Follow Us On

WhatsApp Group
Big News
Trending

ವಸತಿ ಯೋಜನೆ ಫಲಾನುಭವಿಗಳಿಗೆ ಹಣ ನೀಡುವಂತೆ ಪುರಸಭೆಗೆ ಮನವಿ

ನೆ ಕಟ್ಟಲು ಮುಂದಾಗುವ ಮೊದಲು ಸರ್ಕಾರದ ಸಹಾಯಧನ ಎಷ್ಟು ತಿಳಿದುಕೊಳ್ಳಿ.

ಅಂಕೋಲಾ : ಪುರಸಭೆಯ ವ್ಯಾಪ್ತಿಯಲ್ಲಿನ 2017-18ನೇ ಸಾಲಿನಿಂದ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಸರ್ಕಾರದ ಹಣ ಸಿಗುವುದೆಂಬ ಆಶಾ ಭಾವನೆಯಲ್ಲಿ ಕೆಲವರು ಈಗಾಗಲೇ ಅರ್ಧ ಮನೆಗಳನ್ನು ಕಟ್ಟಿಕೊಂಡಿದ್ದು, ಜಿ. ಪಿ. ಎಸ್ ಆದರೂ ಕೆಲವರಿಗೆ ನಯಾ ಪೈಸೆಯೂ ಬಂದಿಲ್ಲ, ಕೆಲವರು ಪೂರ್ತಿ ಮನೆ ಕಟ್ಟಿಕೊಂಡಿದ್ದಾರೆ.

ಅಧಿಕಾರಿಗಳಿಗೆ ಕೇಳಿದರೆ ಕೇಂದ್ರ ಯೋಜನೆಯಡಿ ಕೇವಲ 1.5 ಲಕ್ಷ ರೂ. ಮಾತ್ರ ಎನ್ನುತ್ತಿದ್ದಾರೆ. 2017 ಕ್ಕಿಂತ ಪೂರ್ವದಲ್ಲಿ ವಸತಿ ಯೋಜನೆಯಡಿ 2.75 ಲಕ್ಷ ರೂ.ನ್ನು ಬೇರೆಯವರಿ ನೀಡಿರುವಾಗ ನಮಗೇಕೆ ಈ ತಾರತಮ್ಯ, ಈ ಕುರಿತು ಶಾಸಕರಲ್ಲೂ ಮನವಿ ಸಲ್ಲಿಸಿದ್ದು ಮುಖ್ಯಮಂತ್ರಿಗಳಿಗೂ ಪತ್ರ ಬರೆದಿದ್ದೇವೆ ಆದರೆ ಯಾವ ಉತ್ತರವೂ ಬಂದಿಲ್ಲ. ಬ್ಯಾಂಕುಗಳಲ್ಲಿ, ಸ್ಪ ಸಹಾಯ ಸಂಘಗಳಲ್ಲಿ ಸಾಲ ಮಾಡಿ, ಬಂಗಾರ ದಾಗೀನೆಗಳನ್ನು ಅಡಮಾನ ಇಟ್ಟು ಮನೆ ಕಟ್ಟಿಕೊಂಡಿದ್ದೇವೆ.

