Follow Us On

WhatsApp Group
Important
Trending

ಶಿರೂರು ಗುಡ್ಡ ಕುಸಿತ ದುರಂತ : ಮೂರನೇ ದಿನದ ಕೊನೆಯಲ್ಲಿ ಮೂಳೆ ಪತ್ತೆ 

ಗುತ್ತಿಗೆದಾರ ಕಂಪನಿಯವರಿಂದಲೂ ಮುಳುಗು ತಜ್ಞರ ಸೇವೆ ಬಳಕೆ

3ನೇ ದಿನದ ಕಾರ್ಯಾಚರಣೆಯ ಮುಕ್ತಾಯದ ವೇಳೆ ಮೂಳೆ ಪತ್ತೆಯಾಗಿ ಕುತೂಹಲ ಮೂಡಿಸಿದೆ. ಅಸಲಿಗೆ ಈ ಮೂಳೆ ಜುಲೈ 16ರ ದುರ್ಘಟನೆಯಲ್ಲಿ ನಾಪತ್ತೆ ಯಾದವರದ್ದು ಇರಬಹುದೇ ಅಥವಾ ಈ ಪ್ರಕರಣಕ್ಕೆ ಸಂಭಂದಿಸಿದ ಇತರ ಯಾರದ್ದಾದರೂ , ಇಲ್ಲವೇ ಜಾನುವಾರು ಮತ್ತಿತರ ಪ್ರಾಣಿ ಗಳದ್ದೇ ಎಂದು ಡಿಎನ್ಎ ಮತ್ತಿತರ ರೀತಿಯ ಪರೀಕ್ಷೆ ಬಳಿಕ ಸ್ಪಷ್ಟವಾಗಿ ತಿಳಿದು ಬರಬೇಕಿದೆ.

ಅಂಕೋಲಾ : ಶಿರೂರು ಗುಡ್ಡ ಕುಸಿತ ದುರ್ಘಟನೆಯಲ್ಲಿ ನಾಪತ್ತೆಯಾಗಿ ಈವರೆಗೂ ಪತ್ತೆಯಾಗದ ಸ್ಥಳೀಯ ಜಗನ್ನಾಥ್ ನಾಯ್ಕ,ಗಂಗೆ ಕೊಳ್ಳದ ಲೊಕೇಶ ನಾಯ್ಕ ಮತ್ತು ಕೇರಳ ಮೂಲದ ಅರ್ಜುನ್ ಹಾಗೂ ಆತ ಚಲಾಯಿಸುತ್ತಿದ್ದ ಬೆಂಜ್ ಲಾರಿ ಪತ್ತೆಗೆ,ಮೂರನೇ ಹಂತದ ಕಾರ್ಯಾಚರಣೆ ನಡೆಯುತ್ತಿದೆ.

ಅಭಿನೇಶಿಯ ಓಶಿಯನ್ ಸರ್ವಿಸ್,ಡ್ರೆಜ್ಜಿಂಗ್ ಮಷೀನ್ ಮೂಲಕ ಗಂಗಾವಳಿ ನದಿಯಲ್ಲಿ ಶೋಧ ಕಾರ್ಯಾಚರಣೆ ಗುತ್ತಿಗೆ ಪಡೆದುಕೊಂಡಿದ್ದು, ಗೋವಾದಿಂದಲೂ ಕೆಲ ಯಂತ್ರಗಳನ್ನು ಬಾಡಿಗೆ ಆಧಾರದ ಮೇಲೆ ತಂದು ಕಾರ್ಯಾಚರಣೆ ನಡೆಸುತ್ತಿದೆ. ಇದೇ ವೇಳೆ ,ಅಪ್ರೋಜ್ ನರಪಾಲಿ, ದೀಪ್ ನಾರಾಯಣ ಚೌಹಾಣ್, ಕರಣ ಸಿಂಗ್ ಎಂಬ  ಮುಂಬೈ ಪೋರ್ಟ ಬೇಸ್ ನ  ಮೂವರು ಮುಳುಗು ತಜ್ಞರನ್ನು ಶೋಧ ಕಾರ್ಯಾಚರಣೆಗಾಗಿ  ಕರೆಸಿಕೊಳ್ಳಲಾಗಿದೆ.

