Follow Us On

WhatsApp Group
Focus News
Trending

ವಿದ್ಯಾರ್ಥಿನಿಯರ ವಾಲಿಬಾಲ್: ಬಾಳಿಗಾ ಕಾಲೇಜು ಚಾಂಪಿಯನ್

ಕುಮಟಾ: ಗೋಕರ್ಣದ ಭದ್ರಕಾಳಿ ಪ.ಪೂ ಮಹಾವಿದ್ಯಾಲಯದಲ್ಲಿ ನಡೆದ ಪದವಿ ಪೂರ್ವ ಮಹಾವಿದ್ಯಾಲಯ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಡಾ.ಏ.ವಿ ಬಾಳಿಗಾ ಪದವಿಪೂರ್ವಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಕುಮಟಾದ ವಿದ್ಯಾರ್ಥಿನಿಯರು ವಾಲಿಬಾಲ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ಇವರ ಸಾಧನೆಗೆ ಕೆನರಾ ಕಾಲೇಜು ಸೊಸೈಟಿ ಕುಮಟಾ ದ,ಆಡಳಿತ ಮಂಡಳಿ ಯ ಅಧ್ಯಕ್ಷರಾದ ಶ್ರೀ ಆರ್ . ಆರ್.ಕಾಮತ್, ಉಪಾಧ್ಯಕ್ಷ ರಾದ ಶ್ರೀ ಡಿ. ಎಂ ಕಾಮತ್, ಕಾರ್ಯಾಧ್ಯಕ್ಷ ರಾದ ಶ್ರೀ ಹನುಮಂತ ಶಾನಭಾಗ್,ಕಾರ್ಯದರ್ಶಿ ಶ್ರೀ ಯಶವಂತ ಶಾನಭಾಗ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಪ್ರಾಚಾರ್ಯರಾದ ಶ್ರೀಮತಿ ವೀಣಾ ಕಾಮತ್, ಕ್ರೀಡಾ ವಿಭಾಗದ ಉಪಾಧ್ಯಕ್ಷರಾದ ಪ್ರಮೋದ್ ನಾಯ್ಕ,ಮಹಾಬಲೇಶ್ವರ ಅಂಬಿಗ ಹಾಗೂ ಉಪನ್ಯಾಸಕರು ಶುಭ ಕೋರಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button