ಸಾಲ ಕೊಟ್ಟವರು, ಸಾಲ ತುಂಬದಿದ್ದರೆ ಮನೆ ಜಪ್ತಿ ಮಾಡುತ್ತೇವೆ ಎನ್ನುತ್ತಾ ಬರುತ್ತಾರೆ. ಹೀಗಾಗಿ ನಮಗೆ 1.50 ಲಕ್ಷದ ಹೊರತಾಗಿ ಹೆಚ್ಚಿನ ಹಣವನ್ನು ಬಿಡುಗಡೆ ಮಾಡುವಂತೆ ಮನವಿ ನೀಡಿ ವಿನಂತಿಸಿದ್ದಾರೆ. ಮನವಿದಾರರ ಪರ ಆಗಮಿಸಿದ್ದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಗಾಂವಕರ ಮಾತನಾಡಿ ಹಿಂದಿನ ಅವಧಿಯಲ್ಲಿ ಅಧಿಕಾರದಲ್ಲಿದ ಸರಕಾರ ವಸತಿ ಯೋಜನೆಯಲ್ಲಿ ಮನೆಗಳನ್ನೇ ಮಂಜೂರಿ ಮಾಡಿರಲಿಲ್ಲ ಹೀಗಾಗಿ ಫಲಾನುಭವಿಗಳು ರಾಜ್ಯದ ಯೋಜನೆಯಿಂದ ವಂಚಿತರಾಗಬೇಕಾದ ಪರಿಸ್ಥಿತಿ ಎದುರಾಗಿದೆ. ಮಾನವೀಯ ನೆಲೆಯಲ್ಲಿ ಸಾಧ್ಯವಾದರೆ ಹೊಸದಾಗಿ ಪ್ರಸ್ತಾವನೆಯನ್ನು ಕಳುಹಿಸಿ ಹೆಚ್ಚಿನ ಹಣ ಮಂಜೂರಿಗೆ ಪ್ರಯತ್ನಿಸಬೇಕೆಂದು ಮುಖ್ಯಾಧಿಕಾರಿಯಲ್ಲಿ ವಿನಂತಿಸಿದರು.

ಪುರಸಭೆಯ ಮುಖ್ಯಾಧಿಕಾರಿ ಎಚ್ ಅಕ್ಷತಾ ಮನವಿಯನ್ನು ಸ್ವೀಕರಿಸಿ 2017-18 ನೇ ಸಾಲಿನಲ್ಲಿ ಕೇಂದ್ರದ ವಸತಿ ಯೋಜನೆಯಲ್ಲಿ ಮಾತ್ರ ಮನೆ ಮಂಜೂರಾಗಿದ್ದು ಕೇಂದ್ರದ ಹಣ ಮಾತ್ರ ಜಮಾ ಆಗಿದೆ. ಮಾಹಿತಿಯ ಕೊರತೆಯಿಂದ ಇಂತಹ ಸಮಸ್ಯೆ ಎದುರಾಗಿರಬಹುದು. ಸರ್ಕಾರ ಮನೆ ನಿರ್ಮಿಸಿಕೊಳ್ಳಲು ಸಹಾಯಧನ ರೂಪದ ನೆರವು ನೀಡುತ್ತದೆ. ಆದರೆ ಅದನ್ನೇ ತಪ್ಪಾಗಿ ಅರ್ಥೈಸಿಕೊಳ್ಳುವ ಕೆಲವರು,ಪೂರ್ತಿ ಮನೆ ಕಟ್ಟಿಕೊಳ್ಳುವಷ್ಟು ಹಣ ಬರಬಹುದು ಎಂದು,ಯೋಚಿಸಿ ಮನೆ ಕಟ್ಟಿಕೊಳ್ಳುವ ಯೋಜನೆಗೆ ಮುಂದಾದರೆ ಇಂತಹ ಪರಿಸ್ಥಿತಿ ತಲೆದೋರುತ್ತದೆ.

