ಬಿಜಿಎಸ್ ಸೆಂಟ್ರಲ್ ಸ್ಕೂಲಿನಲ್ಲಿ ಜಿಲ್ಲಾಮಟ್ಟದ ದಸರಾ ವಾಲಿಬಾಲ್ ಮತ್ತು ಹ್ಯಾಂಡ್ ಬಾಲ್ ಪಂದ್ಯಾವಳಿ
ಕುಮಟಾ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಮಿರ್ಜಾನಿನ ಬಿಜಿಎಸ್ ಸೆಂಟ್ರಲ್ ಸ್ಕೂಲಿನ ಕ್ರೀಡಾಂಗಣದಲ್ಲಿ ಜಿಲ್ಲಾಪಂಚಾಯತ್ ಉತ್ತರ ಕನ್ನಡ, ಜಿಲ್ಲಾ ಯುವ ಸಬಲೀಕರಣ, ಕ್ರೀಡಾ ಇಲಾಖೆ, ಕಾರವಾರ , ತಾಲೂಕಾ ಪಂಚಾಯತ್ ಕುಮಟಾ ಹಾಗೂ ಬಿಜಿಎಸ್ ಸೆಂಟ್ರಲ್ ಸ್ಕೂಲ್, ಮಿರ್ಜಾನ್ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಮಟ್ಟದ ದಸರಾ ವಾಲಿಬಾಲ್ ಮತ್ತು ಹ್ಯಾಂಡ್ ಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು.
ಹಿಟ್ ಆ್ಯಂಡ್ ರನ್ : ಸ್ಥಳದಲ್ಲೇ ಬೈಕ್ ಸವಾರ ಸಾವು
ಜಿಲ್ಲಾ ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕರು ರವಿ ನಾಯ್ಕ ಅವರ ಮಾರ್ಗದರ್ಶನದಲ್ಲಿ ಜಿಲ್ಲಾಮಟ್ಟದ ದಸರಾ ವಾಲಿಬಾಲ್ ಮತ್ತು ಹ್ಯಾಂಡ್ ಬಾಲ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರೆಲ್ಲರೂ ಸೇರಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿರ್ಣಾಯಕರಾಗಿ ಆಗಮಿಸಿದ ರಾಘವೇಂದ್ರ ಗೌಡರವರು ಮಾತನಾಡಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶಿಕ್ಷಣದ ಜೊತೆಗೆ ಕ್ರೀಡೆಗಳಿಗೆ ಯಾವಾಗಲೂ ಪ್ರಾಶಸ್ತ್ಯವನ್ನ ನೀಡುತ್ತಾ ಬಂದಿದ್ದಾರೆ ಎಂದರು. ಅಲ್ಲದೇ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರಿಗೆ ಕ್ರೀಡೆಯ ಬಗ್ಗೆ ಇರುವ ವಿಶೇಷವಾದ ಪ್ರೀತಿಯನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
ಆಡಳಿತಾಧಿಕಾರಿ ಜಿ ಮಂಜುನಾಥರವರು ಸ್ವಾಮಿ ವಿವೇಕಾನಂದರ ವಿಚಾರಧಾರೆಗಳ ಬಗ್ಗೆ ತಿಳಿಸಿ ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಮುಖ್ಯ, ಸೋಲಿಗೆ ಕುಗ್ಗದೆ, ಗೆಲುವಿಗೆ ಹಿಗ್ಗದೆ ಸೋಲು-ಗೆಲುವನ್ನು ಕೀಡಾಮನೋಭಾವದಿಂದ ಸಮಾನವಾಗಿ ಸ್ವೀಕರಿಸಿ, ಸ್ವಸ್ಥ ಶರೀರದಲ್ಲಿ ಸ್ವಸ್ಥ ಮನಸು ನೆಲೆಸಿರುತ್ತದೆ. ನೀವು ಸಾಧನೆ ಮಾಡಬೇಕಾದರೆ ತುಂಬಾ ಪರಿಶ್ರಮ ಪಡಬೇಕು ಎಂದರು.
ಪ್ರಾoಶುಪಾಲರಾದ ಅರ್ಚನಾ ಭಟ್ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಪುರುಷ ಹಾಗೂ ಮಹಿಳೆಯರ ವಿಭಾಗದ ವಾಲಿಬಾಲ್ ಹಾಗೂ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ೧೨ ತಾಲೂಕಗಳ ತಂಡಗಳು ಭಾಗವಹಿಸಿದ್ದವು. ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಕುಮಟಾ ತಂಡ ಪ್ರಥಮ ಸ್ಥಾನ, ಶಿರಸಿ ತಂಡ ದ್ವಿತೀಯ ಸ್ಥಾನವನ್ನು, ಮಹಿಳೆಯರ ವಿಭಾಗದಲ್ಲಿ ಶಿರಸಿ ಪ್ರಥಮ, ಕುಮಟಾ ತಂಡ ದ್ವಿತೀಯ ಸ್ಥಾನ ಪಡೆದವು. ಪುರುಷರ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಶಿರಸಿ ತಂಡ ಪ್ರಥಮ ಸ್ಥಾನವನ್ನು, ಬಿಜಿಎಸ್ ಸೆಂಟ್ರಲ್ ಸ್ಕೂಲ್, ಮಿರ್ಜಾನ್, ಕುಮಟಾ ತಂಡ ದ್ವಿತೀಯ ಸ್ಥಾನವನ್ನು, ಮಹಿಳೆಯ ವಿಭಾಗದಲ್ಲಿ ಬಿಜಿಎಸ್ ಸೆಂಟ್ರಲ್ ಸ್ಕೂಲ್, ಮಿರ್ಜಾನ್, ಕುಮಟಾ ತಂಡ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನುಅಂಕೋಲಾ ತಂಡ ಪಡೆದುಕೊಂಡಿತು.
ವಿಸ್ಮಯ ನ್ಯೂಸ್, ಕುಮಟಾ