ಉದ್ಯೋಗ: ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ನೇಮಕಾತಿ: ಪದವಿ ಆದವರು ಅರ್ಜಿ ಸಲ್ಲಿಸಿ

ಶನಿವಾರವಷ್ಟೇ ಅವರು ಗಂಗಾವಳಿ ನದಿಯಲ್ಲಿ ಅಲ್ಪ ಪ್ರಮಾಣದಲ್ಲಿ,ವಾಹನ ಒಂದರ ಇಂಜಿನ್ ನಿಂದ ತೈಲ ಸೋರಿಕೆಯಾಗಿರುವ ಸಾಧ್ಯತೆಯನ್ನು ಗುರುತಿಸಿದ್ದರು ಎನ್ನಲಾಗಿದ್ದು, ರವಿವಾರ ಮತ್ತೆ ಅದೇ ಸ್ಥಳದಲ್ಲಿ ಮುಳುಗು ಕಾರ್ಯಾಚರಣೆ ಮುಂದುವರೆಸಿ,ನದಿ ಒಡಲು ಸೇರಿದ್ದ ಇಂಜಿನನ್ನು ಪತ್ತೆ ಹಚ್ಚಿ, ಅದಕ್ಕೆ ರೋಪ ಕಟ್ಟಿ ಬಂದಿದ್ದರು. ನಂತರ ಡ್ರೆಜ್ಜಿಂಗ್ಗ್ ಗುತ್ತಿಗೆದಾರ ಕಂಪನಿಯ  ಕ್ರೇನ್

ಮೂಲಕ ನಿಧಾನವಾಗಿ ಅದನ್ನು ಮೇಲಕ್ಕೆತ್ತಲಾಗಿದೆ.    ಈ ಇಂಜಿನ್ ಸಹ  ಜಖಂ ಗೊಂಡ ಸ್ಥಿತಿಯಲ್ಲಿಯೇ ಪತ್ತೆಯಾಗಿದ್ದು, ಈ ಹಿಂದೆ ನದಿಯಲ್ಲಿ ತೇಲಿ ಹೋಗಿ ಸಗಡಗೇರಿ ಬಳಿ ಮೇಲೆತ್ತಲಾಗಿದ್ದ ಗ್ಯಾಸ್ ಟ್ಯಾಂಕರ್ ಗೆ ಸಂಬಂಧಿಸಿದ ಅದೇ ವಾಹನದಿಂದ ಬೇರ್ಪಟ್ಟಿದ್ದ, ಗ್ಯಾಸ ಟ್ಯಾಂಕರ್ ವಾಹನದ ಕ್ಯಾಬಿನ್ನಿನ  ಬಿಡಿ ಭಾಗಗಳು ಎನ್ನಲಾಗುತ್ತಿದೆ. ಶನಿವಾರದ ಕಾರ್ಯಾಚರಣೆ ವೇಳೆ ಇದೇ ವಾಹನಕ್ಕೆ ಸಂಬಂಧಿಸಿದ್ದ ಮುಂಭಾಗದ ಎರಡು ಚಕ್ರಗಳುಳ್ಳ ಒಂದು ಭಾಗ ಅಂದರೆ ಫ್ರಂಟ್ ಎಕ್ಸೆಲ್ ಮತ್ತು ಅದು ಪತ್ತೆಯಾದ ಸ್ಥಳದ ಹತ್ತಿರದ ಇನ್ನೊಂದು ಸ್ಥಳದಲ್ಲಿ ಗ್ಯಾಸ್ ಟ್ಯಾಂಕರ್ ವಾಹನದ ಡ್ರೈವರ್ ಕ್ಯಾಬಿನ್ ಬಿಡಿಭಾಗ ದೊರೆತಿತ್ತು. 

