Follow Us On

WhatsApp Group
Important
Trending

ರೈಲು ಅಪಘಾತ: ಕೆಳಕ್ಕೆ ಜಾರಿದ 11 ಬೋಗಿಗಳು

ಜೋಯಿಡಾ : ನೈರುತ್ಯ ರೈಲ್ವೆ ವಿಭಾಗದ ಹುಬ್ಬಳ್ಳಿ ವಲಯ ವ್ಯಾಪ್ತಿಯಲ್ಲಿ,ರೈಲೊಂದು ಹಳಿ ತಪ್ಪಿ,11 ಬೋಗಿಗಳು ಕೆಳಕ್ಕೆ ಜಾರಿದ ಘಟನೆ ಕ್ಯಾಸಲ್ ರಾಕ್ ಬಳಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ದೂದ್ ಸಾಗರ ಹಾಗೂ ಸೋನಾಲಿಮ್ ಸ್ಟೇಶನ್ ನಡುವೆ ಈ ಆಕಸ್ಮಿಕ ಅವಘಡ ನಡೆದಿದ್ದು ಕಲ್ಲಿದ್ದಲು ಹೊತ್ತ ರೈಲಿನ ಸುಮಾರು 11 ಬೋಗಿ ಕೆಳಕ್ಕೆ ಜಾರಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ಈ ರೈಲ್ವೆ ಅವಘಡದಿಂದಾಗಿ ಶುಕ್ರವಾರ ಸಂಜೆ ಹೊರಡುವ ವಾಸ್ಕೊ -ನಿಜಾಮುದ್ದಿನ್ ರೈಲು ಮಾರ್ಗ ಬದಲಾಯಿಸುವ ಸಾಧ್ಯತೆ ಇದೆ. ಅದರಂತೆ ಹುಬ್ಬಳ್ಳಿ, ಬೆಳಗಾವಿಯಿಂದ ಗೋವಾಕ್ಕೆ ಸಂಚರಿಸುವ ರೈಲಿನಲ್ಲಿ ವ್ಯತ್ಯಯವಾಗುವ ಸಾಧ್ಯತೆ ಕೇಳಿ ಬಂದಿದೆ. ಘಟನೆಯಿಂದಾಗಿ ಮಡಗಾಂವ ನಿಂದ ಬೆಳಗಾವಿ ಮತ್ತು ಹುಬ್ಬಳ್ಳಿ ಕಡೆ ತೆರಳುವ ರೈಲುಗಳ ಸಂಚಾರದಲ್ಲಿಯೂ ವ್ಯತ್ಯಯ ಉಂಟಾಗಿದೆ ಇದು ಪ್ರಯಾಣಿಕ ರೈಲ್ ಆಗಿರದೇ ಇರುವುದು ಮತ್ತು ಗೂಡ್ಸ್ ರೈಲಾಗಿದ್ದು,ಅದೃಷ್ಟ ವಶಾತ್ ಸಂಭವನೀಯ ಅನಾಹುತ ತಪ್ಪಿದಂತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button