ಕುಮಟಾ: ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿಯಾದ ನಿಧಿ ಉಮೇಶ ದೇಶಭಂಡಾರಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಬಿ.ಇಡಿಯಲ್ಲಿ ಚಿನ್ನದ ಪದಕವನ್ನು ಹಾಗೂ ಡಿಸಿ ಪಾವಟೆ ಡೈಮಂಡ್ ಜುಬ್ಲಿ ಫೌಂಡೇಶನ್ ಫೆಲೋಶಿಪನೊಂದಿಗೆ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ 74ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ. ಎಮ್. ಸಿ. ಸುಧಾಕರ್ ಹಾಗೂ ಇಂಫಾಲ್ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ. ಎಸ್. ಅಯ್ಯಪ್ಪನ್‌ರವರಿಂದ ಪದಕ ಮತ್ತು ಪ್ರಶಸ್ತಿಯನ್ನು ಕು. ನಿಧಿ ಉಮೇಶ ದೇಶಭಂಡಾರಿ ಸ್ವೀಕರಿಸಿದರು.
ಚಿನ್ನದ ಹುಡುಗಿ ವೇದಾವತಿ ಭಟ್ ಗೆ ಡೈಮಂಡ್ ಜುಬ್ಲಿ ಫೆಲೋಶಿಪ್ ಗೌರವ: B.Ed ನಲ್ಲಿ ಕವಿವಿಯಿಂದ 4 ಚಿನ್ನದ ಪದಕ
ಇವರನ್ನು ಕೆನರಾ ಕಾಲೇಜ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ರಾಮಚಂದ್ರ ಆರ್ ಕಾಮತ್, ಉಪಾಧ್ಯಕ್ಷರಾದ ಶ್ರೀ ದಿನಕರ ಎಮ್ ಕಾಮತ್, ಕಾರ್ಯಾಧ್ಯಕ್ಷರಾದ ಶ್ರೀ ಹನುಮಂತ ಕೆ ಶಾನಭಾಗ, ಕಾರ್ಯದರ್ಶಿಗಳಾದ ಶ್ರೀ ಯಶವಂತ ವಿ. ಶಾನಭಾಗ, ಆಡಳಿತ ಮಂಡಳಿಯ ಸದಸ್ಯರು, ಕೌನ್ಸಿಲ್ ಸದಸ್ಯರು, ಪ್ರಾಚಾರ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
ವಿಸ್ಮಯ ನ್ಯೂಸ್, ಕುಮಟಾ