Follow Us On

WhatsApp Group
Important
Trending

ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರಿಗೆ ಕಿರುಕುಳ: ಬಸ್ಸಿಳಿದು ಓಡಿಹೋದ: ಏನಾಯ್ತು ನೋಡಿ?

ದಾಂಡೇಲಿ: ಬೆಂಗಳೂರಿನಿoದ ಪ್ರಯಾಣಿಕರೊಂದಿಗೆ ದಾಂಡೇಲಿಗೆ ಬರುತ್ತಿದ್ದ ಖಾಸಗಿ ಬಸ್‌ನಲ್ಲಿ ತಡ ರಾತ್ರಿಯ ಸಮಯದಲ್ಲಿ ಹಾಗೂ ನಸುಕಿನ ವೇಳೆಯಲ್ಲಿ ಬಸ್ಸಿನ ಕ್ಲೀನರ್ ನಿದ್ರಿಸುತ್ತಿದ್ದ ಮಹಿಳಾ ಪ್ರಯಾಣಿಕರಿಗೆ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಆಕ್ರೋಶಗೊಂಡ ಮಹಿಳಾ ಪ್ರಯಾಣಿಕರು ತಕ್ಷಣವೇ ಕ್ಲೀನರಿಗೆ ಧರ್ಮದೇಟು ನೀಡಿದ್ದಾರೆ.

ಶಾಲೆಯ ಪಕ್ಕದಲ್ಲೇ ಬಾಯ್ತೆರೆದುಕೊಂಡಿದೆ ಗುಡ್ಡ: ಕುಸಿಯುವ ಭೀತಿ ಮಧ್ಯೆಯೇ ಓದುತ್ತಿದ್ದಾರೆ 400ಕ್ಕೂ ಅಧಿಕ ವಿದ್ಯಾರ್ಥಿಗಳು

ಇದಾದ ಸ್ವಲ್ಪ ಸಮಯದಲ್ಲಿ ಕ್ಲೀನರ್ ಬಸ್ಸಿನಿಂದ ಇಳಿದು ಪರಾರಿಯಾಗಿದ್ದಾನೆ. ಬಸ್ ದಾಂಡೇಲಿಗೆ ಬಂದ ತಕ್ಷಣವೇ ಈ ಮಹಿಳಾ ಪ್ರಯಾಣಿಕರು ಬಸ್ಸಿನ ಚಾಲಕರಿಬ್ಬರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ತಕ್ಷಣವೇ ದಾಂಡೇಲಿ ನಗರ ಠಾಣೆಯ ಎಎಸ್‌ಐ ಬಸವರಾಜ್ ಒಕ್ಕುಂದ ಅವರು ಪೊಲೀಸರ ಜೊತೆ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಕ್ಲೀನರ್‌ನ ಕಿರುಕುಳದಿಂದ ಆಕ್ರೋಶಿತಗೊಂಡ ಮಹಿಳಾ ಪ್ರಯಾಣಿಕರು ಕ್ಲೀನರ್ ಮೇಲೆ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button