Follow Us On

WhatsApp Group
Important
Trending

ಚಿನ್ನದ ಹುಡುಗಿ ವೇದಾವತಿ ಭಟ್ ಗೆ ಡೈಮಂಡ್ ಜುಬ್ಲಿ ಫೆಲೋಶಿಪ್ ಗೌರವ: B.Ed ನಲ್ಲಿ ಕವಿವಿಯಿಂದ 4 ಚಿನ್ನದ ಪದಕ

ಅಂಕೋಲಾ: ಕೆ.ಎಲ್. ಇ ಸಂಸ್ಥೆ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿ ವೇದಾವತಿ ವಿಶ್ವನಾಥ್ ಭಟ್ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಬಿ.ಇಡಿ ನಲ್ಲಿ ನಾಲ್ಕು ಚಿನ್ನದ ಪದಕ ಹಾಗೂ ಡಿಸಿ ಪಾವಟೆ ಡೈಮಂಡ್ ಜುಬ್ಲಿ ಫೌಂಡೇಶನ್ ಫೆಲೋಶಿಪ್ ನೊಂದಿಗೆ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಮಂಗಳವಾರ ನಡೆದ ಕರ್ನಾಟಕ ವಿಶ್ವವಿದ್ಯಾಲಯದ 74ನೇ ವಾರ್ಷಿಕ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾ. ಸುಧಾಕರ ಹಾಗೂ ಇಂಪಾಲ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಸ್. ಅಯ್ಯಪ್ಪನ್ ಪದಕ ಪ್ರಧಾನ ಮಾಡಿದರು.

ಉದ್ಯೋಗ: ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ನೇಮಕಾತಿ: ಪದವಿ ಆದವರು ಅರ್ಜಿ ಸಲ್ಲಿಸಿ

ವೇದಾವತಿ ಭಟ್ ಅವರ ಈ ಸಾಧನೆಗೆ ಕೆ.ಎಲ್. ಇ ಸಂಸ್ಥೆ ಬೆಳಗಾವಿಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ, ಬಿ.ಇಡಿ ವಿಭಾಗದ ಅಧ್ಯಕ್ಷರಾದ ಜಯಾನಂದ ಮುನವಳ್ಳಿ, ಸದಸ್ಯ ಕಾರ್ಯದರ್ಶಿಗಳಾದ ಮಹದೇವ ಬಳಿಗಾರ, ಸ್ಥಳೀಯ ಕಾರ್ಯದರ್ಶಿಗಳಾದ ಡಾ. ಡಿ ಎಲ್ ಭಟ್ಕಳ, ಸಂಯೋಜಕರಾದ ಆರ್. ನಟರಾಜ, ಸದಸ್ಯರಾದ ಡಾ. ಮೀನಲ್ ನಾರ್ವೇಕರ, ಪ್ರಾಚಾರ್ಯರಾದ ಡಾ. ವಿನಾಯಕ ಜಿ. ಹೆಗಡೆ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button