Follow Us On

WhatsApp Group
Important
Trending

ಮಹಿಳೆಗೆ ಅವಮಾನಕರ ರೀತಿಯಲ್ಲಿ ಹಲ್ಲೆ : ಮೇಯಲು ಬಿಟ್ಟ ದನ ಕರುಗಳನ್ನು ನೋಡಲು ಹೋದಾಗ ನಡೆದಿದ್ದೇನು?

ಮಹಿಳೆ ನೀಡಿದ ದೂರಿನಲ್ಲಿ ಏನಿದೆ ನೋಡಿ?

ಅಂಕೋಲಾ: ಮಹಿಳೆ ಓರ್ವಳಿಗೆ ಅವಮಾನಕರ ರೀತಿಯಲ್ಲಿ ಹಲ್ಲೆ ನಡೆಸಿ ಮತ್ತು ಆಕೆಯ ಪತಿಯ ಮೇಲೆಯೂ ದೊಣ್ಣೆಯಿಂದ ಹಲ್ಲೆ ನಡೆಸಿ, ಅವರ ಕುಟುಂಬಕ್ಕೆ ಜೀವಬೆದರಿಕೆ ಒಡ್ಡಿದ್ದಾನೆ ಎನ್ನಲಾದ ಆರೋಪದ ಮೇಲೆ ಹಿಲ್ಲೂರಿನ ಪ್ರವೀಣ ರಾಮಚಂದ್ರ ನಾಯಕ (45 ವರ್ಷ) ವಿರುದ್ದ ಅಂಕೋಲಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಉತ್ತರಕನ್ನಡದಲ್ಲಿದೆ ನಾಲ್ಕು ಗುಡ್ಡದಪ್ರದೇಶ ತೀವ್ರ ಅಪಾಯಕಾರಿ ಸ್ಥಳ: ಜಿಎಸ್‌ಐ ತಂಡ ನೀಡಿದ ಮಾಹಿತಿಯಲ್ಲೇನಿದೆ ನೋಡಿ?

ನೊಂದ ಮಹಿಳೆ ಹಿಲ್ಲೂರು ಮಾಗೋಡಿನ ಉಮಾ ಮಹಾದೇವ ಹರಿಕಂತ್ರ ದೂರಿನಲ್ಲಿ ತಿಳಿಸಿದಂತೆ, ತಾನು ಮತ್ತು ತನ್ನ ಗಂಡ ಮಹಾದೇವ ಹರಿಕಂತ್ರ ಅವರೊಂದಿಗೆ ಹಿಲ್ಲೂರು ಮಾಗೋಡಿನ ಬೆಟ್ಟದಲ್ಲಿ ಮೇಯಲು ಬಿಟ್ಟ ದನಕರುಳನ್ನು ಹುಡುಕುತ್ತಾ ಹೋದಾಗ, ಈ ಹಿಂದಿನಿಂದಲೂ ನಮ್ಮ ಕುಟುಂಬದೊಂದಿಗೆ ವೈಮನಸ್ಸಿನಿಂದ ಇದ್ದ,ಆರೋಪಿ ಪ್ರವೀಣ ನಾಯಕ, ಸ್ಥಳೀಯ ಹುಲಿದೇವರ ದೇವಸ್ಥಾನದ ಸಮೀಪದಲ್ಲಿ ತಮ್ಮನ್ನು ಅಡ್ಡಗಟ್ಟಿ, ನನ್ನ ಗಂಡನಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ಮೈಮೇಲೆ ಹಲ್ಲೆ ನಡೆಸಿದ್ದಾನೆ.

ತಡೆಯಲು ಹೋದ ನನಗೂ ಅವ್ಯಾಚವಾಗಿ ನಿಂದಿಸಿ,ಸೀರೆ ಎಳೆದು, ಬಟ್ಟೆಗಳನ್ನು ಹರಿದು ಹಲ್ಲೆ ನಡೆಸಿದ್ದಾನೆ. ನಂತರ ಮತ್ತೆ ನನ್ನ ಗಂಡನಿಗೆ ಕಲ್ಲಿನಿಂದ ಹಲ್ಲೆ ಮಾಡಲು ಮುಂದಾಗಿದ್ದಲ್ಲದೇ, ಊರಿನಲ್ಲಿ ಯಾರಿಗಾದರೂ ತಿಳಿಸಿದರೆ ಅಥವಾ ಈ ಕುರಿತು ಪೊಲೀಸ್ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಹಲ್ಲೆಯಿಂದ ಆಘಾತಗೊಂಡ ನನ್ನ ಗಂಡ ಮಹಾದೇವ ಹರಿಕಂತ್ರ ಊರಿನ ಹಿರಿಯರಿಗೆ ವಿಷಯ ತಿಳಿಸಿ ಸಹಾಯ ಯಾಚಿಸಲು ಹೊರಟಾಗ ಹಿಲ್ಲೂರು ಹೊಳೆಮಕ್ಕಿ ಕ್ರಾಸ್ ಬಳಿ ಮತ್ತೆ ಪ್ರವೀಣ್ ನಾಯಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button