Follow Us On

WhatsApp Group
Important
Trending

ನಿವೃತ್ತ ಸರಕಾರಿ ನೌಕರನ ಮನೆಗೆ ಕನ್ನ: ದೇವಸ್ಥಾನದ ಕಾಣಿಕೆ ಡಬ್ಬಿ ಹೊತ್ತೊಯ್ದ ಕಳ್ಳರು

ಅಂಕೋಲಾ : ಪಟ್ಟಣ ವ್ಯಾಪ್ತಿಯ ಕೇಣಿ ರಸ್ತೆಗೆ ಹೊಂದಿಕೊಂಡಿರುವ ಕಲಭಾಗ ಹೊನ್ನೇಕೇರಿ ವ್ಯಾಪ್ತಿಯ ನಿವೃತ್ತ ಸರಕಾರಿ ನೌಕರರೊಬ್ಬರ ಮನೆಯಲ್ಲಿ ಭಾರೀ ಪ್ರಮಾಣದ ಕಳ್ಳತನವಾಗಿದ್ದು, ಚಾಲಾಕಿ ಕಳ್ಳರು ನಗದು ಮತ್ತು ಬಂಗಾರ ಸೇರಿದಂತೆ ಲಕ್ಷಾಂತರ ಮೌಲ್ಯದ ಸ್ವತ್ತನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಮೋಹನ ನಾರಾಯಣ ನಾಯಕ ಎನ್ನುವ ನಿವೃತ್ತ ಸರ್ಕಾರಿ ನೌಕರರ ಮನೆಯಲ್ಲಿ ದಿನಾಂಕ 28 – 09 – 2024 ರ ಬೆಳಗಿನ 4.30 ಗಂಟೆಯಿಂದ ಸಾಯಂಕಾಲ 7.00 ಗಂಟೆ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿದ್ದರು ಎನ್ನಲಾಗಿದೆ.

ಯುವಕ ದುರ್ಮರಣ: ಅಲೆಗಳ ಅಬ್ಬರಕ್ಕೆ ನಲುಗಿದ ಬೋಟ್ : ಅಡುಗೆ ಮಾಡುತ್ತಿದ್ದವ ಆಯ ತಪ್ಪಿ ಬಿಸಿ ಬಾಣಲೆಗೆ ಬಿದ್ದ

ಬೆಡರೂಮಿನ ಒಳಗಿನ ಗೋಡೆ ಕಪಾಟಿನ ಬಾಗಲನ್ನು ತೆರೆದು, ಅದರಲ್ಲಿದ್ದ ಅಂದಾಜು ಒಟ್ಟೂ ರೂ 3.60,000 ಕಿಮ್ಮತ್ತಿನ 4 ಬಂಗಾರದ ಬಳೆಗಳು, 1 ಲಕ್ಷ 75 ಸಾವಿರ ಅಂದಾಜು ಮೌಲ್ಯದ ಮಂಗಳ ಸೂತ್ರ ಕದ್ದೊಯ್ದಿದ್ದಾರೆ. ಇದೇ ವೇಳೆ ಇನ್ನೊಂದು ಬೆಡ್ ರೂಮಿನ ಗೋದ್ರೇಜ್ ಕಪಾಟ್ ಲಾಕರ್ ಮುರಿದು ಅದರಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳಾದ ಮಂಗಳ ಸೂತ್ರ (2), ಅಂದಾಜು ಕಿಮ್ಮತ್ತು 1 ಲಕ್ಷ 25 ಸಾವಿರ, ಬಂಗಾರದ ಕಿವಿಯೋಲೆ 3 ಜೊತೆ ಅಂದಾಜು ಕಿಮ್ಮತ್ತು 75 ಸಾವಿರ ಮತ್ತು ನಗದು ರೂ 50 ಸಾವಿರ ಸೇರಿ ನಗದು ಮತ್ತು ಅಭರಣ ಸೇರಿ ಒಟ್ಟೂ ಅಂದಾಜು 7 ಲಕ್ಷ 80 ಸಾವಿರ ಮೌಲ್ಯದ ಸ್ವತ್ತನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ.

