Follow Us On

WhatsApp Group
Important
Trending

ಬೆಳ್ಳಂಬೆಳಿಗ್ಗೆ ಮನೆ ಬಾಗಿಲು ತೆಗೆದಾಗ ಶಾಕ್! ಬಾಗಿಲ ಮುಂದೆಯೇ ಮೊಸಳೆ ಪ್ರತ್ಯಕ್ಷ

ದಾಂಡೇಲಿ: ಬೆಳ್ಳಂಬೆಳಗ್ಗೆ ದಾಂಡೇಲಿ ನಗರದ ಅಂಬೇವಾಡಿಯಲ್ಲಿ ಇಂಡಿಯನ್ ಗ್ಯಾಸ್ ಕಾರ್ಯಾಲಯದ ಮುಂಭಾಗದಲ್ಲಿರುವ ಉದ್ಯಮಿ ಅರುಣಾದ್ರಿ ರಾವ್ ಅವರ ಮನೆಯ ಬಾಗಿಲ ಮುಂಭಾಗವೇ ಮೊಸಳೆಯೊಂದು ಪ್ರತ್ಯಕ್ಷವಾದ ಘಟನೆ ನಡೆದಿದೆ. ಬೆಳಿಗ್ಗೆ ಎದ್ದು ಅರುಣಾದ್ರಿ ರಾವ್ ಅವರು ಮನೆಯ ಬಾಗಿಲು ತೆರೆಯುತ್ತಿದ್ದಂತೆಯೇ ಮೊಸಳೆ ಪ್ರತ್ಯಕ್ಷವಾಗಿರುವುದನ್ನು ಗಮನಿಸಿದ್ದಾರೆ. ಮೊಸಳೆ ಬಂದಿರುವ ಸುದ್ದಿ ತಿಳಿದು ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ತಕ್ಷಣವೇ ಅರುಣಾದ್ರಿ ರಾವ್ ಅವರು ಉರಗ ಪ್ರೇಮಿ ರಜಾಕ್ ಶಾ ಅವರಿಗೆ ಮಾಹಿತಿಯನ್ನು ನೀಡಿದ್ದಾರೆ.

ಉತ್ತರಕನ್ನಡ ಜಿಲ್ಲೆಯ 429 ಕಡೆ ಗುಡ್ಡಕುಸಿತದ ಅಪಾಯ: ವರದಿ ನೀಡಿದ್ದಾರೆ ತಜ್ಞರು

ರಜಾಕ್ ಶಾ ಅವರು ಕೂಡಲೇ ತನ್ನ ಸಂಗಡಿಗರನ್ನು ಕಳುಹಿಸಿ ಸ್ಥಳೀಯರ ಸಹಕಾರದಲ್ಲಿ ಮೊಸಳೆ ಯನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಆದರೆ ಸ್ಥಳೀಯ ಜನತೆಯಲ್ಲಿ ಇದೀಗ ಭಯ ನಿರ್ಮಾಣವಾಗಿದೆ. ಈಗಾಗಲೆ ನಗರದಲ್ಲಿ ಐವರನ್ನು ಮೊಸಳೆ ಬಲಿ ಪಡೆದು ಕೊಂಡಿದೆ. ಅಲ್ಲದೆ, ಮೊನೆ ಮೊನ್ನೆಯಷ್ಟೆ, ಆಸ್ಪತ್ರೆಯ ಒಳಗಡೆ ಮೊಸಳೆಯ ಮರಿ ಪ್ರತ್ಯಕ್ಷವಾಗಿv, ಆತಂಕ ಮೂಡಿಸಿತ್ತು.

ವಿಸ್ಮಯ ನ್ಯೂಸ್, ದಾಂಡೇಲಿ

Back to top button