ಇಲ್ಲಿನ ಫಲಾನುಭವಿಗಳ ಸಮಸ್ಯೆ ಕುರಿತು,ಈ ಹಿಂದೆ ಅಧಿಕಾರದಲ್ಲಿದ್ದವರು,ಸರ್ಕಾರದ ಗಮನ ಸೆಳೆಯುವ ಯತ್ನ ಮಾಡಿದ್ದಾರೆ. ಪುರಸಭೆಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ,ಹಳೆಯ ಉಲ್ಲೇಖದಂತೆ ಮತ್ತೊಮ್ಮೆ ಬೇಕಾದರೆ ನಿಮ್ಮ ಪರವಾಗಿ ಸರ್ಕಾರಕ್ಕೆ ತಿಳಿಸುತ್ತೇವೆ.ವರ್ಕ್ ಆರ್ಡರ್ ಇಲ್ಲದೇ ಕಾಮಗಾರಿ ನಡೆಸಬಾರದು. ಮುಂದಿನ ದಿನಗಳಲ್ಲಿ ಫಲಾನುಭವಿಗಳಿಗೆ ಸೂಕ್ತ ಮಾಹಿತಿ ಮತ್ತು ವರ್ಕ್ ಆರ್ಡರ್ ನೀಡುವ ಬಗ್ಗೆ ಕ್ರಮ ವಹಿಸಲಾಗುವದು ಎಂದರು. ಪುರಸಭೆಯ ಸದಸ್ಯ ಕಾರ್ತಿಕ ನಾಯ್ಕ, ಪ್ರಕಾಶ ಗೌಡ ಉಪಸ್ಥಿತರಿದ್ದು ಫಲಾನುಭವಿಗಳ ಕಷ್ಟಕ್ಕೆ ಶಾಸಕರೊಂದಿಗೆ ಚರ್ಚಿಸಿ ಪರಿಹಾರಕ್ಕೆ ಯತ್ನಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಫಲಾನುಭವಿಗಳಾದ ಲಕ್ಷ್ಮೀ ಗುರು ಗೌಡ, ಗಣಪತಿ ಬೀರಾ ಗೌಡ, ಗಂಗೆ ಸುಕ್ರು ಗೌಡ, ಅಶೋಕ ಬೊಮ್ಮು ಗೌಡ, ರೋಹಿಣಿ ಉದಯ ಗೌಡ, ಉಮಾ‌ ಮೀರಾ‌ ನಾಯ್ಕ, ಮಾರುತಿ ನಾಯ್ಕ, ಉದಯ ಹೊನ್ನಪ್ಪ ಗೌಡ, ದತ್ತು ಗೌಡ, ಭವಾನಿ ಸಿ ಗೌಡ, ಲಕ್ಷ್ಮೀ ಮಂಗು ಗೌಡ, ಸೋಮಿ ಬೊಮ್ಮು ಗೌಡ, ಸುಮಿತ್ರಾ ದಾಮೋದರ ಗೌಡ, ಸುಧಾ ದಿಗಂಬರ ಗೌಡ, ಶಸಿಕಲಾ ಬಾಬು ಗೌಡ ಮತ್ತಿತರರಿದ್ದರು. ಸರ್ಕಾರದ ಯೋಜನೆಗಳು ಜನರಿಗೆ ತಲುಪುವಂತಾಗಲು,ಯೋಜನೆ ಜಾರಿಗೊಳಿಸುವ ಪೂರ್ವ ಸಂಬಂಧಿಸಿದವರಿಗೆ ಅತ್ಯಗತ್ಯ ಮಾಹಿತಿ ಮತ್ತು ತಿಳುವಳಿಕೆ ನೀಡಿದರೆ,ಅವರಲ್ಲಿ ಇರಬಹುದಾದ ಮಾಹಿತಿ ಕೊರತೆ ದೂರವಾಗಿ,ಯಾರೆಲ್ಲ ಫಲಾನುಭವಿಗಳಾಗಬಹುದು? ಈ ಯೋಜನೆ ಅಡಿ ಎಷ್ಟು ಹಣ ಸಿಗುತ್ತದೆ ಎಂಬಿತ್ಯಾದಿ ಅಂಶಗಳನ್ನು ಮನಗಂಡು,ಹೆಚ್ಚುವರಿಯಾಗಿ ತಾವು ಮನೆ ನಿರ್ಮಿಸಿಕೊಳ್ಳಲು ಹೇಗೆಲ್ಲ ಹಣ ಹೊಂದಿಸಿಕೊಳ್ಳಬಹುದು ಎಂದು ಯೋಚಿಸಿ ಯೋಜಿಸಿ ಕಾರ್ಯರೂಪಕ್ಕೆ ತರಲು ಅನುಕೂಲವಾಗುತ್ತದೆ.ಇಲ್ಲದಿದ್ದರೆ ಕೆಲವೊಮ್ಮೆ ಇರುವ ಹಳೆಯ ಮನೆಯನ್ನು ಮುರಿದುಕೊಂಡು,ಹೊಸಮನೆಯನ್ನು ಪೂರ್ತಿ ಕಟ್ಟಲಾಗದೆ, ಸಾಲ -ಶೂಲ ಮಾಡಿಕೊಂಡು ಪರಿತಪಿಸುವಂತಾಗುತ್ತದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button