Follow Us On

WhatsApp Group
Focus News
Trending

ಉನ್ನತ ಕೌಶಲ್ಯಕ್ಕಾಗಿ ಕೃತಕ ಬುದ್ದಿಮತ್ತೆ ( AI ) ತರಬೇತಿ

ಅಂಕೋಲಾ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್‌ ಇಲಾಖೆ, ಡೆಲ್‌ ಕಂಪನಿ ಹಾಗೂ ಶಿಕ್ಷಣ ಫೌಂಡೇಶನ್‌ ಜಿಲ್ಲಾ ಪಂಚಾಯತ ಸಹಯೋಗದೊಂದಿಗೆ ಕರ್ನಾಟಕ ರಾಜ್ಯಾದ್ಯಂತ ಗ್ರಾಮ ಪಂಚಾಯತ್‌ ಮಟ್ಟದಲ್ಲಿನ ಗ್ರಂಥಾಲಯಗಳ ಮೂಲಕ Digital Inclusion Centers (ಗ್ರಾಮ ಡಿಜಿ ವಿಕಸನ) ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲೆಯ ಆಯ್ದ ಗ್ರಾಮ ಪಂಚಾಯತ್‌ಗಳಲ್ಲಿ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಡಿಜಿಟಲ್‌ ಸಾಕ್ಷರತೆ ಮತ್ತು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಕಾಲೇಜು ಮತ್ತು ಪದವಿ ಯುವಕ/ಯುವತಿಯರಿಗೆ AI for Upskilling (ಕೃತಕ ಬುದ್ದಿಮತ್ತೆ) ತರಬೇತಿ ನೀಡುವ ಕಾರ್ಯಕ್ರಮದ ಯೋಜನೆ ರೂಪಿಸಿದ್ದು ಅದರಂತೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಂಕೋಲಾ ಪೂಜಗೇರಿಯಲ್ಲಿ ಈ ತರಬೇತಿಯನ್ನು 2 ಬ್ಯಾಚ್ ಗಳಲ್ಲಿ ಬಿಎ , ಬಿಕಾಂ, ಬಿಬಿಎ, ಬಿಎಸ್ಸಿ ಫೈನಲ್ 80 ಯುವಕರ/ಯುವತಿಯರಿಗೆ ತರಬೇತಿ ನೀಡಲಾಯಿತು.

ಸದರಿ ತರಬೇತಿಯನ್ನು ಕಾಲೇಜಿನ ಐಕ್ಯೂಎಸ್‌ಸಿ ಘಟಕ, ಅನಿಕೇತನ ವೇದಿಕೆ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಉತ್ತರ ಕನ್ನಡ ಜಿಲ್ಲೆಯ AI (ಕೃತಕ ಬುದ್ದಿಮತ್ತೆ) ಮಾಸ್ಟರ್‌ ತರಬೇತುದಾರರಾದ ಶಿವಯ್ಯ ಗೋಡಿಮನಿ ರವರು ಈ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಉತ್ತರ ಕನ್ನಡ ಜಿಲ್ಲೆಯಾದ್ಯಾಂತ ಆಯ್ದ ಪದವಿ ಕಾಲೇಜು ಮತ್ತು ಈ ಕಾರ್ಯಕ್ರಮ ರಾಜ್ಯಾದ್ಯಂತ ಅನುಷ್ಠಾನ ಮಾಡುವ ಯೋಜನೆ ರೂಪಿಸಲಾಗುತ್ತಿದೆ.

