Follow Us On

WhatsApp Group
Important
Trending

ತಪಾಸಣೆ ವೇಳೆ ಸಗಣಿ ವಾಸನೆ: ಬಯಲಾಯ್ತು ಅಕ್ರಮ ಜಾನುವಾರು ಸಾಗಾಟ

ಕುಮಟಾ: 26 ಎಮ್ಮೆಗಳು ಹಾಗೂ 1 ಕೋಣವನ್ನು ಕಂಟೇನರ್ ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿದ್ದ ವೇಳೆ ಕುಮಟಾ ಪೊಲಿಸರು ಎಪಿಎಂಸಿ ಸಮೀಪ ದಾಳಿ ನಡೆಸಿದ ಘಟನೆ ನಡೆದಿದೆ. ಹೌದು, ಬೆಳಿಗ್ಗೆ 7-30ರ ಸುಮಾರಿಗೆ ಕಂಟೇನರ್ ನಲ್ಲಿ 26 ಎಮ್ಮೆ ಹಾಗೂ 1 ಕೋಣವನ್ನು ಕೊಲ್ಹಾಪುರದಿಂದ ಪಾಲಕ್ಕಾಡು ಕೇರಳಕ್ಕೆ ಸಾಗಾಟ ಮಾಡುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಕುಮಟಾ ಪೊಲೀಸರು ವಾಹನ ಸೇರಿ ನಾಲ್ವರು ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ.

ಇದನ್ನೂ ಓದಿ: ಉದ್ಯೋಗಾವಕಾಶ: 1 ಲಕ್ಷದ ವರೆಗೆ ವೇತನ: SSLC, ಡಿಪ್ಲೋಮಾ, ಪದವಿ ಆದವರು ಅರ್ಜಿ ಸಲ್ಲಿಸಿ

ಪತ್ತೆಯಾದ ರೀತಿಯೇ ರೋಚಕ: ಕುಮಟಾ ಪೊಲೀಸರು ಕಂಟೇನರ್ ವಾಹನಕ್ಕೆ ಅಡ್ಡಲಾಗಿ ಕೈ ಮಾಡಿದ್ದರು. ಈ ವೇಳೆ ಕಂಟೇನರ್ ಚಾಲಕ ಎಲ್ಲಾ ಕಾಗದ ಪತ್ರಗಳೊಂದಿಗೆ ಪೊಲೀಸರ ಎದುರು ಬಂದು, ಕಂಟೇನರ್ ಒಳಗೆ ಸರಕು ಸಾಮಗ್ರಿ ಕೊಂಡೊಯ್ಯುತ್ತಿರುವುದಾಗಿ ಹೇಳಿಕೊಂಡಿದ್ದ. ಹೀಗಾಗಿ ಪೊಲೀಸ್ ಸಿಬ್ಬಂದಿ ಕಂಟೇನರ್ ವಾಹನವನ್ನು ಬಿಟ್ಟು ಕಳುಹಿಸುವ ತಯಾರಿಯಲ್ಲಿದ್ದರು. ಕೊನೆಗೆ ಸಣ್ಣ ಅನುಮಾನದ ಹಿನ್ನಲೆ ಪಿಎಸ್‌ಐ ರವಿ ಗುಡ್ಡಿ ಕಂಟೇನರ್ ಒಳಗೆ ತಪಾಸಣೆ ನಡೆಸಿದಾಗ, ವಿಚಾರ ಬೆಳಕಿಗೆ ಬಂದಿದೆ. ತಪಾಸಣೆ ವೇಳೆ ಸಣ್ಣದಾಗಿ ಸಗಣಿ ವಾಸನೆ ಬಂದಿದ್ದು ಕಂಟೇನರ್ ಬಾಗಿಲು ತೆರೆದಾಗ ಎಮ್ಮೆಗಳ ಕೂಗಾಟ ಕೇಳಿಸಿದೆ.

ಆರೋಪಿತರಾದ ಮೈಸೂರಿನ ಶಾಂತಿನಗರ ಯರ್ಲಾ ಮಸೀದಿ ಹತ್ತಿರದ ಅಯ್ಯುಬ ಅಹ್ಮದ್, ಕಾಸರಗೋಡದ ಚರಕಳ, ಬಿಂಬ್ರಾನಿ ನಗರದ ಅಬುಬಕರ್, ಹಾಸನದ ಹೊಳೆನರಸಿಪುರ ಶಹರ, ಚಿಕ್ಕ ಮಸೀದಿ ಹತ್ತಿರದ ಅಸ್ಥರ ಹುಸೇನ, ಕೇರಳದ ಕಾಸರಗೋಡದ ಅಬ್ದುಲ್ ರಹಿಮಾನ್ ಬಂಸಧಿತರು ಎನ್ನಲಾಗಿದೆ.

ಲಾರಿ ಮಾಲೀಕನಾದ ದಾವಣಗೇರಿಯ ಚಮನ ಮಹಮದ ಎಂಬಾತ ತಲೆಮರೆಸಿಕೊಂಡಿದ್ದಾನೆ. ಸದ್ಯ ಜಾನುವಾರುಗಳನ್ನ ರಕ್ಷಣೆ ಮಾಡಿ ಕುಮಟಾ ಪೊಲೀಸ್ ಠಾಣೆಯಲ್ಲಿ ಆರೈಕೆ ಮಾಡಿದ್ದಾರೆ. ಸಾಗಾಟ ಪ್ರಕ್ರಿಯೆಯಲ್ಲಿ ತೊಡಗಿದ ಐವರ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮೂಮದುವರಿದಿದೆ.

ವಿಸ್ಮಯ ನ್ಯೂಸ್, ನಾಗೇಶ ದೀವಗಿ, ಕುಮಟಾ

Back to top button