Follow Us On

WhatsApp Group
Important
Trending

ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ

ದಾಂಡೇಲಿ: ಇಲ್ಲಿನ ನಗರದ ಮಾರುತಿ ನಗರದಲ್ಲಿ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ, ಎರಡ್ಮೂರು ಕಡೆ ಗಾಯಗೊಳಿಸುವ ಘಟನೆ ನಡೆದಿದೆ. ಮಾರುತಿ ನಗರದ ನಿವಾಸಿ ವಿದ್ಯಾದರ ಕಾಂಬಳೆಯವರ ಪುತ್ರ ಸುಪ್ರೀತ್ ವಿದ್ಯಾಧರ ಕಾಂಬಳೆ ಎಂಬಾತನೆ ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡ ಬಾಲಕನಾಗಿದ್ದಾನೆ.

ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಹಿಳಾ ASI ಗೆ ಗುದ್ದಿದ ಕಾರು

ಈತ ಮನೆಯಿಂದ ಅಂಗಡಿಗೆ ಹೋಗಿ ಬರುತ್ತಿರುವಾಗ ಏಕಾಏಕಿ ಬೀದಿನಾಯಿಗಳು ದಾಳಿ ಮಾಡಿವೆ. ತಕ್ಷಣವೇ ಸ್ಥಳೀಯರು ಬೀದಿನಾಯಿಗಳನ್ನು ಓಡಿಸಿ ಬಾಲಕನನ್ನು ರಕ್ಷಣೆ ಮಾಡಿದ್ದಾರೆ. ಗಾಯಗೊಂಡ ಬಾಲಕ ಸುಪ್ರೀತ್ ಈತನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಯನ್ನು ನೀಡಲಾಗಿದೆ.

ವಿಸ್ಮಯ ನ್ಯೂಸ್ , ದಾಂಡೇಲಿ

Back to top button