾಪತ್ತೆಯಾದ ಅರ್ಜುನ್, ಜಗನ್ನಾಥ, ಮತ್ತು ಲೊಕೇಶ ನಮ್ಮವರೇ ಆಗಿದ್ದು,ಖಂಡಿತ ನಿಮ್ಮ ಭಾವನೆಗೆ ಸ್ಪಂದಿಸಲು ಯತ್ನಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಮತ್ತು ಉರಗ ಸಂರಕ್ಷಕ ಮಹೇಶ ನಾಯ್ಕ ಅವರ್ಸಾ,ಪ್ರಮುಖರಾದ ಉಮಾಕಾಂತ ಹೊಸಕಟ್ಟಾ,ಮಣಿಪಾಲದ ಹೆಸರಾಂತ ಹೋಟೆಲ್ ಮಾಲಕ ಸಂತೋಷ , ಲೊಕೇಶ ನಾಯ್ಕ ಕುಟುಂಬದ ಆಪ್ತ ಪ್ರಶಾಂತ್ ಗಾಂವಕರ ಸೇರಿದಂತೆ ಗಂಗೆಕೊಳ್ಳದ ಸ್ಥಳೀಯರಿದ್ದರು.

ಶಾಸಕ ಸತೀಶ್ ಸೈಲ್ ಸಹ ಕಾರ್ಯಚರಣೆ ಮುಂದುವರಿಸುವ ಸಲುವಾಗಿ ಅಕ್ಕಪಕ್ಕದ ರಾಜ್ಯಗಳ ,ಕೆಲ ಪರಿಣಿತರನ್ನು ಸಂಪರ್ಕಿಸಿದ್ದರು.ಕೃಷಿ ಮತಿತರ ಚಟುವಟಿಕೆಗಳಿಗೆ ವಿಶೇಷವಾಗಿ ಬಳಸುವ ಅಗ್ರೋ ಡ್ರೆಜ್ಜಿಂಗ್ ಯಂತ್ರವನ್ನು ಕೇರಳದ ತ್ರಿಶೂರ ಜಿಲ್ಲೆಯಿಂದ ತರಿಸಲು ಪ್ರಯತ್ನ ಮುಂದುವರಿದ್ದಾರೆ. ಒಂದೊಮ್ಮೆ ಈ ಯಂತ್ರ ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆಗಳಿದರೆ,ನೀರಿನಲ್ಲಿ ತೇಲುತ್ತಾ ,ನದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವ ಮಣ್ಣಿನಡಿ ಸಿಲುಕಿರಬಹುದಾದ ಮೃತ ದೇಹ ಮತ್ತು,ವಾಹನ ಹಾಗೂ,ಮರ, ಕಟ್ಟಡದ ಅವಶೇಷಗಳ ಶೋಧ ಕಾರ್ಯಕ್ಕೆ ಬಲ ಸಿಗಲಿದೆ.
ಹೀಗಾಗಿ ಅಲ್ಲಿನ ಪರಿಣಿತರು ಮತ್ತು ತಂತ್ರಜ್ಞರು,ಈಗಾಗಲೇ ಅಂಕೋಲಕ್ಕೆ ಬಂದು,ಕಾರ್ಯಾಚರಣೆ ನಡೆಸಬೇಕಿರುವ ಸ್ಥಳದ ಪರಿಶೀಲನೆ ನಡೆಸಿದ್ದು, ಜಿಲ್ಲಾಡಳಿತಕ್ಕೆ ವರದಿ ಒಪ್ಪಿಸಲಿದ್ದಾರೆ. ಇದರಿಂದ ಮತ್ತೆ ಶೋಧ ಕಾರ್ಯಾಚರಣೆ ನಡೆಸುವ ಸಾಧ್ಯತೆಯತ್ತ ಮತ್ತೆ ಹೊಸ ಭರವಸೆ ಮೂಡುವಂತಾಗಿದೆ.

ಒಟ್ಟಿನಲ್ಲಿ ಜಗನ್ನಾಥ ನಾಯ್ಕ ಮತ್ತು ಲೋಕೇಶ್ ನಾಯ್ಕ ಇವರನ್ನು ಕಳೆದು ಕೊಂಡ ನೊಂದ ಕುಟುಂಬಗಳಿಗೆ,ಶೋಧ ಕಾರ್ಯಾಚರಣೆ ಮತ್ತೆ ಮುಂದುವರಿಸುವುದು ಹಾಗೂ ಸೂಕ್ತ ಪರಿಹಾರ ನೀಡುವ ಮೂಲಕ ಸರ್ಕಾರ ಮತ್ತು ಜನಪ್ರತಿನಿಧಿಗಳು ಸಾಂತ್ವನ ಹೇಳಬೇಕಿದೆ. ಇದೇ ವೇಳೆ ಕೇರಳದ ಅರ್ಜುನ್ ಮತ್ತು ಆತನ ಬೆಂಜ್ ವಾಹನವೂ ಪತ್ತೆಯಾಗಲಿ ಎನ್ನುವುದು ಮಾನವೀಯ ಹೃದಯಗಳ ಮಿಡಿತದ ಮಾತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button