ಮುರ್ಡೇಶ್ವರ: ತಾಲೂಕಿನ ಮುರುಡೇಶ್ವರದ ಎಡಗಡೆಯ ಕಡಲ ತೀರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಅನುಮಾನದ ಮೇಲೆ ಮುರುಡೇಶ್ವರ ಠಾಣೆಯ ಪೋಲಿಸರು ಪಿ.ಎಸ್.ಐ ಹಣಮಂತ ಬಿರಾದಾರ್ ನೇತೃತ್ವದಲ್ಲಿ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಗಂಜಾ ಸೇವನೆ ಆರೋಪದ ಮೇಲೆ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿಯಲ್ಲಿ ಆಪಾದಿತನು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.
ನಿವೃತ್ತ ಸರಕಾರಿ ನೌಕರನ ಮನೆಗೆ ಕನ್ನ: ದೇವಸ್ಥಾನದ ಕಾಣಿಕೆ ಡಬ್ಬಿ ಹೊತ್ತೊಯ್ದ ಕಳ್ಳರು
ಕಾರವಾರದ ಸದಾಶೀವಗಡದ ಸಿಬರ್ಡ್ ಕಾಲೋನಿಯ ನಿವಾಸಿ ಚಾಲಕ ವೃತ್ತಿ ನಡೆಸುತ್ತಿರುವ ದಾವುದ್ (34) ಎಂಬಾತ ಬಂಧಿತ ವ್ಯಕ್ತಿ. ಮುರುಡೇಶ್ವರ ಪ್ರವಾಸಿ ತಾಣದ ವ್ಯಾಪ್ತಿಯಲ್ಲಿ ಇಂತಹ ಅನೈತಿಕ ಅಕ್ರಮ ಚಟುವಟಿಗೆಳು ಆಗಾಗ ಸದ್ದು ಮಾಡುತ್ತಿದೆ. ಕೆಲವೆ ಕೆಲವು ಜನರ ಹಣ ಮಾಡುವ ಸ್ವಾರ್ಥದ ಬಯಕೆಗಾಗಿ ಪೌರಾಣಿಕ ಹಿನ್ನೆಯನ್ನು ಹೊಂದಿರುವ ಹಿಂದುಗಳ ಪರಮ ಪವಿತ್ರ ಪ್ರವಾಸಿ ಸ್ಥಳದ ಹೆಸರು ಕೆಡುವಂತಾಗುತ್ತಿರುವುದು ನಿಜಕ್ಕೂ ಖೇದಕರ ಸಂಗತಿಯಾಗಿದೆ.
ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