Follow Us On

WhatsApp Group
Important
Trending

ನಿಯಂತ್ರಣ ತಪ್ಪಿದ ಬೈಕ್: ಜೀವ ಉಳಿಸಿಕೊಳ್ಳಲು ನದಿಗೆ ಹಾರಿದ: ಕೈಕೊಟ್ಟ ಅದೃಷ್ಟ

ಶಿರಸಿ: ಅತಿವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದ ಹಿನ್ನಲೆ ನಿಯಂತ್ರಣ ಸಿಗದೆ ಸವಾರ ಬೈಕ್ ಜೊತೆಗೆ ನದಿಗೆ ಬಿದ್ದು, ಮೃತಪಟ್ಟ ಘಟನೆ ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯ ಬುಗಡಿಕೊಪ್ಪದಲ್ಲಿ ನಡೆದಿದೆ. ಅತಿವೇಗವಾಗಿ ಬೈಕ್ ಚಲಾಯಿಸಿಕೊಂಡು ಬರುತ್ತಿರುವಾಗ ನದಿ ಹತ್ತಿರ ಬೈಕ್ ನಿಯಂತ್ರಣ ತಪ್ಪಿದೆ. ಈ ವೇಳೆ ಬೈಕ್ ನದಿಗೆ ಬಿದ್ದಿದ್ದು, ಸವಾರನೂ ನದಿಗೆ ಹಾರಿದ್ದ.

ಇದನ್ನೂ ಓದಿ: ಉದ್ಯೋಗಾವಕಾಶ: 1 ಲಕ್ಷದ ವರೆಗೆ ವೇತನ: SSLC, ಡಿಪ್ಲೋಮಾ, ಪದವಿ ಆದವರು ಅರ್ಜಿ ಸಲ್ಲಿಸಿ

ಆದರೆ, ನದಿಯಿಂದ ಮೇಲೆ ಬರಲು ಸಾಧ್ಯವಾಗದೆ ನದಿಯಲ್ಲೇ ಮೃತಪಟ್ಟಿದ್ದಾನೆ. ಗಿರಗುಂಡ ಕೊಲ್ಲಾಪುರ ಮಹಾರಾಷ್ಟ್ರ ಮೂಲದ ಅವಿನಾಶ ಬಾಲೋಸೋ ಕೋಟ್ (32) ಎಂಬಾತನೇ ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ. ವಿಷಯ ತಿಳಿದ ಪೊಲೀಸರು ತಕ್ಷಣವೇ ಶಿರಸಿ ಮಾರಿಕಾಂಬಾ ಲೈಫ್ ಗಾರ್ಡ್ನ ಗೋಪಾಲ ಗೌಡ ಹಾಗೂ ಅವರ ತಂಡ ಸ್ಥಳಕ್ಕೆ ಆಗಮಿಸಿ ಬೈಕ್ ಹಾಗೂ ಶವವನ್ನು ಹೊರತೆಗೆದಿದೆ. ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Back to top button