Follow Us On

WhatsApp Group
Important
Trending

ಬ್ರಹ್ಮಾನಂದ ಸರಸ್ವತಿ ಶ್ರೀಗಳ ಸೀಮೋಲ್ಲಂಘನ ಸಂಪನ್ನ: ಭವ್ಯ ಮೆರವಣಿಗೆ, ಅಪಾರ ಸಂಖ್ಯೆಯ ಭಕ್ತರು ಭಾಗಿ

ಭಟ್ಕಳ: ತಾಲೂಕಿನ ಕರಿಕಲ್ ನಲ್ಲಿರುವ ಧ್ಯಾನಕುಟೀರದಲ್ಲಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಹಮ್ಮಿಕೊಂಡಿರುವ ಚಾತುರ್ಮಾಸ ವೃತಾಚರಣೆ ಇಂದು ಗುರುಗಳ ಸೀಮೋಲ್ಲಂಘನೆಯ ಮೂಲಕ ಸಾರದಹೊಳೆಯ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದ ನದಿ ತಟದ ಸ್ನಾನಘಟ್ಟದಲ್ಲಿ ಧಾರ್ಮಿಕ ವಿಧಿವಿಧಾನಗಳ ಮೂಲಕ ಸಂಪನ್ನಗೊoಡಿತು.

  • ಎಲ್ಲವೂ ದೈವ ಸಂಕಲ್ಪದoತೆಯೇ ನಡೆಯುತ್ತದೆ
  • ಕೇವಲ ಹಣದಿಂದ ಗುರುಗಳ ಅನುಗ್ರಹ ಪಡೆಯಲು ಸಾಧ್ಯವಿಲ್ಲ
  • ಬ್ರಹ್ಮಾನಂದ ಸರಸ್ವತಿ ಶ್ರೀಗಳ ಆಶೀರ್ವಚನ

ಇದಕ್ಕೂ ಪೂರ್ವದಲ್ಲಿ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಕರಿಕಲ್ ಧ್ಯಾನಮಂದಿರದಿoದ ಶ್ರೀಗುರುಗಳ ರಥದಲ್ಲಿ ಆಸೀನರಾಗಿ ಉತ್ತರ ಭಾರತದಿಂದ ಆಗಮಿಸಿದ ಸ್ವಾಮೀಜಿಗಳೊಂದಿಗೆ ದ್ವೀಚಕ್ರ ವಾಹನ ಸೇರಿದಂತೆ ವಿವಿಧ ವಾಹನಗಳಲ್ಲಿ ಭವ್ಯ ಮೆರವಣಿಗೆಯ ಮೂಲಕ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನಕ್ಕೆ ತೆರಳಲಾಯಿತು. ಶ್ರೀಗುರುಗಳಿಗೆ ಮಹಿಳೆಯರು ಪುರ್ಣಕುಂಭದೊoದಿಗೆ ಹಳೆಕೋಟೆ ಹನುಮಂತ ದೇವಸ್ಥಾನದಲ್ಲಿ ಸ್ವಾಗತಕೋರಿದರು.

ದೇವಸ್ಥಾನದಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ನಂತರ ಕರಿಕಲ್ ನ ಧ್ಯಾನಮಂದಿರಕ್ಕೆ ಹಿಂದಿರುಗಿ ವೇದಿಕೆಯಲ್ಲಿ ಶ್ರೀಗುರುಗಳಿಗೆ ಕೀರಿಟ ಧಾರಣೆ ಮಾಡಿ ಪಾದಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ ಪೂಂಜಾ ಮಾತನಾಡಿ ಭಟ್ಕಳದ ಕರಿಕಲ್ ನಲ್ಲಿ ನಡೆಸಲಾದ ಶ್ರೀಗುರುಗಳ ಚಾತುರ್ಮಾಸ ವ್ರತಾಚರಣೆ ಅತ್ಯಂತ ಯಶಸ್ವಿಯಾಗಿ ಎಲ್ಲರಿಗೂ ಮಾದರಿಯಾಗವಂತೆ ಇಲ್ಲಿನ ನಾಮಧಾರಿ ಸಮಾಜದ ಬಂಧುಗಳ ಹಾಗು ಎಲ್ಲಾ ಹಿಂದೂ ಬಾಂಧವರ ಸಹಕಾರದೊಂದಿಗೆ ನೆರವೇರಿಸಿದ್ದು, ಜಾತಿ, ಮತ, ಪಂತ, ರಾಜಕೀಯ ಪಕ್ಷಗಳೆಂಬ ಬೇಧವಿಲ್ಲದೆ ಎಲ್ಲರೂ ಶ್ರೀ ಮಠದಲ್ಲಿ ಗುರುಗಳ ಪಾದದಡಿಯಲ್ಲಿ ಒಂದಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದರು.