ಈ ಎಲ್ಲಾ ಬಿಡಿ ಭಾಗಗಳು  ಒಂದೇ ವಾಹನದ್ದಾಗಿದ್ದು,ಈ ರೀತಿ ತೀವ್ರವಾಗಿ ನುಜ್ಜು ಗುಜ್ಜಾಗಿ ,ಬೇರ್ಪಟ್ಟಿರುವುದು, ಈ ಹಿಂದಿನಿಂದಲೂ  ಸ್ಥಳೀಯ ಕೆಲ ಪ್ರತ್ಯಕ್ಷದರ್ಶಿಗಳು ಹೇಳಿಕೊಳ್ಳುತ್ತಿರುವ ಪ್ರಕಾರ,ಏನಾದರೂ ಸ್ಪೋಟದಿಂದಲೇ  ಅವಘಡದ ತೀವ್ರತೆ ಹೆಚ್ಚಿರುವ ಸಾಧ್ಯತೆ ಇದೆ  ಎನ್ನಲಾಗಿದೆ. ಯಾವುದಕ್ಕೂ ಕಾರ್ಯಚರಣೆ ಮುಕ್ತಾಯಗೊಂಡ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಲಭ್ಯವಾಗಬೇಕಿದೆ. ಅಭಿನೇಶಿಯ ಓಶನ್ ಸರ್ವೀಸ್ ಕಂಪನಿಯಿಂದ ಪ್ಲೋಟಿಂಗ್ ಕ್ರಾಫ್ಟ್, ಎರಡು ಟಗ್, ಕ್ರೇನ್  ಕಂಬ್ಯಾಕ್ ಹೊಯ್ ಮೌಂಟೆಡ್ ಡ್ರಜ್ಜಿಂಗ್ ಮಷೀನ್ ನ್ನು ತರಲು ಶಾಸಕ ಸತೀಶ ಸೈಲ್ ಮತ್ತು ಜಿಲ್ಲಾಡಳಿತ ವಿಶೇಷ ಪ್ರಯತ್ನ ನಡೆಸಿ,ಒಟ್ಟಾರೆಯಾಗಿ 1 ಕೋಟಿ  ರೂಪಾಯಿಗಳ ಸಮೀಪದ ಅಂದಾಜು ಮೊತ್ತಕ್ಕೆ ಗುತ್ತಿಗೆ ನೀಡಿತ್ತು.ಅದರ ಪ್ರತಿಫಲ ಎನ್ನುವಂತೆ ಮಹೇಂದ್ರ ಡೊಂಗ್ರೆ ನೇತೃತ್ವದ ಗುತ್ತಿಗೆ ಕಂಪನಿ ಕಾರ್ಯಾಚರಣೆ ಆರಂಭಿಸಿದ್ದು, ಈ ವೇಳೆ ನದಿಯಲ್ಲಿ ನಹುದುಗಿರುವ ಒಂದೊಂದೇ ಅವಶೇಷಗಳು ಮುತ್ತು ಕುರುಹು ಪತ್ತೆಯಾಗಿ, ಕಾರ್ಯಾಚರಣೆ ಮೇಲೆ ಹೊಸ ಭರವಸೆ  ಮೂಡುವಂತಾ 

