Follow Us On

WhatsApp Group
Important
Trending

ಆಟೋದಲ್ಲಿ ಪ್ಯಾಲೆಸ್ತೀನ್ ಬಂಬಲಿಸಿ ಧ್ವಜ: ಕೆಲವೇ ಗಂಟೆಯಲ್ಲಿ ಪೊಲೀಸರು ತೆರವುಗೊಳಿದ್ದು ಏಕೆ?

ಭಟ್ಕಳ: ಭಟ್ಕಳದ ಆಟೋ ಒಂದರ ಹಿಂಬದಿಯಲ್ಲಿ ಪ್ಯಾಲೆಸ್ತೀನ್ ಬೆಂಬಲಿಸಿ, ಸ್ಲೋಗನ್ ಹಾಕಲಾಗಿತ್ತು. ಹಲವು ದಿನಗಳಿಂದ ಈ ಸ್ಲೋಗನ್ ಸಾರ್ವಜನಿಕರ ಮತ್ತು ವರದಿಗಾರರ ಗಮನಕ್ಕೆ ಬಂದಿತ್ತು. “Pray for Palestine” ಎಂಬ ಸ್ಲೋಗನ್ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ಇತ್ತು.

ಇದನ್ನೂ ಓದಿ: ನೇಮಕಾತಿ: ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ: Canara Bank Recruitment

ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭಟ್ಕಳ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಬಿಜೆಪಿ ಕೈಗೊಂಡಿರುವ ಸದಸ್ಯತ್ವ ಅಭಿಯಾನದ ಕುರಿತಂತೆ ಮಾಹಿತಿ ನೀಡಿದ್ದರು . ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಯಲ್ಲಿ ದಿನಗಳೆಯುತ್ತಿದೆ. ಇದರ ಪರಿಣಾಮವಾಗಿ ನಾಗಮಂಗಲ, ಚಿಕ್ಕಮಗಳೂರಿನಲ್ಲಿ ನಡೆದ ಘಟನೆ ನಮ್ಮ ಕಣ್ಮುಂದೆ ಇದೆ . ಈ ಸರ್ಕಾರದ ಅವಧಿಯಲ್ಲಿ ಪ್ಯಾಲೆಸ್ತೇನ್ ಭಾವುಟ ಹಾರಾಡುತ್ತಿದೆ ಎಂದಾಗ, ವರದಿಗಾರರು ಭಟ್ಕಳದ ಆಟೋ ಒಂದರ ಮೇಲೂ ಇಂತಹದ್ದೊAದು ಪ್ಯಾಲೆಸ್ತೇನ್ ದ್ವಜ ಹೊಂದಿರುವ ಸ್ಟಿಕ್ಟರ್ ಇದೆ. ಇದರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುವ ಅವಕಾಶದ ಬಗ್ಗೆ ಯೋಚಿಸಬೇಕಾಗಿದೆ ಎಂದು ಗಮನಸೆಳೆದಿದ್ದರು.

ಸಂಸದರು ಇಂತಹ ದ್ವಜಗಳು ದೇಶದಾದ್ಯಂತ ಎಲ್ಲೇ ಹಾರಾಡಿದರು ತಪ್ಪು ಮತ್ತು ಅಪರಾಧವಾಗಿದ್ದು ಪೋಲಿಸ್ ಇಲಾಖೆ ಸುಮೋಟೋ ಕೇಸ್ ದಾಖಲಿಸಿಕೊಂಡು ಬಾವುಟವನ್ನು ತೆರವು ಮಾಡಬೇಕು ಎಂದು ಹೇಳಿದ್ದರು. ಇದಾಗಿ ಕೆಲವೇ ಗಂಟೆಗಳಲ್ಲಿ ಭಟ್ಕಳ ಪೋಲಿಸರು ಸ್ಟಿಕರ್ ಅಳವಡಿಸಿದ್ದ ಆಟೋವನ್ನು ಪರಿಶೀಲಿಸಿ ಆಟೋದ ಹಿಂದೆ ಅಳವಡಿಸಿದ ಪ್ಯಾಲೆಸ್ತೇನ್ ಬಾವುಟವುಳ್ಳ ಸ್ಟಿಕರ್ ಹಾಗೂ ಅದರೊಂದಿಗಿದ್ದ ಪ್ಯಾಲೆಸ್ತೇನ್ ಬೆಂಬಲಿಸುವ ಒಕ್ಕಣೆಯನ್ನು ತೆಗೆದು ಹಾಕಿದ್ದಾರೆ. ಸಂಸದರ ತ್ವರಿತಗತಿಯ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಈಶ್ವರ ನಾಯ್ಕ, ವಿಸ್ಮಯ ನ್ಯೂಸ್ ಭಟ್ಕಳ

Back to top button