ಈ ತರಬೇತಿಯ ಪ್ರಮುಖ ಉದ್ದೇಶ ಯುವಜನರಿಗೆ ಹೊಸ ಕೌಶಲ್ಯಗಳನ್ನು ಉನ್ನತಗೋಳಿಸಲು ಮತ್ತು ವೃತ್ತಿ ಆಯ್ಕೆಗಳಿಗೆ ಸಹಾಯ,ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ,ಉದ್ಯೋಗ ಹುಡುಕಿಕೊಳ್ಳಲು ಮತ್ತು ಉದ್ಯೋಗ ಸಂದರ್ಶನಗಳಿಗೆ ಸಿದ್ಧತೆಗೊಳಿಸುವುದಾಗಿದೆ. ಈ ತರಬೇತಿಯಲ್ಲಿ ಕೃತಕ ಬುದ್ಧಿಮತ್ತೆಯ ಮೂಲಭೂತ ಅಂಶ ಮತ್ತು ಜನರೇಟಿವ್ AI ಜನರೇಟಿವ್ AI ಪರಿಕರಗಳು,AI ಪ್ರಾಂಪ್ಟ್ ತಂತ್ರಗಳ ಕಲಿಕೆ ಮತ್ತು ಶೈಕ್ಷಣಿಕ ಮತ್ತು ವೃತ್ತಿಜೀವನದ ಅನ್ವೇಷಣೆಗಳಲ್ಲಿ ಜನರೇಟಿವ್ AI ಅನ್ನು ಹೇಗೆ ಬಳಸಬೇಕು. ಎಂಬುವುದನ್ನು ಜನರೇಟಿವ್‌ AI ಆಪ್‌ಗಳಾದ ಚಾಟ್‌ ಜಿಪಿಟಿ,ಜೇಮಿನಿ,ಮೈಕ್ರೋಸಾಪ್ಟ್‌ ಕೋಪೊಯಿಲೆಟ್,ಸುನೋ,ಇನ್‌ವಿಡೀಯೊ ಆಪ್‌ ಗಳ ಬಳಕೆ ಮಾಡಿಕೊಂಡು 4 ಅಧಿವೇಶನಗಳಲ್ಲಿ ಹಂತ ಹಂತವಾಗಿ ತರಬೇತಿಗೋಳಿಸಲಾಗುತ್ತದೆ ಎಂಬುದನ್ನು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಶಾರದಾ ಭಟ್ ರವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ , “ಇಂದು ಕೃತಕ ಬುದ್ಧಿಮತ್ತೆಯ ಬಗ್ಗೆ ಕಲಿತು ನಾಳೆ ಹೊಸದನ್ನು ಸೃಷ್ಟಿಸಿ” ಎಂಬ ಸಂದೇಶದೊಂದಿಗೆ ಕೃತಕ ಬುದ್ಧಿಮತ್ತೆಯ (AI) ದಿನದಿಂದ ದಿನಕ್ಕೆ ನಡೆಯುತ್ತಿರುವ ವೇಗದ ಬೆಳವಣಿಗೆಯ ಬಗ್ಗೆ ಮಾತನಾಡಿದರು.

“ನಾವು ಈಗಾಗಲೇ ತಿಳಿದಿರುವ ಕೃತಕ ಬುದ್ಧಿಮತ್ತೆಯ ವಿಷಯಗಳಿಗಿಂತ ಇನ್ನು ಕೃತಕ ಬುದ್ಧಿಮತ್ತೆಯ ಕುರಿತು ಅರಿಯಬೇಕಾದವುಗಳು ಬಹಳಷ್ಟು ಇವೆ. ಪ್ರತಿ ಕ್ಷಣ ಹೊಸ ಆವಿಷ್ಕಾರಗಳು ಹಾಗೂ ತಂತ್ರಜ್ಞಾನಗಳು ಅಭಿವೃದ್ಧಿ ಹೊಂದುತ್ತಿವೆ. ನಮ್ಮ ಜ್ಞಾನವನ್ನು ವಿಸ್ತರಿಸಲು ಮತ್ತು ಭವಿಷ್ಯದ ಆವಿಷ್ಕಾರಗಳಿಗೆ ಮೂಲಾಧಾರವಾಗಿ ಈ ಜ್ಞಾನವನ್ನು ಬಳಸಲು, ನಾವು ಸದಾ ಕಲಿಯುತ್ತಾ ಮುಂದುವರಿಯಬೇಕಾಗಿದೆ” ಎಂದು ಹೇಳಿದರು.

ಕಾಲೇಜಿನ ಗ್ರಂಥ ಪಾಲಕರು ಹಾಗೂ ಅನಿಕೇತನ ವೇದಿಕೆಯ ಸಂಚಾಲಕರಾದ ಡಾ. ಸವಿತಾ ನಾಯಕರವರು ಪ್ರಾಸ್ತಾವಿಕ ನುಡಿಗಳನ್ನಾಗಿ ಸರ್ವರನ್ನು ಸ್ವಾಗತಿಸಿದರು. ಐಕ್ಯೂ ಎಸಿ ಸಂಚಾಲಕರಾದ ಶ್ರೀಮತಿ ಸುಮಯಾ ಸೈಯದ್ ರವರು ತರಬೇತಿಯ ರೂಪರೇಷೆಗಳ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಾದ ಸೌಜನ್ಯ, ಕುಮುದಾ, ದಿಶಾ ಹಾಗೂ ಭರತರವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕಾಲೇಜಿನ ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button