Follow Us On

WhatsApp Group
Important
Trending

ಉತ್ತರಕನ್ನಡದ ಹಲವೆಡೆ NIA ದಾಳಿ: ಸೂಕ್ಷ್ಮ ಮಾಹಿತಿ ಸೋರಿಕೆ? ಮೂವರು ವಶಕ್ಕೆ

ಗೌಪ್ಯ ಸ್ಥಳದಲ್ಲಿ ವಶಕ್ಕೆ ಪಡೆದವರ ವಿಚಾರಣೆ

ಉತ್ತರಕನ್ನಡ : ಕಾರವಾರದ ಸೀಬರ್ಡ್ ನೌಕಾನೆಲೆ‌ ಕುರಿತ‌ ಕೆಲ ಮಹತ್ವದ ಅತಿಸೂಕ್ಷ್ಮ ಮಾಹಿತಿಯನ್ನ ಸೋರಿಕೆ ಮಾಡಲಾಗದೆ ಎನ್ನುವ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿದ್ದು, ಮೂವರನ್ನ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಸೀಬರ್ಡ್ ನೌಕಾನೆಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೂವರು, ನೌಕಾನೆಲೆಯ ಅ ಮಹತ್ವ ಮಾಹಿತಿಯನ್ನ ಸೋರಿಕೆ ಮಾಡಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ. ಮುದಗಾ ನಿರಾಶ್ರಿತರ ಕಾಲೋನಿ, ಮತ್ತು ತೋಡೂರು ಹಾಗೂ ಗೋಕರ್ಣದ ಹನೆಹಳ್ಳಿಯಲ್ಲಿ ಎನ್‌ಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ವಶಕ್ಕೆ ಪಡೆದ ಮೂವರನ್ನ ಗೌಪ್ಯ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ. ವಶಕ್ಕೆ ಪಡೆದವರ ಮತ್ತು ಘಟನೆಯ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button