Follow Us On

WhatsApp Group
Important
Trending

ಬಡತನದಲ್ಲಿ ಅರಳಿದ ಪ್ರತಿಭೆ: ವಾಲಿಬಾಲ್ ನಲ್ಲಿ ಮಿಂಚು ಹರಿಸುತ್ತಿದ್ದಾರೆ ಗಿರೀಶ

ಕುಮಟಾ: ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ. ಸಾಧಿಸುವ ಮನಸಿದರೆ ಬಡತನ ಖಂಡಿತ ಶಾಪವಾಗುವುದಿಲ್ಲ ಎನ್ನುವುದಕ್ಕೆ ಜೀವಂತ ಉದಾಹರಣೆ ಕುಮಟಾ ತಾಲೂಕಿನ ಹಂದಿಗೊಣ ಗ್ರಾಮದ ದೇವರ್ಸು ಮನೆ ಕುಟುಂಬದ ಹೆಮ್ಮೆಯ ಪ್ರತಿಭೆ ಗಿರೀಶ್ ಜಟ್ಟಪ್ಪ ಪಟಗಾರ. ಬದುಕಿಗೆ ಕೂಲಿಯನ್ನು ಅವಲಂಬಿಸಿಕೊoಡಿರುವ ಜಟ್ಟಪ್ಪ ಹಾಗೂ ಮಹಾಲಕ್ಷ್ಮಿಯ ಹೆಮ್ಮೆಯ ಪುತ್ರ ಅಣ್ಣ ಯೋಗೇಶ್ ಪಟಗಾರ ಈಗಾಗಲೇ ವಾಲಿಬಾಲ್ ನಲ್ಲಿ ಯುನಿವರ್ಸಿಟಿ ಆಗಿದ್ದಾರೆ. ಕಲಾವಿದರ ಮನೆತನದಲ್ಲಿ ಜನಿಸಿದ ಈ ಹುಡುಗನಿಗೆ ವಾಲಿಬಾಲ್ ಎನ್ನುವ ಕ್ರೀಡೆಯ ಕಲೆ ಒಲಿದು ಬಂದಿದೆ.

ಇದನ್ನೂ ಓದಿ: ಉದ್ಯೋಗಾವಕಾಶ: 1 ಲಕ್ಷದ ವರೆಗೆ ವೇತನ: SSLC, ಡಿಪ್ಲೋಮಾ, ಪದವಿ ಆದವರು ಅರ್ಜಿ ಸಲ್ಲಿಸಿ

ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ದಿನಕರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಧಾರೇಶ್ವರ ದ ದೈಹಿಕ ಶಿಕ್ಷಕ ಯೋಗೇಶ್ ಪಟ್ಗಾರ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ಬೆಳೆದ ಗಿರೀಶ್ ಅಂದೇ ಜಿಲ್ಲಾಮಟ್ಟದಲ್ಲಿ ಛಾಪು ಮೂಡಿಸಿದವರು. ಇಂದು ಅಂತರಾಷ್ಟ್ರೀಯ ಮಟ್ಟದಲ್ಲೂ ತನ್ನ ಪಾರಮ್ಯ ವನ್ನು ಮೆರೆದಿದ್ದಾನೆ. ಛತ್ತೀಸಗಢದಲ್ಲಿ ನಡೆದ ಅಖಿಲ ಭಾರತ ವಿದ್ಯಾ ಭಾರತೀಯ ರಾಷ್ಟ್ರೀಯ ಮಟ್ಟದ 19 ವರ್ಷದೊಳಗಿನವರ ಕ್ರೀಡಾಕೂಟದಲ್ಲಿ ಈತನು ಪ್ರತಿನಿಧಿಸಿದ ತಂಡ ಪ್ರಥಮ ಸ್ಥಾನ ಗಳಿಸಿದೆ.

ಅಲ್ಲದೆ ಅತ್ಯುತ್ತಮ ಹೊಡೆತಗಾರ ಎನ್ನುವ ಪ್ರಶಸ್ತಿಗೆ, ಗಿರೀಶ್ ಭಾಜನರಾಗಿದ್ದಾರೆ. ನೇಪಾಳದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ19 ವರ್ಷದೊಳಗಿನವರ ಖೇ ಲೋ ಭಾರತ್ ಇಂಟರ್ನ್ಯಾಷನಲ್ ವಾಲಿಬಾಲ್ ಟೂರ್ನಮೆಂಟ್ ನಲ್ಲಿ ಇವರ ತಂಡ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಉತ್ತಮ ಹೊಡೆತಗಾರ ಎನ್ನಮ ಪ್ರಶಸ್ತಿಗೆ ಬಾಜನರಾಗಿದ್ದಾರೆ.

ಹೆಮ್ಮೆ ಪಡುವಂತಹ ಸಾಧನೆ ಮಾಡಬಹುದು ಎನ್ನುವುದು ಇವರ ದೊಡ್ಡಪ್ಪ ಸೂರ್ಯಕಾಂತ್ ಪಟಗಾರರ ಆಶಯವಾಗಿದೆ. ಸಮರ್ಥ ಕೋಚ್ ನಿಖಿಲ್ ಗಟ್ಟಿ ಅವರ ಗರಡಿಯಲ್ಲಿ ಪಳಗುತ್ತಿರುವ ಈ ಹುಡುಗ ಸದ್ದಿಲ್ಲದೆ ಸಾಧನೆಯ ಸುದ್ದಿ ಮಾಡುತ್ತಿರುವ ಹುಡುಗ ಪ್ರತಿಭಾವಂತನಾಗಿ ಬೆಳೆಯಲಿ ಎನ್ನುವುದು ದೇವರ್ಷು ಮನೆ ಕುಟುಂಬದ ಆಶಯವಾಗಿದೆ.

ವಿಸ್ಮಯ ನ್ಯೂಸ್, ಕುಮಟಾ

Back to top button