ನಾಯಕ ದಂಪತಿಗಳು ಆರೋಗ್ಯ ತಪಾಸಣೆಗಾಗಿ ಪಕ್ಕದ ಜಿಲ್ಲೆಯ ಆಸ್ಪತ್ರೆಯೊಂದಕ್ಕೆ ಹೋಗಿ ಬರುವಷ್ಟರಲ್ಲಿ ಕಳ್ಳತನ ಕೃತ್ಯ ನಡೆದಿದ್ದು,ಇವೆಲ್ಲ ಗೊತ್ತಿರುವವರು ಯಾರೋ ಕಳ್ಳತನ ನಡೆಸಿರಬಹುದೇ ಎನ್ನಲಾಗುತ್ತಿದ್ದು, ಶಾನದಳ ಮತ್ತು ಬೆರಳಚ್ಚು ತಜ್ಞರ ತಂಡವೂ ಅಗಮಿಸಿ, ಸಾಕ್ಷ್ಯ ಪತ್ತೆಗೆ ಮುಂದಾಗಿದೆ. ಅಕ್ಕ ಪಕ್ಷದಲ್ಲಿರುವ ಯಾವುದಾರೂ ಸಿ.ಸಿ ಕೆಮರಾಗಳಲ್ಲಿ ಕಳ್ಳರ ಚಲನವಲನ ದೃಶ್ಯ ದಾಖಲಾಗಿರಬಹುದೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.

ಈ ಕಳ್ಳತನ ಕೃತ್ಯದ ಕುರಿತಂತೆ ಅಂಕೋಲಾ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪ್ರತ್ಯೇಕ ಇನ್ನೊಂದು ಪ್ರಕರಣದಲ್ಲಿ ಕಾಕರಮಠ ವ್ಯಾಪ್ತಿಯ ಪ್ರಸಿದ್ಧ ಜಟಗದೇವರ ಗುಡಿಯ ಲಾಕ್ ( ಬಿಜಾಗಾರ) ಮೀಟಿದ ಅದಾರೋ ಕಳ್ಳರು, ಸಣ್ಣ ಗರ್ಭಗುಡಿಯಲ್ಲಿದ್ದ ಹಿತ್ತಾಳೆಯ ಕಾಣಿಕೆ ಡಬ್ಬಿ ಕಳ್ಳತನ ಮಾಡಿ ಕದ್ದೊಯ್ದಿದ್ದಾರೆ. ಅದರಲ್ಲಿ ಸಾವಿರಾರು ರೂ ಭಕ್ತರು ಹಾಕಿದ್ದ ಕಾಣಿಕೆ ಹಣ ಇತ್ತೆಂದು ಹೇಳಲಾಗುತ್ತಿದೆ. ಪೊಲೀಸರು ಸ್ಥಳ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ. ಪ್ರಮುಖರಾದ ಭಾಸ್ಕರ ನಾರ್ವೇಕರ, ದರ್ಶನ ಪೈ ಮತ್ತಿತರದಿದ್ದರು.

ಈ ಎರಡು ಕಳ್ಳತನ ಕೃತ್ಯದ ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ. ಒಟ್ಟಿನಲ್ಲಿ ಇತ್ತೀಚೆಗೆ ಶಾಲಾ- ಕಾಲೇಜು ಕಳ್ಳತನ, ಬೈಕ್ ಕಳ್ಳತನ, ಅಂಗಡಿ ಕಳ್ಳತನ, ಮನೆಗಳ್ಳತನ, ದೇವಸ್ಥಾನ ಮತ್ತಿತರೆಡೆ ಕಳ್ಳತನ ಕೃತ್ಯ ಹೆಚ್ಚುತ್ತಿದ್ದು, ಪೊಲೀಸರು ಬೈಕ್ ಕಳ್ಳತನ ಮತ್ತಿತರ ಒಂದೆರಡು ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚಿರುವರಾದರೂ, ಇತರೆ ಪ್ರಕರಣಗಳನ್ನೂ ಸವಾಲಾಗಿ ಸ್ವೀಕರಿಸಿ,ಕಳ್ಳರ ಜಾಡು ಭೇದಿಸಿ ಯಾರೇ ಕಾದು ನೋಡಬೇಕಿದೆ. ಇದೇ ವೇಳೆ ಸಾರ್ವಜನಿಕರು ಸಹ,ತಮ್ಮ ನಗದು,ಆಭರಣ,ಬೈಕ್ ಮತ್ತಿತರ ಅಮೂಲ್ಯ ವಸ್ತುಗಳು ಕಳ್ಳತನವಾಗುವದನ್ನು ತಪ್ಪಿಸಲು ಹೆಚ್ಚಿನ ಮುಂಜಾಗ್ರತೆ ತೆಗೆದುಕೊಳ್ಳಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button