ಭಟ್ಕಳ: ಅಂಜುಮನ್ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ಪೂಜಾ ನಾಯ್ಕ ಇವರು ಪದವಿ ಕಲಾವಿಭಾಗದಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಎರಡು ಬಂಗಾರದ ಪದಕದೊಂದಿಗೆ ತೃತೀಯ ಶ್ರೇಣಿ ಪಡೆದಿದ್ದಾರೆ. ಧಾರವಾಡದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯದ 74ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕುಲಪತಿಗಳು ಹಾಗೂ ಉನ್ನತ ಶಿಕ್ಷಣ ಸಚಿವಡಾಕ್ಟರ್ ಎಂ ಸಿ ಸುಧಾಕರ್ ಪೂಜಾ ಅವರಿಗೆ ಬಂಗಾರದ ಪದಕ ಹಾಗೂ ಪ್ರಶಸ್ತಿ ಪತ್ರ ಪ್ರಧಾನ ಮಾಡಿದರು.
ಮೀನು ಮಾರುಕಟ್ಟೆಗೆ ಬಂದ ಯುವಕ ನಾಪತ್ತೆ: ದೂರಿನಲ್ಲಿ ಏನಿದೆ?
ಅಂದಹಾಗೇ ವಿದ್ಯಾರ್ಥಿನಿ ಪೂಜಾ ನಾಯ್ಕ ನಾಗರಾಜ ನಾಯ್ಕ ಮತ್ತು ಕುಸುಮಾ ನಾಯ್ಕ ದಂಪತಿಯ ಪುತ್ರಿಯಾಗಿದ್ದು ವಿದ್ಯಾರ್ಥಿನಿಯ ಈ ಶೈಕ್ಷಣಿಕ ಸಾಧನೆಗೆ ಕಾಲೇಜಿನ ಅಧ್ಯಕ್ಷರು ಪ್ರಾಂಶುಪಾಲರು ಮತ್ತು ಉಪನ್ಯಾಸಕ ಮಂಡಳಿ ಅಭಿನಂದಿಸಿದ್ದಾರೆ.
ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