ಎಲೆ ಅಡಿಕೆ ಹಾಕಿ ಕಂಡಕಂಡಲ್ಲಿ ಉಗುಳಿದ್ರೆ ಹುಷಾರ್! 61 ಜನರ ಮೇಲೆ ಕೇಸ್

ಶಿರಸಿ: ಕಂಡ ಕಂಡಲ್ಲಿ ಕವಳ ಮತ್ತು ಪಾನ್ ಮಸಾಲಾ ಉಗುಳುವವರ ಮೇಲೆ ಪೊಲೀಸರು `ಕಠಿಣ ಕ್ರಮ’ ಕೈಗೊಂಡಿದ್ದಾರೆ. ಪಟ್ಟಣ ವ್ಯಾಪ್ತಿಯಲ್ಲಿ ಒಂದು ತಾಸು ನಡೆಸಿದ ಕಾರ್ಯಾಚರಣೆಯಲ್ಲಿ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ, 61 ಜನ ಸಿಕ್ಕಿಬಿದ್ದಿದ್ದು, ಇವರ ಮೇಲೆ ಕೇಸ್ ದಾಖಲಿಸಲಾಗಿದೆ. ಕವಳದ ಜೊತೆ ಗುಟಕಾ ಸೇವಿಸಿ ರಸ್ತೆಯಲ್ಲಿ ಉಗುಳುವವರ ವಿರುದ್ಧ ಸಹ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಯಿತು.

ಇದನ್ನೂ ಓದಿ: Hescom Recruitment 2024: ಹೆಸ್ಕಾಂ ನೇಮಕಾತಿ: 338 ಹುದ್ದೆಗಳು: ಪದವಿ & ಡಿಪ್ಲೋಮಾ ಆದವರು ಅರ್ಜಿ ಸಲ್ಲಿಸಿ

ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ವಾಹನಗಳ ಮೇಲೆ ಸಂಚರಿಸುವಾಗ ಅನೇಕರು ಕವಳ ಉಗಿಯುತ್ತಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದನ್ನು ಗಮನಿಸಿದ ಪೊಲೀಸ್ ಅಧೀಕ್ಷಕ ಎಮ್ ನಾರಾಯಣ್ ತುರ್ತು ಕ್ರಮಕ್ಕೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ಹೀಗಾಗಿ ಇನ್ಮುಂದೆ ಎಲೆ ಅಡಿಕೆ ಹಾಕಿ ಕಂಡಕಂಡಲ್ಲಿ ಉಗುಳುವ ಮುನ್ನ ಎಚ್ಚರವಾಗಿರಿ. ಸಾರ್ವಜನಿಕ ಸ್ಥಳದಲ್ಲಿ ಉಗಿದರೆ ನ್ಯಾಯಾಲಯಕ್ಕೆ ಅಲೆದಾಟ ಮಾಡುವ ಪರಿಸ್ಥಿತಿ ಬರಬಹುದು,!

ವಿಸ್ಮಯ ನ್ಯೂಸ್, ಶಿರಸಿ

Exit mobile version