Follow Us On

WhatsApp Group
Important
Trending

ಎಲ್ಲೆಂದರಲ್ಲಿ ಕಸ ಎಸೆದಿರುವ ಅಂಗಡಿಗಳಿಗೆ ಬಿಸಿ ಮುಟ್ಟಿಸಿದ ನ್ಯಾಯಾಧೀಶರು: ಅಂಗಡಿಕಾರರಿಂದಲೇ ಕಸ ತೆಗೆಸಿ ಸ್ವಚ್ಛತೆ

ಹೊನ್ನಾವರ: ಸ್ವಚ್ಛತಾ ಹೀ ಸೇವಾ 2024ರ ಅಭಿಯಾನದಡಿ ತಾಲೂಕ ಕಾನೂನು ಸೇವಾ ಪ್ರಾಧಿಕಾರ ಅದ್ಯಕ್ಷತೆಯಲ್ಲಿ ಹೊನ್ನಾವರ ತಾಲೂಕಿನ ಕೋರ್ಟ್, ಎಲ್ಲಾ ಸರಕಾರಿ ಇಲಾಖೆ, ಕಾಲೇಜು ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದಿಂದ ಪಟ್ಟಣದ ಅಂಗಡಿಕಾರರಿಗೆ ಸ್ವಚ್ಛತಾ ಶ್ರಮದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಸ್ವಚ್ಛತೆಯೇ ಸೇವೆ ಎಂಬ ವಿಶೇಷ ಆಂದೋಲನದ ಪ್ರಯುಕ್ತ ಹೊನ್ನಾವರ ಕೋರ್ಟನಿಂದ ಪ್ರಾರಂಭವಾದ ಅಭಿಯಾನ ನ್ಯಾಷನಲ್ ಹೈವೆಯಿಂದ ಪಟ್ಟಣದ ಎಲ್ಲಾ ಬೀದಿಗಳಲ್ಲಿ ಸಂಚರಿಸಿತು.

Arecanut Price: ಅಡಿಕೆ ಧಾರಣೆ : 01 ಅಕ್ಟೋಬರ್ 2024: ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ಇನ್ನೂ ಎಲ್ಲೆಂದರಲ್ಲಿ ಕಸಕಡ್ಡಿಗಳನ್ನು ಹಾಕಿರುವ ಅಂಗಡಿಗಳಿಗೆ ಸ್ವಚ್ಚತೆಯ ಬಗ್ಗೆ ಜಾಗೃತೆ ಮೂಡಿಸಿ, ದಂಡ ವಿಧಿಸಲಾಯಿತು. ಕೆಲವೆಡೆ ಅಂಗಡಿಕಾರರಿoದಲೇ ಸ್ವಚ್ಛಗೊಳಿಸಲಾಯಿತು. ಪ್ಲಾಸ್ಟಿಕ, ಕಸಕಡ್ಡಿ, ತ್ಯಾಜ್ಯಗಳನ್ನು ಪಟ್ಟಣ ಪಂಚಾಯತ ಸಿಬ್ಬಂದಿಗಳಿAದ ವಾಹನದಲ್ಲಿ ವಿಲೇವಾರಿ ಮಾಡಲಾಯಿತು.

ಈ ಸಂದರ್ಭದಲ್ಲಿ ಸಿನೀಯರ್ ಡಿವಿಷನ್, ಸೀನಿಯರ್ ನ್ಯಾಯಾಧೀಶರಾದ ಚಂದ್ರಶೇಖರ ಮಾತನಾಡಿ ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬನ ನಾಗರೀಕರ ಕರ್ತವ್ಯವಾಗಿದೆ., ಕೇವಲ ಒಂದು ದಿನ ಸ್ವಚ್ಛವಾಗಿಡದೇ ಪ್ರತಿದಿನ ಸ್ವಚ್ಛವಾಗಿಟ್ಟಲ್ಲಿ ಮಾತ್ರ ಸ್ವಚ್ಛ ನಗರವಾಗಲು ಸಾಧ್ಯವಿದೆ. ಕೇವಲ ಪಟ್ಟಣ ಪಂಚಾಯತನವರು ಮಾತ್ರ ಸ್ವಚ್ಛವಾಗಿಡಲು ಸಾಧ್ಯವಿಲ್ಲ. ನಾಗರೀಕರು ರಸ್ತೆಯಲ್ಲೋ ಅಥವಾ ಎಲ್ಲೆಂದರಲ್ಲೇ ಕಸವನ್ನು ಬಿಸಾಕದೇ ಹಸಿ ಕಸ ಹಾಗೂ ಒಣಕಸವನ್ನು ಬೇರ್ಪಡಿಸಿ ಪಟ್ಟಣ ಪಂಚಾಯತ ವಾಹನಗಳಿಗೆ ಹಾಕಬೇಕು. ನಮ್ಮ ಊರು, ನಮ್ಮ ಮನೆ, ಅಂಗಡಿಗಳನ್ನು ಸ್ವಚ್ಛವಾಗಿಟ್ಟು, ಪರಿಸರ ಸ್ವಚ್ಚವಾಗಿಡೋಣ ಎಂದು ಕರೆಕೊಟ್ಟರು.

ಈ ವೇಳೆ ಕಸವನ್ನು ಎಲ್ಲೆಂದರಲ್ಲಿ ಎಸೆದ 79 ಲಘು ಪ್ರಕರಣಗಳನ್ನು ದಾಖಲಿಸಲಾಯಿತು. ಕಾರ್ಯಕ್ರಮದಲ್ಲಿ ಸರಕಾರಿ ಇಲಾಖೆಯ ಸಿಬ್ಬಂದಿವರ್ಗ, ಕಾಲೇಜು, ಇತರ ಸಂಘಸoಸ್ಥೆಯವರು ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Back to top button