Follow Us On

WhatsApp Group
Important
Trending

ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೋದ ಮಹಿಳೆ ನಾಪತ್ತೆ: ಪತಿಯ ದೂರಿನಲ್ಲಿ ಏನಿದೆ ನೋಡಿ?

ಕುಮಟಾ: ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೋದ ಮಹಿಳೆಯೋರ್ವಳು ಕಾಣೆಯಾದ ಘಟನೆ ಕುಮಟಾ ತಾಲೂಕಿನ ಸಾಂತಗಲ್‌ನಲ್ಲಿ ನಡೆದಿದೆ. ಕ್ಯಾಶ್ಯೂ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸಾಂತಗಲ್‌ನ ನಿವಾಸಿ ಶಿಲ್ಪಾ ನಾಯ್ಕ ಕಾಣೆಯಾದ ಮಹಿಳೆ. ಇವರು ಶುಕ್ರವಾರದಂದು ಬೆಳಿಗ್ಗೆ 11:30ರ ಸುಮಾರಿಗೆ ಅನಾರೋಗ್ಯದ ಕಾರಣ ಸಂತೇಗುಳಿಯಲ್ಲಿರುವ ಪ್ರಾಥಮಿಕ ಆಸ್ಪತ್ರೆಗೆ ಹೋಗಿಬರುತ್ತೇನೆಂದು ಹೋದವರು, ನಾಪತ್ತೆಯಾಗಿದ್ದಾರೆ.

ಇವರೆಗೂ ಮರಳಿ ಮನೆಗೆ ಬಾರದೇ, ಸಂಬoಧಿಕರ ಮನೆಗೂ ಹೋಗದೆ, ಕಾಣೆಯಾಗಿದ್ದಾಳೆ. ನನ್ನ ಹೆಂಡತಿಯನ್ನು ಹುಡುಕಿಕೊಡಿ ಎಂದು ಪತಿ ರಮೇಶ ನಾಯ್ಕ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಕೋರಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: PGCIL Recruitment 2024: 38 ಹುದ್ದೆಗಳು: 1 ಲಕ್ಷದ ವರೆಗೆ ವೇತನ: ಐಟಿಐ & ಡಿಪ್ಲೊಮಾ ಆದವರು ಅರ್ಜಿ ಸಲ್ಲಿಸಿ: Apply Now

ಕುಮಟಾ: ಪರೀತ ಸಾರಾಯಿ ಕುಡಿತದ ಚಟ ಹೊಂದಿದ್ದ ವ್ಯಕ್ತಿಯೋರ್ವ ಕುಡಿತದ ಚಟದಿಂದಲೋ ಅಥವಾ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಮಟಾ ಪಟ್ಟಣದ ಸಮೀಪದ ರೈಲ್ವೆ ಹಳಿಯಲ್ಲಿ ಹೊನ್ನಾವರದಿಂದ ಕಾರವಾರಕ್ಕೆ ತೆರಳುವ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವ್ಯಕ್ತಿ ಕುಮಟಾ ಹೆರವಟ್ಟಾದ ಗೌರೀಶ ಮಾದೇವ ಗೌಡ ಎಂದು ತಿಳಿದು ಬಂದಿದೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ನಾಗೇಶ್ ದೀವಗಿ, ಕುಮಟಾ

Back to top button