Follow Us On

WhatsApp Group
Important
Trending

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೂತನ ಕಾರ್ಯಾಲಯ ಶುಭಾರಂಭ

ಹೊನ್ನಾವರ: ಪಟ್ಟಣದ ಬಜಾರ ರಸ್ತೆಯಲ್ಲಿ ಕಾಂಗ್ರೇಸ್ ಪಕ್ಷದ ಹೊನ್ನಾವರ ಬ್ಲಾಕ್ ಅಧ್ಯಕ್ಷರ ಕಾರ್ಯಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಉದ್ಘಾಟಿಸಿದರು. ಬ್ಲಾಕ್ ಅಧ್ಯಕ್ಷರಾಗಿ ಮಹೇಶ ನಾಯ್ಕ ಆಯ್ಕೆ ಬಳಿಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೂತನ ಕಾರ್ಯಾಲಯವನ್ನು ಬದಲಾವಣೆ ಮಾಡಿದ್ದು, ನೂತನ ಕಾರ್ಯಾಲಯವನ್ನು ಸಚಿವರು ಉದ್ಘಾಟಿಸಿ ಮಾತನಾಡಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಬಲವರ್ಧನೆಗೊಳಿಸುವಂತೆ ನೂತನ ಅಧ್ಯಕ್ಷರಿಗೆ ಸೂಚಿಸಿದರು.

ಜಿಲ್ಲಾಧ್ಯಕ್ಷ ಸಾಯಿ ಗಾವಂಕರ್ ಮಾತನಾಡಿ ಪ್ರತಿ ತಿಂಗಳು ಸಭೆ ನಡೆಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಜೊತೆ ಪಕ್ಷವನ್ನು ಗಟ್ಟಿಗೊಳಿಸಬೇಕು. ಕಾಂಗ್ರೇಸ್ ಭದ್ರಕೋಟೆಯಾಗಿರುವ ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಮುಂಬರುವ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಸೂಚಿಸಿದರು.

ಮಾಜಿ ಸಚಿವರಾದ ಆರ್.ಎನ್.ನಾಯ್ಕ ಮಾತನಾಡಿ ಜನಪ್ರತಿನಿಧಿಗಳು, ಹಾಗೂ ಪಕ್ಷದ ಹುದ್ದೆ ಬಯಸುವವರು ವೃತಿಯಾಗಿ ನಂಬಿ ಬರಬಾರದು. ಯಾವುದೇ ಹುದ್ದೆ ಯಾರಿಗೂ ಶಾಶ್ವತವಲ್ಲ ಎನ್ನುವುದನ್ನು ಅರಿತು ಕೆಲಸ ಮಾಡಬೇಕು. ಬೇರೆಯವರಿಗೆ ಪಕ್ಷ ಜವಾಬ್ದಾರಿ ನೀಡಿದಾಗ ಬೊಬ್ಬೆ ಎರೆಯುದಕ್ಕಿಂತ ತಮ್ಮ ಅವಧಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಕೆ.ಪಿ.ಸಿ.ಸಿ ಕಾರ್ಯದರ್ಶಿ ನಿವೇದಿತ್ ಆಳ್ವಾ ಮಾತನಾಡಿ ಮಾಜಿ ಪ್ರಧಾನಿ ರಾಜೀವ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು, ಜನ್ಮದಿನದಂದೆ ಕಾರ್ಯಲಯ ಉದ್ಘಾಟನೆಗೊಳ್ಳುತ್ತಿದೆ. ಎಲ್ಲರ ಪರಿಶ್ರಮದಿಂದ ಪಕ್ಷ ಸಂಘಟಿಸಿ ಮುಂಬರುವ ಸ್ಥಳಿಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದರು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಮಹೇಶ ನಾಯ್ಕ ಇವರನ್ನು ಸನ್ಮಾನಿಸಿ ಗೌರವಿಸಿ ಜವಬ್ದಾರಿ ನೀಡಲಾಯಿತು.

ಈ ಸಂದರ್ಭದಲ್ಲಿ ಸತೀಶ ನಾಯ್ಕ, ಬ್ಲಾಕ್ ಅಧ್ಯಕ್ಷರಾದ ಗೋವಿಂದ ನಾಯ್ಕ, ಭುವನ ಭಾಗ್ವತ್, ಪಕ್ಷದ ಮುಖಂಡರಾದ ಎಂ.ಎನ್.ಸುಬ್ರಹ್ಮಣ್ಯ ಕೇಶವ ಮೇಸ್ತ, ಚಂದ್ರಶೇಖರ ಗೌಡ, ಯೊಗೀಶ ರಾಯ್ಕರ್, ಮಾಜಿ ಜಿ.ಪಂ.ಸದಸ್ಯ ಕೃಷ್ಣ ಗೌಡ, ವಿನೋದ ನಾಯ್ಕ ಕರ್ಕಿ, ಕೃಷ್ಣ ಮಾರಿಮನೆ ಬಾಲಚಂದ್ರ ನಾಯ್ಕ, ಎಸ್.ಡಿ.ಹೆಗಡೆ, ಅಣ್ಣಪ್ಪ ನಾಯ್ಕ, ಪುಷ್ಪಾ ನಾಯ್ಕ, ಜೊಸ್ಪಿನ್ ಡಯಾಸ್ ಜೈನಾಬಿ ಸಾಬ್ ಮತ್ತಿತರರು ಇದ್ದರು.

ವಿವೇಕ್ ಶೇಟ್, ವಿಸ್ಮಯ ನ್ಯೂಸ್ ಹೊನ್ನಾವರ

Back to top button