ಭೀಮನ ಅಮಾವಾಸ್ಯೆಯಂದೇ ಬ್ಲಾಕ್ ಮ್ಯಾಜಿಕ್: ಪಟ್ಟಣವ್ಯಾಪ್ತಿಯ ಮೂರು ರಸ್ತೆಗಳು ಕೂಡುವ ಸ್ಥಳದಲ್ಲಿ ವಾಮಾಚಾರ
ಲಿಂಬು, ಕರಿ ಮತ್ತು ಕೆಂಪು ದಾರ ಬಳಸಿ ಮಾಟ ಮಂತ್ರ
ಅಂಕೋಲಾ: ಪುರಸಭೆಯ ಕೊನೆಯ ವಾರ್ಡಿನ ಮೂರು ರಸ್ತೆಗಳು ಕೂಡುವ ಸ್ಥಳದಲ್ಲಿ ಅಮವಾಸ್ಯೆಯ ದಿನ ಯಾರೋ ವಾಮಾಚಾರ ನಡೆಸಿದ್ದಾರೆ. ಆಗಸ್ಟ್ 4 ರ ರವಿವಾರ ಬಂದ ಅಮಾವಾಸ್ಯೆಯನ್ನು, ಭೀಮನ ಅಮಾವಾಸ್ಯೆ,ಆಷಾಢ ಅಮಾವಾಸ್ಯೆ,ಗಟಾರ ಅಮಾವಾಸ್ಯೆ ಮತ್ತಿತರ ಹೆಸರುಗಳಿಂದ ಕರೆಯಲಾಗುತ್ತಿದ್ದು,ಹಿಂದೂ ಧಾರ್ಮಿಕ ಪದ್ಧತಿಯಲ್ಲಿ ಈ ದಿನ ತನ್ನದೇ ಆದ ವಿಶೇಷ ಪ್ರಾಮುಖ್ಯತೆ ಹೊಂದಿದೆ. ಅದೇ ದಿನದಂದು ಆದಾರೋ ಕಿಡಿಗೇಡಿಗಳು, ಗುಲಾಲು ಲೇಪಿಸಿದ ನಿಂಬೆಹಣ್ಣುಗಳು,ಅರಶಿನ,ಕುoಕುಮ,ಕಪ್ಪು ಮತ್ತು ಕೆಂಪು ದಾರ ಮತ್ತಿತರ ವಸ್ತುಗಳನ್ನು ಪುರಸಭೆಯ ಕೊನೆಯ ವಾರ್ಡಿನ, 3 ಪ್ರಮುಖ ರಸ್ತೆಗಳು ಕೂಡುವ ಸ್ಥಳದಲ್ಲಿ ಇಟ್ಟಿದ್ದಾರೆ.
ಕಳೆದ ವರ್ಷದಿಂದೀಚೆಗೆ ಇಲ್ಲಿ ವಾಮಾಚಾರಗಳು,ನಡೆಯುತ್ತಿದ್ದು, ಇತ್ತೀಚೆಗೆ ಪ್ರತಿ ಅಮವಾಸ್ಯೆಗೆ ಅತಿಯಾಗ ತೊಡಗಿದೆ.ಅದಾರದ್ದೋ ಮೌಡ್ಯಕ್ಕೆ,ಇದೇ ರಸ್ತೆ ಮಾರ್ಗವಾಗಿ ಓಡಾಡುವ ಕೆಲ ಮಹಿಳೆಯರು,ಮಕ್ಕಳು,ಮತ್ತಿತರರು ಭಯ ಹಾಗೂ ಆತಂಕ ಪಡುವಂತಾಗಿದೆ. ವಾಮಾಚಾರ ನಡೆಸಿರಬಹುದಾದ ವ್ಯಕ್ತಿಯನ್ನು ಗುರುತಿಸಲು ಹತ್ತಿರದಲ್ಲಿ ಸಿಸಿ ಕ್ಯಾಮೆರಾ ದೃಶ್ಯಾವಳಿ ಸಿಗುವಂತೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ವಾಮಾಚಾರ ನಡೆಸಿದವರ ಪಕ್ಕಾ ಗುರುತು ಪತ್ತೆಯಾದಲ್ಲಿ ,ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಸಾಧ್ಯತೆ ಕೇಳಿ ಬಂದಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