Follow Us On

WhatsApp Group
Big News
Trending

ಬರ್ಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಿರ್ಜಾನ ವಲಯಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾಕೂಟ ಸಂಪನ್ನ

ಕುಮಟಾ: ತಾಲ್ಲೂಕಿನ ಬರ್ಗಿಯ ಸರ್ಕಾರಿ ಪ್ರೌಢಶಾಲೆಯ ಸಂಘಟನೆಯಡಿಯಲ್ಲಿ ಮಿರ್ಜಾನ್ ವಲಯ ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾಕೂಟವು ಸಂಪನ್ನಗೊoಡಿತು. ಕ್ರೀಡಾಕೂಟವನ್ನು ಉದ್ಘಾಟಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ ಹರಿಕಂತ್ರ ಮಾತನ್ನಾಡಿ, “ನಿರ್ಣಾಯಕರ ನಿಷ್ಪಕ್ಷಪಾತವಾದ ನಿರ್ಣಯದಿಂದ ಮಾತ್ರ ಅರ್ಹ ಪ್ರತಿಭಾವಂತರು ಆಯ್ಕೆಯಾಗುವುದರಿಂದ, ಅತ್ಯಂತ ಪ್ರಾಮಾಣಿಕವಾಗಿ ನಿರ್ಣಯವನ್ನು ನೀಡುವಂತೆ ನಿರ್ಣಾಯಕರಲ್ಲಿ ಕೋರಿದರಲ್ಲದೇ, ನಿರ್ಣಾಯಕರ ನಿರ್ಣಯವನ್ನು ಅಂತಿಮವೆoದು ಎಲ್ಲರೂ ಒಪ್ಪಿ ಕ್ರೀಡಾಮನೋಭಾವದಿಂದ ವರ್ತಿಸಿ ಪಂದ್ಯವನ್ನು ಯಶಸ್ವಿಗೊಳಿಸಲು ಕರೆ ನೀಡಿದರು”.

ತಾಲ್ಲೂಕಾ ಪ್ರಭಾರ ದೈಹಿಕ ಪರಿವೀಕ್ಷಕರಾದ ಮಿರ್ಜಾನ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಬಿ.ಜಿ. ನಾಯಕರವರು ಮಾತನ್ನಾಡಿ, “ದೈಹಿಕ ಶಿಕ್ಷಣವು ಸಾಮಾನ್ಯ ಶಿಕ್ಷಣದ ಅವಿಭಾಜ್ಯ ಅಂಗವಾಗಿದ್ದು, ಪಾಠಗಳಷ್ಟೇ ಆಟಗಳಿಗೂ ಮಹತ್ವವನ್ನು ನೀಡಬೇಕಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಪಂದ್ಯಾಟಗಳು ಉಪಯುಕ್ತವಾಗಿದ್ದು, ಕ್ರೀಡೆಯಲ್ಲಿ ಸೋಲು-ಗೆಲುವುಗಳು ಸ್ವಾಭಾವಿಕವಾಗಿದ್ದು, ಗೆದ್ದಾಗ ಬೀಗದೇ, ಸೋತಾಗ ಕುಗ್ಗದೇ, ಕೇವಲ ಸ್ಪರ್ಧಾ ಮನೋಭಾವದಿಂದ ಪಂದ್ಯಾಟದಲ್ಲಿ ಪಾಲ್ಗೊಳ್ಳಬೇಕು” ಎಂದರು.

ಸ್ಥಳೀಯ ವ್ಯವಸಾಯ ನೀವ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾದ ಗೋವಿಂದ ನಾಯಕ ರವರು,” ಸಾಮಾನ್ಯವಾಗಿ ಪ್ರತಿ 10 ವರ್ಷಗಳಿಗೊಮ್ಮೆ ಬರುವ ವಲಯ ಮಟ್ಟದ ಪಂದ್ಯಾಟವನ್ನು ಸಂಘಟಿಸುವ ಜವಬ್ದಾರಿಯು ಪ್ರಸಕ್ತ ವರ್ಷದಲ್ಲಿ ಬರ್ಗಿ ಪ್ರೌಢಶಾಲೆಗೆ ಒದಗಿ ಬಂದಿದ್ದು ಸಂತೋಷವೇ ಸರಿ ಎಂದು ಹೇಳಿದರು,

ಪ್ರೌಢಶಾಲಾ ಮುಖ್ಯಾಧ್ಯಾಪಕರಾದ ಮಧುಕೇಶ್ವರ ನಾಯ್ಕ ಸ್ವಾಗತಿಸಿ – ಪ್ರಾಸ್ತಾವಿಕ ನುಡಿಗಳಾಡಿದರು. ಹಿರಿಯ ಶಿಕ್ಷಕರಾದ ಪಿ.ಎನ್. ನಾಯ್ಕವರು ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಚಂಪಾವತಿ ನಾಯ್ಕ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು ಹೆಗಡೆಯ ಶ್ರೀಶಾಂತಿಕಾAಬ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಎಂ.ಎಸ್. ದೊಡ್ಮನಿ ಹಾಗೂ ಮುರೂರಿನ ಪ್ರಗತಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಅರುಣ ನಾಯ್ಕ ಧ್ವಜ ವಂದನೆಗೆ ಸಹಕರಿಸಿದರು.

ವಿಸ್ಮಯ ನ್ಯೂಸ್, ಕುಮಟಾ

Back to top button