Follow Us On

WhatsApp Group
Focus News
Trending

ಶ್ರೀ ವೆಂಕಟೇಶ್ವರ ಜ್ಞಾನವಿಕಾಸ ಕೇಂದ್ರ ಸಭೆಯಲ್ಲಿ ಪೌಷ್ಟಿಕ ಆಹಾರ ಮೇಳ

ಭಟ್ಕಳ : ತಾಲೂಕಿನ ಸಣಬಾವಿ ಶ್ರೀ ವೆಂಕಟೇಶ್ವರ ಜ್ಞಾನವಿಕಾಸ ಕೇಂದ್ರ ಸಭೆಯಲ್ಲಿ ಪೌಷ್ಟಿಕ ಆಹಾರ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಯೋಜನಾಧಿಕಾರಿಗಳಾದ ಗಣೇಶ ನಾಯ್ಕ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಪೌಷ್ಟಿಕ ಆಹಾರ ಬಳಕೆಯ ಬಗ್ಗೆ ಅಗತ್ಯತೆಯ ಬಗ್ಗೆ ಹಾಗೂ ಪ್ರತಿಯೊಬ್ಬ ಮನುಷ್ಯನ ದಿನಚರಿಯ ಬಗ್ಗೆ ಮಾಹಿತಿ ನೀಡಿದರು.

ಉತ್ತರ ಕನ್ನಡ ಜಿಲ್ಲೆಯ ನಿರ್ದೇಶಕರಾದ ಶ್ರೀಯುತ ಮಹೇಶ್ ಎಂ ಡಿ ರವರು ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಸುಮಿತ್ರ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ವಿನೋದಾ ಬಾಲಚಂದ್ರ ರವರು ನಿರೂಪಿಸಿದರು.

ಸೇವಾಪ್ರತಿನಿಧಿ ಶ್ರೀಮತಿ ಶ್ವೇತಾ ರವರು ಸ್ವಾಗತಿಸಿದರು. ವಲಯದ ಮೇಲ್ವಿಚಾರಕಿ ಶ್ರೀಮತಿ ಮುಕ್ತಾರವರು ಸಭೆಗೆ ಧನ್ಯವಾದ ಮಾಡಿದರು. ಧಾನ್ಯಗಳ ರಂಗೋಲಿ ಮತ್ತು ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಕಾರ್ಯಕ್ರಮದ ವಿಶೇಷವಾಗಿತ್ತು.

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ

Back to top button