Follow Us On

WhatsApp Group
Important
Trending

ಗಣೇಶ ಹಬ್ಬದ ವೇಳೆ ಬಹುಮಾನ ಯೋಜನೆ, ಲಾಟರಿ ಟಿಕೆಟ್ ಮಾರಾಟ ನಿಷೇಧ

ಉತ್ತರಕನ್ನಡ: ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಹಬ್ಬ- ಉತ್ಸವ ಕಾರ್ಯಕ್ರಮದ ವೇಳೆಯಲ್ಲಿ ಬಹುಮಾನ ಯೋಜನೆ, ಲಾಟರಿ ಟಿಕೇಟ್ ಗಳನ್ನು ಮುದ್ರಿಸುವುದು, ಮಾರಾಟ ಮಾಡುವುದು, ಹಾಗೂ ಖರೀದಿಸುವುದು ಸಹ ಪರಾಧವಾಗಿರುತ್ತದೆ. ಅಲ್ಲದೇ ಮಟ್ಕಾವನ್ನು ಆಡುವುದು ಮತ್ತು ಅಂತರರಾಜ್ಯ ಲಾಟರಿ ಟಿಕೇಟಗಳನ್ನು ಮಾರುವುದು, ಖರೀದಿಸುವುದು, ಮುದ್ರಿಸುವುದು ಸಹ ನಿಷೇಧವಿದ್ದು, ಇಂತಹ ಯಾವುದೇ ಅನಧಿಕೃತ ಲಾಟರಿ ಮಾಡಿ, ಮಾರಾಟ ಮಾಡುವುದು ಕಂಡುಬoದಲ್ಲಿ ಸಾರ್ವಜನಿಕರು ಕೂಡಲೇ ಹತ್ತಿರದ ಪೋಲೀಸ್ ಠಾಣೆಗಳಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಳ್ಳಿನಿಂದ ಕೂಡಿದ ಪೊದೆ ಹಿಂದೆ ನವಜಾತ ಶಿಶು ಎಸೆದು ಹೋದ ದುರುಳರು

ಜಿಲ್ಲೆಯಲ್ಲಿ ಈ ರೀತಿಯ ಕಾನೂನು ಬಾಹಿರ ಕೃತ್ಯಗಳನ್ನು ನಡೆಸುವ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಜಿಲ್ಲೆಯ ಸಾರ್ವಜನಿಕರು ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ, ಲಾಟರಿ ಮುದ್ರಕರು, ಮಾರಾಟಗಾರರು, ಖರೀದಿದಾರರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು. ಯಾವುದೇ ದಿನಪತ್ರಿಕೆ/ ದೃಶ್ಯ ಮಾಧ್ಯಮದಲ್ಲಿ ಇಂತಹ ‘ಅನಧಿಕೃತ ಲಾಟರಿ ಡ್ರಾ’ ಫಲಿತಾಂಶಗಳನ್ನು ಪ್ರಕಟಿಸಬಾರದು ಎಂದು ಸೂಚಿಸಿದರು.

ಒಂದು ವೇಳೆ ಆ ರೀತಿ ಮಾಡಿದಲ್ಲಿ ‘ಅನಧಿಕೃತ ಲಾಟರಿಗಳಿಗೆ ಸಹಕಾರ ನೀಡಿದಂತಾಗುತ್ತದೆ. ಆದ್ದರಿಂದ ಸಾರ್ವಜನಿಕರು ಇಂತಹ ಅಕ್ರಮ ಚಟುವಟಿಕೆಗಳು ಕಂಡುಬoದಲ್ಲಿ ಪೊಲೀಸ್ ಇಲಾಖೆಗೆ ಅಥವಾ ಸಂಬoಧಿಸಿದವರಿಗೆ ತಕ್ಷಣ ದೂರು ನೀಡಲು ತಿಳಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

Back to top button