Follow Us On

WhatsApp Group
Big News
Trending

Udaya Bazar: ಉದಯ ಬಜಾರ್‌ನಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ವಿಶೇಷ ಆಫರ್: ಗ್ರಾಹಕರಿಂದ ಉತ್ತಮ ಸ್ಪಂದನೆ

ಕುಮಟಾ: ಅತ್ಯುತ್ತಮ ಗ್ರಾಹಕ ಸೇವೆ ನೀಡಿ ಎಲ್ಲರ ಮನೆ ಮಾತಾಗಿರುವ ಅತಿದೊಡ್ಡ ಗೃಹೋಪಯೋಗಿ ಮಳಿಗೆ ಉದಯ ಬಜಾರ್‌ನಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಹಮ್ಮಿಕೊಂಡ ಭಾರೀ ರಿಯಾಯತಿ ಮಾರಾಟಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ವಿಶೇಷ ರಿಯಾಯತಿ, ಕಾಂಬಿ ಆಫರ್‌ಗಳು ಸೇರಿ ನಿರೀಕ್ಷೆಗೂ ಮೀರಿದ ಕೊಡುಗೆಗಳಿದ್ದು, ಕೆಲ ವಸ್ತುಗಳಿಗೆ ಶೇಕಡಾ 50ರ ವರೆಗೆ ರಿಯಾಯತಿ ನೀಡಲಾಗುತ್ತಿದೆ. ಹೀಗಾಗಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಗ್ರಾಹಕರಾದ ಭಾರತಿ ಪೈ ಅವರು ನಮ್ಮ ವಿಸ್ಮಯ ಟಿವಿಯೊಂದಿಗೆ ಮಾತನಾಡಿ, ನಾವು ಮೊದಲಿನಿಂದಲೂ ಉದಯ ಬಜಾರನಲ್ಲಿಯೇ ಎಲ್ಲಾ ಸಾಮಾಗ್ರಿಗಳನ್ನು ಖರೀದಿಸುತ್ತಾ ಬಂದಿದ್ದೇವೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಗಣೇಶ ಚತುರ್ಥಿಯ ಪ್ರಯುಕ್ತ ಭಾರೀ ರಿಯಾಯತಿ ದರದಲ್ಲಿ ಉತ್ತಮ ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ವಿವಿದ ರೀತಿಯ ಆಫರ್‌ಗಳು ಇದೆ ಎಂದು ಮಾಹಿತಿ ನೀಡಿದರು.

ಇನ್ನೋರ್ವ ಗ್ರಾಹಕರಾದ ರಾಜೇಶ ನಾಯ್ಕ ಅವರು ಮಾತನಾಡಿ, ನಾನು ಪ್ರತಿ ವರ್ಷವೂ ಉದಯ ಬಜಾರ್‌ಗೆ ಬಂದು ಹೊಸ ಹೊಸ ವಸ್ತುಗಳನ್ನ ಖರೀದಿ ಮಾಡುತ್ತೇನೆ. ಗಣೇಶ ಚತುರ್ಥಿಯ ಪ್ರಯುಕ್ತ ಒಳ್ಳೆಯ ಆಫರ್‌ಗಳು ಇದೆ. ಎಲ್ಲಾ ಉತ್ತಮ ಗುಣಮಟ್ಟದ ವಸ್ತುಗಳನ್ನೆ ನೀಡುತ್ತಾರೆ. ಜನರು ಇದರ ಉಪಯೋಗವನ್ನು ಪಡೆದುಕೊಳ್ಳಿ ಎಂದರು. ಹಿತ್ತಾಳೆ, ಸ್ಟೀಲ್, ಅಲ್ಯೂಮಿನಿಯಮ್ ಸೇರಿ ಮನೆಯಲ್ಲಿರುವ ಹಳೆವಸ್ತುಗಳನ್ನು ನೀಡಿ, ಹೊಸ ಉಪಕರಣಗಳನ್ನು ಗ್ರಾಹಕರು ಖರೀದಿಸುತ್ತಿರುವುದು ಕೂಡಾ ಕಂಡುಬರುತ್ತಿದೆ.

ವಿಸ್ಮಯ ನ್ಯೂಸ್, ನಾಗೇಶ ದೀವಗಿ, ಕುಮಟಾ

Back to top button