Follow Us On

WhatsApp Group
Important
Trending

ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೋದ ಯುವತಿ ನಾಪತ್ತೆ: ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಪೊಲೀಸರ ಪ್ರಕಟಣೆ

ಕಾರವಾರ: ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೋದ ಯುವತಿ ಮನೆಗೂ ಬಾರದೆ, ಸಂಬoಧಿಕರ ಮನೆಗೂ ತೆರಳದೆ ನಾಪತ್ತೆಯಾದ ಘಟನೆ ನಡೆದಿದೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಚಂದಗುಳಿ ಸಮೀಪದ ದೇಸಾಯಿಮನೆಯ ತೇಜಾ ಭಟ್ ನಾಪತ್ತೆಯಾದ ಯುವತಿ ಎಂದು ತಿಳಿದುಬಂದಿದೆ. ಈಕೆ ಹುಬ್ಬಳ್ಳಿಯ ಕಂಪೆನಿಯೊoದರಲ್ಲಿ ಕೆಲಸ ಮಾಡುತ್ತಿದ್ದಳು.

ಇದನ್ನೂ ಓದಿ: ಇಲ್ಲಿದೆ ಉದ್ಯೋಗಾವಕಾಶ: 1476 ಹುದ್ದೆಗಳಿಗೆ ನೇಮಕಾತಿ: SSLC ಆದವರು ಅರ್ಜಿ ಸಲ್ಲಿಸಿ

ತಾನು ಕೆಲಸ ಮಾಡುತ್ತಿದ್ದ ಕಂಪೆನಿಗೆ ಹೋಗಿ ಬರುತ್ತೇನೆಂದು ಹೋದವಳು ವಾಪಸ್ ಮನೆಗೆ ಬಂದಿಲ್ಲ. ಈ ಕುರಿತು ಯುವತಿಯ ತಂದೆ ಯಲ್ಲಾಪರ ಪೊಲೀಸ್ ಠಾಣೆಯಲ್ಲಿ ಮಗಳನ್ನು ಹುಡುಕಿಕೊಡುವಂತೆ ಪ್ರಕರಣ ದಾಖಲಿಸಿದ್ದಾರೆ. ಈ ಯುವತಿ ಕುರಿತು ಯಾವುದೇ ರೀತಿಯ ಸುಳಿವು ಸಿಕ್ಕಲ್ಲಿ ಅಥವಾ ಸಾರ್ವಜನಿಕರಿಗೆ ಕಂಡು ಬಂದಲ್ಲಿ ಕಾರವಾರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 9480805257, 08419- 261133, 08382- 226550 ಸಂಪರ್ಕಿಸುವoತೆ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Back to top button