Follow Us On

WhatsApp Group
Focus News
Trending

ಮಿರ್ಜಾನಿನ ಬಿಜಿಎಸ್ ಸೆಂಟ್ರಲ್ ಸ್ಕೂಲಿನಲ್ಲಿ ಸಂಭ್ರಮ ಮತ್ತು ಸಡಗರದಿಂದ ಗಣೇಶೋತ್ಸವ ಆಚರಣೆ

ಕುಮಟಾ: ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಮಿರ್ಜಾನಿನ ಬಿಜಿಎಸ್ ಸೆಂಟ್ರಲ್ ಸ್ಕೂಲ್ ಮತ್ತು ಆದಿಚುಂಚನಗಿರಿ ಇಂಡಿಪೆoಡೆoಟ್ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಬಿಜಿಸ್ ಗಣೇಶೋತ್ಸವ ಸಮಿತಿ ಯಿಂದ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಮಹಾಪೂಜೆ ನೆರವೇರಿಸಲಾಯಿತು. ಮಹಾಪೂಜೆಯ ನಂತರ ಮಿರ್ಜಾನ್ ಶಾಖಾಮಠದ ಪೂಜ್ಯರಾದ ನಿಶ್ಚಲಾನಂದನಾಥಜೀಯವರು , ಬಿಜಿಸ್ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರು ಹಾಗೂ ಬಿಜಿಸ್ ಸಂಸ್ಥೆಯ ಆಡಳಿತಾಧಿಕಾರಿಯಾಗಿರುವ ಜಿ. ಮಂಜುನಾಥ ಅವರಿಗೆ, ಬಿಜಿಸ್ ಗಣೇಶೋತ್ಸವ ಸಮಿತಿಯ ಸರ್ವ ಸದಸ್ಯರಿಗೆ, ಸಮಸ್ತ ಬಿಜಿಸ್ ವಸತಿ ನಿಲಯದ ವಿದ್ಯಾರ್ಥಿಗಳಿಗೆ, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ತೀರ್ಥ ಪ್ರಸಾದ ನೀಡಿ ಆಶೀರ್ವದಿಸಿದರು.

ಸೆಪ್ಟೆಂಬರ್ 9 ರಂದು ಬೆಳಿಗ್ಗೆ 10 ಗಂಟೆಗೆ ಗಣಹೋಮ, ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ ಮತ್ತು ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ 2 ಗಂಟೆಗೆ ಸವಾಲು ಕಾರ್ಯಕ್ರಮ, ಮಧ್ಯಾಹ್ನ 3 ಗಂಟೆಗೆ ಮೆರವಣಿಗೆಯೊಂದಿಗೆ ಗಣೇಶ ಮೂರ್ತಿಯ ವಿಸರ್ಜನೆ ಕಾರ್ಯಕ್ರಮ ಇದ್ದು ಸರ್ವ ಭಕ್ತಾದಿಗಳು ಆಗಮಿಸಬೇಕೆಂದು ಬಿಬಿಜಿಸ್ ಗಣೇಶೋತ್ಸವ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಕೊoಡಿದೆ.

ವಿಸ್ಮಯ ನ್ಯೂಸ್,ಕುಮಟಾ

Back to top button