ಗಿದೆ. ಪ್ರತ್ಯೇಕ ಕಾರ್ಯಾಚರಣೆಯಲ್ಲಿಈಶ್ವರ ಮಲ್ಪೆ, ಮೃತ ಲಕ್ಷ್ಮಣ ನಾಯ್ಕ ಕುಟುಂಬಕ್ಕೆ ಸೇರಿದ್ದ ಕಪ್ಪು ಬಣ್ಣದ ಆಕ್ಟಿವಾ ದ್ವಿಚಕ್ರ  ವಾಹನ ಪತ್ತೆ ಮಾಡಿ ಹಗ್ಗ ಕಟ್ಟಿ ಬಂದಿದ್ದರು. ನಂತರ NHAI ಇಲ್ಲವೇ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ಆಯ್ ಆರ್ ಬಿ ಯ ಕ್ರೇನ್ ಬಳಸಿ ದ್ವಿಚಕ್ರ ವಾಹನವನ್ನು ನದಿ ನೀರಿನಿಂದ  ಮೇಲೆತ್ತಲಾಗಿತ್ತು. ಇದಲ್ಲದೇ ಒಂದು ಪಾತ್ರೆ ಹಾಗೂ ಎರಡು ಮೂರು ಮರದ  ದಿಮ್ಮಿಗಳನ್ನು ಸಹ ನದಿಯಿಂದ ಶೋಧಿಸಿ ಹೊರ ತೆಗೆಯಲಾಗಿದೆ.

ಶಾಸಕ ಸತೀಶ ಸೈಲ್,ಬಹು ಹೊತ್ತು ಶೋಧ ಕಾರ್ಯಾಚರಣೆ ಪ್ರದೇಶದಲ್ಲಿಯೇ  ಉಳಿದು ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರಲ್ಲದೇ, ನಾಳೆಯ ದಿನ (ಸೋಮವಾರ ) ,ದೆಹಲಿಯಿಂದ ಜನರಲ್ ಇಂದ್ರಬಾಲನ್ ಮತ್ತೆ ಶಿರೂರಿಗೆ ಆಗಮಿಸಲಿದ್ದು,ಅವರು ಈ ಹಿಂದೆ ಶೋಧ ಕಾರ್ಯಕ್ಕಾಗಿ ಗೊತ್ತು ಪಡಿಸಿದ್ದ ನಾಲ್ಕು ಮುಖ್ಯ ಪಾಯಿಂಟ್ (ಪ್ರದೇಶ) ಹಾಗೂ ಮುಂದಿನ ಕಾರ್ಯಾಚರಣೆ ಬಗ್ಗೆ ಚರ್ಚೆ ನಡೆಸಿ,ಅವರ ಸಲಹೆ ಹಾಗೂ ಮಾರ್ಗದರ್ಶನ  ಪಡೆದುಕೊಂಡು ಮತ್ತೆ ಕಾರ್ಯಾಚರಣೆ ಮುಂದುವರಿಸಲಿದ್ದೇವೆ ಎಂದ ಅವರು,ಈ ವರೆಗೂ ತಮ್ಮ ಕುಟುಂಬದ ಸದಸ್ಯರ ಪತ್ತೆಯಾಗದೇ ನೊಂದಿರುವ ಕುಟುಂಬಗಳ ಸದಸ್ಯರಿಗೆ, ಸಾಂತ್ವನ ಹೇಳಿ ಧೈರ್ಯ ತುಂಬುವ ಪ್ರಯತ್ನ ಮಾಡಿ,ದೈವ ಕೃಪೆಗೆ ಪ್ರಾರ್ಥಿಸಿ ಕಾರ್ಯಾಚರಣೆ ಮುನ್ನಡೆಸೋಣ ಎಂದರು. ಅವರೇ ಹೇಳುವಂತೆ ಕಾರ್ಯಾಚರಣೆ ಯಶಸ್ವಿ ಎನ್ನು ವ ಬದಲು,ನಾಪತ್ತೆಯಾದ ಮೂವರ ಶೋಧವಾದರೆ, ಆ  ನೊಂದ ಕುಟುಂಬಗಳಿಗೆ ಸ್ವಲ್ಪ ಆದರೂ ನೆಮ್ಮದಿ ದೊರಕಿಸಿಕೊಟ್ಟ ಸಮಾಧಾನ ಸಿಗಲಿದೆ ಎಂದರು.     

 ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button