Follow Us On

WhatsApp Group
Important
Trending

ಪುರಾಣ ಪ್ರಸಿದ್ಧ ಇಡಗುಂಜಿಗೆ ಹರಿದುಬಂದ ಭಕ್ತಸಾಗರ: ಮಹಾಗಣಪತಿಗೆ 55 ಕ್ವಿಂಟಾಲ್ ಪಂಚಕಜ್ಜಾಯ ನೈವೇದ್ಯ

ಹೊನ್ನಾವರ: ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಇಡಗುಂಜಿ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ವಿಜೃಂಭಣೆಯಿoದ ಗಣೇಶ ಚತುರ್ಥಿ ಆಚರಿಸಲಾಯಿತು. ಭಕ್ತರು ಸೇವೆಗಳನ್ನ ಸಲ್ಲಿಸಿ ಇಷ್ಟಾರ್ಥಕ್ಕೊಸ್ಕರ ಬೇಡಿಕೊಂಡರು. ಬೆಳಗಿನಜಾವ 4 ಗಂಟೆಯಿoದಲೇ ದೇವರ ದರ್ಶನಕ್ಕೆ ಭಕ್ತಾಧಿಗಳು ಆಗಮಿಸಿದ್ದರು. ಶ್ರೀ ಕ್ಷೇತ್ರದಲ್ಲಿ ಮಂಗಳಾರತಿ ,ಸತ್ಯಗಣಪತಿ ವ್ರತ ,ಅಭಿಷೇಕ ಹಾಗೂ ಪಂಚಕಜ್ಜಾಯ ಸೇವೆಗಳು ನಡೆದವು.

ಗಣೇಶ ವಿಸರ್ಜನೆ ವೇಳೆ ಸಮುದ್ರದಲ್ಲಿ ಮುಳುಗುತ್ತಿದ್ದ ಬಾಲಕ: ಕರಾವಳಿ ಸಿಬ್ಬಂದಿ ಸಮಯಪ್ರಜ್ಞೆಯಿಂದ ಉಳಿಯಿತು ಜೀವ

55 ಕ್ವಿಂಟಾಲ್ ನಷ್ಟು ಪಂಚಕಜ್ಜಾಯ ನೈವೆದ್ಯವಾಗಿದ್ದು ವಿಶೇಷ, . ಸರತಿ ಸಾಲಿನಲ್ಲಿ ಮಹಾಗಣಪತಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಇನ್ನು ಗಣೇಶ ಚತುರ್ಥಿ ನಿಮಿತ್ತ ನಡೆದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳ ಕುರಿತು ದೇವಾಲಯದ ಅರ್ಚಕರಾದ ನರಸಿಂಹ ಭಟ್ ಮಾತನಾಡಿ ಇವತ್ತು ವಿಶೇಷ ದಿನವಾಗಿದ್ದು, ತ್ರಿಕಾಲ ಮಹಾಪೂಜೆ,ತ್ರಿಕಾಲ ಬಲಿ,ಗಣೇಶನಿಗೆ ಅಷ್ಟದ್ರವ್ಯ ಪೂರ್ವಕವಾದ ಗಣಹೋಮ ಮುಂತಾದ ಪೂಜೆಗಳು ನಡೆಯಿತು.

ಭಕ್ತರು ತಾವು ತೋಟದಲ್ಲಿ ಬೆಳೆಸಿದ ಬಾಳೆಗೋನೆ, ಅಡಿಕೆಗೋನೆ ಫಲಾವಳಿಗಳನ್ನು ಶ್ರೀಕ್ಷೇತ್ರದಲ್ಲಿ ಅರ್ಪಿಸುವುದು ವಿಶೇಷವಾಗಿದ್ದು, ಉತ್ಸವ ಪ್ರಯುಕ್ತ ಬೆಳ್ಳಿಯ ಪಲ್ಲಕ್ಕಿ ದೇವಸ್ಥಾನದಲ್ಲಿ ಸಮರ್ಪಣೆ ಮಾಡಲಾಗಿದೆ, ಎಂದು ವಿವರ ನೀಡಿದರು, ಶ್ರೀಸನ್ನಿಧಿಗೆ ಆಗಮಿಸಿದ ಹೊನ್ನಾವರ ತಾಲೂಕಾಸ್ಪತ್ರೆಯ ಖ್ಯಾತ ವೈದ್ಯರಾದ ಡಾ.ರಮೇಶ್ ಗೌಡ ಅವರು ಮಾತನಾಡಿ,ಇದು ವಿಶ್ವದಲ್ಲೇ ಪ್ರಸಿದ್ಧವಾದ ಕ್ಷೇತ್ರವಾಗಿದ್ದು ಬಾಲಗಣಪನ ಮಹಿಮೆ ಅಪಾರವಾಗಿದೆ. ಕ್ಷೇತ್ರದ ಹತ್ತಿರದಲ್ಲೇ ಈಶ್ವರ, ಪಾರ್ವತಿಯ ದೇವಸ್ಥಾನವಿದೆ. ಈ ಕ್ಷೇತ್ರದಲ್ಲಿ ಬೇಡಿಕೊಂಡಿದ್ದನ್ನು ವರವಾಗಿ ನೀಡುವ ಶಕ್ತಿ ಗಣಪತಿಯಲ್ಲಿದೆ. ಎಲ್ಲಾ ಧರ್ಮದವರು ಶ್ರೀಕ್ಷೇತ್ರಕ್ಕೆ ಬರುವುದು ಇಲ್ಲಿನ ವಿಶೇಷವಾಗಿದೆ ಎಂದರು.

ಬೆಳಿಗ್ಗೆಯಿoದಲೇ ಶ್ರೀ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿದ ಕಾರಣ ಜನಸಂದಣಿ ಉಂಟಾಗಿತ್ತು. ಇದರ ಮಧ್ತೆ ವರುಣ ಅಬ್ಬರಿಸಿದ್ದರಿಂದ ಕೆಲಕಾಲ ಭಕ್ತಾಧಿಗಳು ಮಳೆಯಲ್ಲಿ ನೆನೆಯುವಂತಾಯಿತುಪೊಲೀಸರು,ದೇವಾಲಯದ ಸಿಬ್ಬಂದಿಗಳು ಜನದಟ್ಟಣೆ ನಿಬಾಯಿಸುವಲ್ಲಿ ನಿರತರಾಗಿದ್ದರು.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Back to top button