Follow Us On

WhatsApp Group
Important
Trending

G D Bhat Kekkar: ಮಹಾಭಾರತ ಬರೆಯುತ್ತಿರುವ ಗಣಪತಿ: ಮಂತ್ರಮುಗ್ಧಗೊಳಿಸುವ ಕಲಾ ಕೌಶಲ್ಯ ನೋಡಿ

ಕಾರವಾರ: ಅತ್ಯಂತ ಕಲಾತ್ಮಕ ಮತ್ತು ಸೃಜನಾತ್ಮಕ ಮೂರ್ತಿ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವವರು, ಜಿ.ಡಿ.ಭಟ್ ಕೆಕ್ಕಾರು. ಹೌದು, ಅವರ ಕಲಾತ್ಮಕ ಶೈಲಿಯ, ಸೃಜನಾತ್ಮಕ ಗಣಪತಿ ಮೂರ್ತಿಗಳು, ಅತ್ಯಂತ ಸಹಜವಾಗಿ, ನೈಜವಾಗಿ ಮೂಡಿಬರುವುದು ವಿಶೇಷ. ಇಂತಹ ವಿಶೇಷವಾದ , ಬಹಳ ಅಪರೂಪದ ಮಾಂತ್ರಿಕ ಕಲಾಕೌಶಲ್ಯ ಜಿ.ಡಿ.ಭಟ್ ಅವರ ಕಲಾತಪಸ್ವಿಗೆ ಒಲಿದಿದೆ ಅಂದರೂ ಅತಿಶಯೋಕ್ತಿಯಲ್ಲ.

ಇದನ್ನೂ ಓದಿ: ಇಲ್ಲಿದೆ ಉದ್ಯೋಗಾವಕಾಶ: 1476 ಹುದ್ದೆಗಳಿಗೆ ನೇಮಕಾತಿ: SSLC ಆದವರು ಅರ್ಜಿ ಸಲ್ಲಿಸಿ

ಈ ಬಾರಿ ಜಿ.ಡಿ.ಭಟ್ ಅವರು ತಮ್ಮ ಮನೆಯಲ್ಲಿ ಮಾಡಿದ ವೇದವ್ಯಾಸರು ಮಹಾಭಾರತದ ಕಥೆ ಹೇಳುತ್ತಿರುವುದು ಮತ್ತು ಗಣಪತಿ ಬರೆಯುತ್ತಿರುವ ದೃಶ್ಯ, ಬಹಳ ನೈಜವಾದ ರೀತಿಯಲ್ಲಿ ಮೂಡಿಬಂದಿದ್ದು, ನೋಡಗರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ವೇದವ್ಯಾಸರ ಹಾವಭಾವ, ಪಂಚೆ, ಶಲ್ಯ, ಗಣಪತಿಯ ಬರವಣಿಗೆಯ ಭಂಗಿ ಇವೆಲ್ಲ ನೋಡುಗರನ್ನು ಮಂತ್ರಮುಗ್ದಗೊಳಿಸುತ್ತಿದೆ. ಮಣ್ಣಿಗೆ ಜೀವ ತುಂಬಿ ಭಾವಸೃಜಿಸುವ ಅವರ ಕಲೆಯನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಅವರ ಮನೆಗೆ ಆಗಮಿಸುತ್ತಿದ್ದಾರೆ.

ಕಳೆದ ಬಾರಿ ಬಾರಿ ಮಣ್ಣಿನ ಗೌರಿ ಗಣೇಶನನ್ನು ಮಾಡಿದ್ದು, ಎಲ್ಲರ ಗಮನಸೆಳೆದಿತ್ತು. ಅದನ್ನು ನೋಡಿದರೆ ಯಾರೂ ಇದು ಮಣ್ಣಿನ ಮೂರ್ತಿ ಎನ್ನುವಂತಿಲ್ಲ. ಅಷ್ಟು ನೈಜತೆಯಿಂದ ಕೂಡಿತ್ತು. ಗೌರಿ ಮನೆಯ ಜಗುಲಿಯಲ್ಲಿ ಕುಳಿತಿದ್ದು, ಬಾಲ ಗಣೇಶ ಏನನ್ನೋ ತಾಯಿ ಗೌರಿಗೆ ಹೇಳುತ್ತಿರುವ ದೃಶ್ಯ, ಗೌರಿಯ ಸೀರೆ, ಬ್ಲೌಸ್, ಆಭರಣ ಎಲ್ಲವೂ ನೈಜವಾಗಿದೆ ಎಂಬoತೆ ಮೂಡಿಬಂದಿತ್ತು.

ಗಣೇಶ ಚತುರ್ಥಿ ಬಂದರೆ ಜಿ.ಡಿ. ಭಟ್ಟರು ಪ್ರತಿವರ್ಷ 100ಕ್ಕೂ ಅಧಿಕ ಗಣೇಶ ಮೂರ್ತಿಯನ್ನು ಮಾಡುತ್ತಾರೆ. ಮೂರ್ತಿಗಳಿಗೆ ಉಡಿಸುವ ಪಂಚೆ, ಸೀರೆಯ ಕುಸುರಿ , ಗಣಪತಿಯ ಪೀಠ, ಮಡಿ, ಶಾಲು ಇವೆಲ್ಲವೂ ಕಲಾತ್ಮಕವಾಗಿ ಮೂಡಿಬರುವುದು ವಿಶೇಷ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button