Follow Us On

WhatsApp Group
Important
Trending

ವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಚಿರತೆ: ಸಾರ್ವಜನಿಕರಲ್ಲಿ ಆತಂಕ

ಯಲ್ಲಾಪುರ: ಪಟ್ಟಣ ಸಮೀಪದ ವಸತಿ ಪ್ರದೇಶದಲ್ಲಿ ಚಿರತೆಯೊಂದು ಕಾಣಿಸಿಕೊಂಡು ಆತಂಕ ಮೂಡಿಸಿದೆ. ಹೌದು, ಇಲ್ಲಿನ ಜೋಗದಮನೆ ಅಂಗಳದಲ್ಲಿ ಚಿರತೆ ಓಡಾಟ ನಡೆಸಿದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಹಿಂದೆ ಸಹ ಸಮೀಪದ ಅರಣ್ಯ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಆದರೆ, ಚಿರತೆ ಚಲನ-ವಲನ ಸೆರೆಯಾಗಿದ್ದು ಇದೇ ಮೊದಲು.

ಯಲ್ಲಾಪುರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಬರುವ ಈ ಪ್ರದೇಶ ಪಟ್ಟಣದಿಂದ ಕೇವಲ 4 ಕಿ.ಮೀ ಅಂತರದಲ್ಲಿದೆ. ತೋಟಗಾರಿಕಾ ಪ್ರದೇಶದಿಂದ ಬಂದ ಓಡಾಡ ನಡೆಸಿ, ರಸ್ತೆ ಮೂಲಕ ಮತ್ತೆ ಕಾಡು ಸೇರಿದೆ. ಚಿರತೆ ಬಂದ ಹಾಗೂ ಹೋದ ಮಣ್ಣಿನ ಪ್ರದೇಶದಲ್ಲಿ ಹೆಜ್ಜೆ ಗುರುತುಗಳಾಗಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Back to top button