Important
Trending

ನಿಯಂತ್ರಣ ತಪ್ಪಿ ಮುಗುಚಿದ ಟ್ಯಾಂಕರ್! ಚಾಲಕ ಪ್ರಾಣಾಪಾಯದಿಂದ ಪಾರು

ಭಟ್ಕಳ: ತಾಲೂಕಿನ ಮೂಡಭಟ್ಕಳದ ಸೇತುವೆ ಬಳಿ ಟ್ಯಾಂಕರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಮುಗುಚಿಬಿದ್ದ ಘಟನೆ ಸಂಭವಿಸಿದೆ. ಮಧ್ಯರಾತ್ರಿಯ ಸಮಯಕ್ಕೆ ಟ್ಯಾಂಕರ್ ಗೇರುಬೀಜದ ತೈಲ ತುಂಬಿಸಿಕೊoಡು ಮಂಗಳೂರು ಕಡೆಯಿಂದ ಹರಿಯಾಣಕ್ಕೆ ಪ್ರಯಾಣಿಸುತ್ತಿದ್ದು ವೇಗ ತಡೆಯ ಕಾರಣಕ್ಕೆ ಮುಂದಿರುವ ವಾಹನ ಬ್ರೇಕ್ ಹಾಕಿದ್ದರಿಂದ ಟ್ಯಾಂಕರ್ ಚಾಲಕ ಕೂಡ ತಕ್ಷಣಕ್ಕೆ ಬ್ರೇಕ್ ಹಾಕಿದ ಪರಿಣಾಮವಾಗಿ ವಾಹನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿರುವ ಸುರಕ್ಷಾ ತಡೆಯನ್ನು ದಾಟಿ ಉರುಳಿ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಈ ಭಾಗದಲ್ಲಿ ಅತೀ ಹೆಚ್ಚಿನ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು. ಇದಕ್ಕೆ ಐ.ಆರ್.ಬಿ ಕಂಪನಿ ನಡೆಸುತ್ತಿರುವ ಅವೈಜ್ಞಾನಿಕ ಕಾಮಗಾರಿ ಕೂಡ ಕಾರಣವಾಗಿದೆ ಎಂಬುದು ಸ್ಥಳೀಯರ ಅಂಬೋಣ.

ಮೆಸೇಜ್ ಕಳುಹಿಸಿ ಮನೆ ಬಿಟ್ಟು ಹೋದ ಯುವಕ: ಆ ಸಂದೇಶದಲ್ಲಿ ಏನಿದೆ ನೋಡಿ?

ಇದಕ್ಕೆ ಸಾಕ್ಷಿ ಎಂಬoತೆ ದಕ್ಷಿಣದಿಂದ ಬರುವ ವಾಹನಗಳಿಗೆ ನಾಲ್ಕು ಪಥದ ರಸ್ತೆಯು ಮುಗಿದು ಒಂದು ಪಥದ ರಸ್ತೆ ಎದುರಾಗುತ್ತದೆ ಮತ್ತು ಉತ್ತರದಿಂದ ದಕ್ಷಿಣದ ಕಡೆಗೆ ಚಲಿಸುವ ವಾಹನಗಳಿಗೆ ತಕ್ಷಣಕ್ಕೆ ಒಂದು ಪಥದಿಂದ ನಾಲ್ಕು ಪಥದ ರಸ್ತೆ ಎದುರಾಗುವ ಕಾರಣ ಚಾಲಕರು ಗೊಂದಲಕ್ಕೆ ಒಳಗಾಗಿ ವಾಹನ ಅಪಘಾತಕ್ಕೆ ಇಡಾಗುತ್ತಿದೆ. ಅಷ್ಟೇ ಅಲ್ಲದೇ ಈ ಜಾಗದಲ್ಲಿ ತಿವೃ ತಿರುವು ಕೂಡ ಇದ್ದು ಪೇಟೆ ಮತ್ತು ಮುಟ್ಠಳ್ಳಿ ಭಾಗವನ್ನು ಸಂಪರ್ಕಿಸುವ ರಸ್ತೆ ಕೂಡ ಹಾದು ಹೋಗಿದ್ದು ಸರ್ಕಲ್ ನಲ್ಲಿ ವಾಹನ ದಟ್ಟಣೆ ಸಹಜವಾಗಿ ಇರುವ ಕಾರಣಕ್ಕೆ ಇಂತಹ ಅಪಘಾತಗಳು ಮೇಲಿಂದ ಮೇಲೆ ಸಂಭವಿಸುತ್ತಿದೆ.

ಉಡುಪಿ ಜಿಲ್ಲೆ ಮುಗಿಯುವವರೆಗೂ ಅಂದರೆ ಉತ್ತರ ಕನ್ನಡದ ಗಡಿಭಾಗ ಗೊರಟೆಯವರೆಗೂ ರಸ್ತೆ ಕಾಮಗಾರಿಯ ಜತೆ ಜತೆಗೆ ಫ್ಲೈ ಓವರ್, ಅಂಡರ್ ಪಾಸ್, ಸರ್ವಿಸ್ ರೋಡ್ ಗಳು ನಿರ್ಮಾಣಗೊಂಡಿದ್ದು ಉತ್ತರ ಕನ್ನಡ ಭಾಗಕ್ಕೆ ಕಾಲಿಡುತ್ತಿದ್ದಂತೆ ಅವಶ್ಯಕತೆ ಇರುವ ಭಾಗಗಳಲ್ಲಿ ಇಂತಹ ಕಾಮಗಾರಿಗಳು ನಡೆಸದೆ ಐ.ಆರ್.ಬಿ ಹಾಗೂ ನ್ಯಾಷನಲ್ ಹೈವೆ ಪ್ರಾಧಿಕಾರ ಅಕ್ಷರಶಃ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಜನರು ಐ.ಆರ್.ಬಿ ಕಂಪನಿಯನ್ನು ಶಪಿಸುತ್ತಿದ್ದಾರೆ. ಒಟ್ಟಿನಲ್ಲಿ ಇಗಲಾದರೂ ಐ.ಆರ್.ಬಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಉತ್ತರ ಕನ್ನಡ ಭಾಗದ ಚತುಷ್ಪದ ಹೆದ್ದಾರಿಯಲ್ಲಿ ನಡೆದ ಅವೈಜ್ಞಾನಿಕ ಕಾಮಗಾರಿಯನ್ನು ಸರಿಪಡಿಸಿ ಆದಷ್ಟು ಬೇಗ ಕಾಮಗಾರಿ ಮುಗಿಸಿ ಜನರ ಪ್ರಾಣದ ಜತೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕಾಗಿದೆ.

ವಿಸ್ಮಯ ನ್ಯೂಸ್ ಈಶ್ವರ್ ನಾಯ್ಕ ಭಟ್ಕಳ

Back to top button