Follow Us On

WhatsApp Group
Important
Trending

ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಹಿಳಾ ASI ಗೆ ಗುದ್ದಿದ ಕಾರು

ಅಂಕೋಲಾ: ಗಣೇಶ ವಿಸರ್ಜನಾ ಮೆರವಣಿಗೆಯ ವೇಳೆ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿದ್ದ ಅಂಕೋಲಾ ಪೊಲೀಸ್ ಠಾಣೆಯ ಮಹಿಳಾ ಎ ಎಸ ಐ ಓರ್ವರಿಗೆ,ಕಾರೊಂದು ಗುದ್ದಿ ಅಪಘಾತ ಪಡಿಸಿದ ಘಟನೆ ಕೇಣಿ ರಸ್ತೆಯಲ್ಲಿ ಸೆ. 17 ರ ಮಂಗಳವಾರ ಸಂಭವಿಸಿದೆ.

ಇದನ್ನೂ ಓದಿ: ಹೆಸರಿಗಷ್ಟೇ ಪ್ರಮುಖ ರಾಜ್ಯ ಹೆದ್ದಾರಿ: ಎಲ್ಲಿ ನೋಡಿದ್ರೂ ಹೊಂಡ ಗುಂಡಿಗಳು

ಖಾಸಗಿ ಬ್ಯಾಂಕ್ ಒಂದರ ವ್ಯವಸ್ಥಾಪಕ ಇಲ್ಲವೇ ಉದ್ಯೋಗಿ ಎನ್ನಲಾದ, ಕೇಣಿ ಅಕ್ಕ ಪಕ್ಕದ ಗ್ರಾಮದ ನಿವಾಸಿ, ಜನಸಂದಣಿ ಕಂಡು ಒಮ್ಮೆಲೆ ಗಾಬರಿಗೊಂಡು ಇಲ್ಲವೇ ಅದಾವುದೋ ಕಾರಣದಿಂದ ತನ್ನ ಕಾರಿನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು, ವಾಹನ ಜೋರಾಗಿ ಚಲಾಯಿಸಿದ ಪರಿಣಾಮ,ಕಾರು ಮಹಿಳಾ ಎಎಸ್ಐ ಅವರಿಗೆ ಗುದ್ದಿದೆ.

ಕೂಡಲೇ ಸ್ಥಳೀಯ ಪ್ರಮುಖ ನೋರ್ವ ಮತ್ತು ಕರ್ತವ್ಯದಲ್ಲಿದ್ದ ಇನ್ನೋರ್ವ ಪೊಲೀಸ್ ಸಿಬ್ಬಂದಿ,ಮಹಿಳಾ ಎ ಎಸ್ ಐ ಅವರನ್ನು,ತಾಲೂಕ ಸರ್ಕಾರಿ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ.ಮಹಿಳಾ ಸಿಬ್ಬಂದಿಯ ಕಾಲು ಮತ್ತಿತರಡೆ ಒಳ ನೋವು ಆಗಿರುವ ಸಾಧ್ಯತೆ ಕೇಳಿ ಬಂದಿದ್ದು,ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅದೃಷ್ಟ ವಶಾತ್ ಜನಸಂದಣಿ ಇರುವಾಗಲೇ ರಸ್ತೆ ಅಪಘಾತ ಸಂಭವಿಸಿದರೂ,ಇತರೆ ಯಾರಿಗೂ ಗಾಯ-ನೋವುಗಳಾಗಿಲ್ಲ. ಈ ರಸ್ತೆ ಅಪಘಾತ ಘಟನೆಯ ಕುರಿತಂತೆ,ಪೊಲೀಸರಿಂದ ಹೆಚ್ಚಿನ ಮತ್ತು ನಿಖರ ಮಾಹಿತಿಗಳು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button