ಕೋಳಿ ಗೂಡಿಗೆ ನುಗ್ಗಿದ ಹೆಬ್ಬಾವು: 3 ದೊಡ್ಡ ಕೋಳಿಗಳನ್ನು ನುಂಗಿ, 14 ಮರಿಗಳನ್ನು ಸಾಯಿಸಿ ಮನೆಯವರಲ್ಲಿ ಆತಂಕ

ಮಾಜಿ ಶಾಸಕ ಸುನಿಲ್ ನಾಯ್ಕ ಮಾತನಾಡಿ ಚಾತುರ್ಮಾಸ ಸಂಪನ್ನಗೊಳ್ಳುತ್ತಿರುವ ಸಂದರ್ಭದಲ್ಲಿ ಒಂದು ಕಡೆ ಖುಷಿಯಿದ್ದರೆ ಮತ್ತೊಂದು ರೀತಿಯಲ್ಲಿ ಇಂದು ಮನಸ್ಸಿಗೆ ಅತ್ಯಂತ ಕಸಿವಿಸಿಯಾಗುವ ಸಂದರ್ಭ. ಈ ಚಾತುರ್ಮಾಸ ಕಾರ್ಯಕ್ರಮದ ಯಶಸ್ಸಿಗೆ ಬಹುಮುಖ್ಯ ಕಾರಣ ಭಟ್ಕಳದ ಎಲ್ಲಾ ನಾಮಧಾರಿ ಸಮಾಜದ ಬಂಧುಗಳು, ಪಾರ್ಕಿಂಗ್ ಕಾರ್ಯದಿಂದ ಹಿಡಿದು ಅಡುಗೆ, ಸ್ವಚ್ಛತೆ ಮುಂತಾದ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವುದರ ಮೂಲಕ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟಿದ್ದಾರೆ. ಮುಂದೆ ಸಾಧ್ಯವಾದರೆ ಮತ್ತೊಂದು ಚಾತುರ್ಮಾಸ ಕಾರ್ಯವನ್ನು ಇಲ್ಲಿಯೇ ಮಾಡುವಂತಾಗಲಿ ಎಂದರು.

ಆಶಿರ್ವಚನ ನೀಡಿ ಮಾತನಾಡಿದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಎಲ್ಲವೂ ದೈವ ಸಂಕಲ್ಪದoತೆಯೇ ನಡೆಯುತ್ತದೆ. ಈ ಕಾರ್ಯಕ್ರಮ ಕರಿಕಲ್ ನಲ್ಲಿ ನಡೆಯುತ್ತಿರುವುದು ಕೂಡ ಭಗವಂತನ ಆಶೀರ್ವಾದದಿಂದ. ಮನುಷ್ಯ ನಿಸ್ವಾರ್ಥದಿಂದ ಶ್ರೀಗುರುಗಳ ಪಾದಚರಣಗಳಿಗೆ ಶರಣಾದಾಗ ಖಂಡಿತವಾಗಿಯೂ ಉತ್ತಮವಾದದು ದೊರಕುತ್ತದೆ. ಕೇವಲ ಹಣದಿಂದ ಗುರುಗಳ ಅನುಗ್ರಹ ಪಡೆಯಲು ಸಾಧ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ವೇಧಿಕೆಯಲ್ಲಿ ಉತ್ತರ ಭಾರತದ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಇಂದ್ರಾನAದ ಸರಸ್ವತಿ ಸ್ವಾಮೀಜಿ, ಕೇಶವಾನಂದ ಸ್ವಾಮೀಜಿ, ಸಚಿವ ಮಂಕಾಳ ವೈದ್ಯ, ಬೆಳ್ತಂಗಡಿ ಶಾಸಕ ಹರೀಶ ಪೂಂಜಾ, ಮಾಜಿ ಸಚಿವ ಮಾಲಿಕಯ್ಯ ಗುತ್ತೆದಾರ, ಮಾಜಿ ಶಾಸಕ ಸುನಿಲ್ ಬಿ ನಾಯ್ಕ, ಅರುಣ್ ನಾಯ್ಕ, ಆರ್ ಕೆ ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ, ಕೃಷ್ಣ ನಾಯ್ಕ ಸಾರದಹೊಳೆ, ಮತ್ತಿತರರು ಇದ್ದರು.

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ

Back to top button